
ಸಂಜೆವಾಣಿ ವಾರ್ತೆ:
ಕೊಟ್ಟೂರು, ಏ.09 ಪಟ್ಟಣದ ಡಾ. ತಿಪ್ಪೇಸ್ವಾಮಿ ವೆಂಕಟೇಶ್ ಜೆಡಿಎಸ್ ಪಕ್ಷವನ್ನು ತೊರೆದು ಆಮ್ ಆದ್ಮಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಮೊದಲು ಜೆಡಿಎಸ್ ಪಕ್ಷದಲ್ಲಿ ಸುಮಾರು ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿ ಪಕ್ಷದಲ್ಲಿ ಅಸಮಾಧಾನ ಗೊಂಡ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು .
ನಿನ್ನೆ ಬೆಂಗಳೂರಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾದ ಶ್ರೀ ಮುಖ್ಯ ಮಂತ್ರಿ ಚಂದ್ರು,ಪಕ್ಷದ ಉಪಾಧ್ಯಕ್ಷರಾದ ಶ್ರೀ ರುದ್ರಯ್ಯ ಹಿರೇಮಠ್, ಮುಖಂಡರಾದ ಶ್ರೀ ಟೆನಿಸ್ ಕೃಷ್ಣ , ಡಾ. ಹನುಮಂತಪ್ಪ ಉಪಸ್ಥಿತರಿದ್ದರು