ಆಯುಕ್ತರ ವಿರುದ್ಧ ಸಿಡಿದೆದ್ದ ಮೇಯರ್ ಗ್ಯಾಂಗ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.23: ಈ ವರೆಗೂ ಆಂತರಿಕವಾಗಿ ಹೊಗೆಯಾಡಿಕೊಂಡಿದ್ದ ಇಲ್ಲಿನ ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಮೇಯರ್ ಹಾಗೂ ಅವರ ಗ್ಯಾಂಗಿನ ಶೀಥಲ ಸಮರ ಇಂದು ಬಹಿರಂಗಗೊಂಡಿದೆ.
ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ವಿರುದ್ಧ ಪಾಲಿಕೆಯ ಆವರಣದಲ್ಲಿಯೇ ಇಂದು ಮಧ್ಯಾಹ್ನ ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯುಡು, ಉಪಮೇಯರ್ ಮಾಲನ್ ಬೀ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ರಾಮಾಂಜಿನೇಯಲು, ಸದಸ್ಯರುಗಳಾದ ವಿ.ಕುಬೇರ ಮತ್ತು ಪಾಲಿಕೆ ಸದಸ್ಯ ಮತ್ತು ಪಾಲಿಕೆ ಸದಸ್ಯೆಯರ ಪತಿಯಂದಿರು ಸೇರಿ ಆಯುಕ್ತರ ವಿರುದ್ಧ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು.
 ಕಾರಣ
ಇಂದು ನಗರದಲ್ಲಿ ಪ್ಲಾಸ್ಟಿಕ್ ಬ್ಯಾನ್ ಸೇರಿದಂತೆ ಆರೋಗ್ಯ ವಿಭಾಗದ ವಿವಿಧ ವಿಷಯಗಳ ಕುರಿತು 11 ಗಂಟೆಗೆ ಅಧಿಕಾರಿಗಳೊಂದಿಗೆ ಸಭೆ ಕರೆಯಲಾಗಿತ್ತು.
ಸಭೆಗಾಗಿ ಮೇಯರ್, ಉಪಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷರು ಕಾದುಕೊಳ್ಳಿತ್ತಿದ್ದರು. 12 ಗಂಟೆಯಾದರೂ ಆಯುಕ್ತರು ಬರದೆ ಸಭೆ ಆರಂಭವಾಗದ ಕಾರಣ ಮೇಯರ್ ಗ್ಯಾಂಗ್ ಹೊರ ಹೋಗಿ ಬಂದರು.
ಅಷ್ಟರಲ್ಲಿ ಆಯುಕ್ತರು ಸಭೆ ಆರಂಭಿಸಿದ್ದರು.
ಹೊರ ಹೋಗಿ ಬಂದ ಮೇಯರ್ ಅವರನ್ನು ಮೇಯರ್ ಛೇಂಬರ್ ಗೆ ಬಂದು ಆಯುಕ್ತರು ಸಭೆಗೆ ಆಹ್ವಾನಿಸಲಿಲ್ಲವಂತೆ. ಅದಕ್ಕಾಗಿ ಕೋಪಗೊಂಡ ಮೇಯರ್ ಗ್ಯಾಂಗ್ ಕಮೀಷನರ್ ಡೌನ್ ಡೌನ್ ಎಂದು ಪ್ರತಿಭಟನೆಗೆ ಮುಂದಾಯಿತು.
ಆಗ ಆಗಮಿಸಿದ ಆಯುಕ್ತರು ಸಭೆಗೆ ನಿಮಗೆ ಮುಕ್ತ ಆಹ್ವಾನವಿದೆ. ನೀವು ಬರದೆ ಹೊರಗಡೆ ಇದ್ದರೆ ಏನ್ನು ಮಾಡುವುದು, ಡಿಸಿಯವರು ಸಭೆಗೆ ಹೋಗಿದ್ದರಿಂದ ನಾನು ಬರುವುದು ತಡವಾಯ್ತು ನಂತರ ಆರಂಭಿಸಿದೆ. ನೀವು ಬನ್ನಿ ಎಂದರು.
ಅವರ ಈ ಮಾತಿಗೆ ಮನ್ನಿಸದೆ ಪ್ರತಿಭಟನೆ ಮುಂದುವರಿಸಿದರು. ಮೇಯರ್ ರಾಜೇಶ್ವರಿ ಅವರು, ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ರಾಜೇಶ್ವರಿ,  ನಾವು ಒಂದು ತಾಸು ಕಾದಿದ್ದೆವು. ನಾವು 10 ನಿಮಿಷ. ಹೊರಗೆ ಹೋಗಿ ಬರುವುದರಲ್ಲಿ ನಮಗಾಗಿ ಅವರು ಕಾಯದೆ ಸಭೆ ಆರಂಭಿಸಿ ನಮಗೆ ಅಗೌರವ ತೋರಿಸಿದ್ದಾರೆ. ಇಂತಹ ಕಮೀಷನರ್ ನಮಗೆ ಬೇಡಾ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇದು ಬಹಿರಂಗ ವಿಷಯವಾದರೆ, ಆಂತರಿಕವಾಗಿ ಆಯುಕ್ತರನ್ನು ಮೇಯರ್ ಅವರು ತಮ್ಮ ಛೇಂಬರ್ ಗೆ ಕರೆದರೆ ಬರದೇ. ನೀವೇ ನಮ್ಮ ಛೇಂಬರ್ ಗೆ ಬನ್ನಿ ಎನ್ನುತ್ತಾರಂತೆ.
ಸಭೆ ನಿಗಧಿಪಡಿಸಿ, ಹಿಂದಿನ ಸಭೆಯ ನಡಾವಳಿಗಳ ಮೇಲೆ ಏನು ಕ್ರಮ ಜರುಗಿದೆ. ಕಾಮಗಾರಿಗಳ ಅನುಷ್ಠಾನ ಹೇಗಿದೆ. ಎನ್ನುವುದರ ಬಗ್ಗೆ ಆಯುಕ್ತರು ಸಮರ್ಪಕ ಉತ್ತರ ನೀಡುತ್ತಿಲ್ಲ. ಬರೀ ಅಧಿಕಾರಿಗಳ ಸಭೆ ನಡೆಸುತ್ತಲೇ ಇರುತ್ತಾರೆ. ಹಾಗಾದರೆ ಜನರ ಸಮಸ್ಯೆ ಬಗೆಹರಿಸುವುದು ಹೇಗೆ. ಕಾಂಗ್ರೆಸ್ ಪಕ್ಷದವರು ಉತ್ತಮ ಆಡಳಿತ ನೀಡುತ್ತಿಲ್ಲ ಎಂಬ ಕೆಟ್ಟ ಹೆಸರು ತರಿಸುವ ಹುನ್ನಾರ ನಡೆದಿದೆ ಎಂಬ ಮಾತುಗಳು ಪಾಲಿಕೆ ಆವರಣದಲ್ಲಿ ಕೇಳಿ ಬರುತ್ತಿವೆ.

Attachments area