ಆಮ್ಲಜನಕ ಸಿಲಿಂಡರ್ ಗಳು ನೆಲಕ್ಕೆ ಉರುಳಿ ತಪ್ಪಿದ ಅನಾಹುತ

ಹರಿಹರ ಮೇ 20 ನೆಲಕ್ಕೆ ಉರುಳಿದ ಬಿದ್ದ ಆಮ್ಲ ಜನಕ ಸಿಲಿಂಡರಗಳು ತಹಸೀಲ್ದಾರ್ ಮತ್ತು ಮೀನುಗಾರಿಕೆ ಇಲಾಖೆಯ ನಿರ್ದೇಶಕರಿಗೆ ಇತರರಿಗೆ  ಕಾಲಿಗೆ ಪೆಟ್ಟಾಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಗರದ ಹೊರವಲಯದಲ್ಲಿರುವ ಇಂಡಸ್ಟ್ರೀಯಲ್ ಏರಿಯಾದಲ್ಲಿ ಸದರ್ನ್ ಗ್ಯಾಸ್ ಲಿಮಿಟೆಡ್ ಘಟಕದಲ್ಲಿ ನಡೆದಿದೆ ನಿನ್ನೆ  ಮಧ್ಯಾಹ್ನ 2ಗಂಟೆ ಸುಮಾರಿನಲ್ಲಿ ಆಮ್ಲಜನಕ ಭರ್ತಿ ಮಾಡುವುದಕ್ಕೆ ಖಾಲಿ ಇರುವ ಸಿಲೆಂಡರಗಳನ್ನು ಜೋಡಣೆ ಮಾಡಿ ಅವುಗಳಿಗೆ ಆಮ್ಲಜನಕವನ್ನು ತುಂಬಿಸುವುದಕ್ಕೆ ಸಿದ್ಧತೆಯಲ್ಲಿದ್ದ ಇಂಥ ನೂರಾರು  ಸಿಲಿಂಡರ್ ಗಳು ನೆಲಕ್ಕೆ ಉರುಳಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರು ಯಾವುದೇ ಸಿಲಿಂಡರ್ ಗಳು ಸ್ಫೋಟವಾಗಲಿಲ್ಲ ಇದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ .ಖಾಲಿ ಸಿಲಿಂಡರ್ ಗಳು ನೆಲಕ್ಕೆ ಉರುಳುವ ಸಮಯದಲ್ಲಿ ತಹಸೀಲ್ದಾರ್ ಕೆ ಬಿ ರಾಮಚಂದ್ರಪ್ಪ ಇತರರು ಗೋಡಾನ್ ನಲ್ಲಿ ಆಮ್ಲಜನಕದ ಸಿಲಿಂಡರ್ ಗಳನ್ನು ಪರಿಶೀಲನೆ ಮಾಡುತ್ತಿದ್ದರು ಈ ಸಂದರ್ಭದಲ್ಲಿ 1ಖಾಲಿ ಸಿಲಿಂಡರ್ ಇನ್ನೊಂದು ಸಿಲೆಂಡರ್ ಗೆ ತಗುಲಿದ ಪರಿಣಾಮ ಗೋಡೋನ್ ನಲ್ಲಿ ನೂರಾರು ಸಿಲೆಂಡರ್ ಗಳು ಚೆಲ್ಲಾಪಿಲ್ಲಿಯಾಗಿ ನೆಲಕ್ಕೆ ಉರುಳಿದ ಪರಿಣಾಮ ತಹಸೀಲ್ದಾರ್ ಕಾಲಿಗೆ ಪೆಟ್ಟು ಬಿದ್ದ ಪರಿಣಾಮ ಅವರನ್ನು ದಾವಣಗೆರೆ ಸಿಟಿ ಸೆಂಟ್ರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದುಬಂದಿದೆ ಗೋದಾಮಿನ ಸಿಲಿಂಡರ್ ಗಳು ನೆಲಕ್ಕೆ ಉರುಳಿ ಬೀಳುತ್ತಿ ದ್ದಂತೆ ದೊಡ್ಡ ಪ್ರಮಾಣದಲ್ಲಿ ಸಿಲಿಂಡರ್ ಗಳು ಸ್ಫೋಟಗೊಂಡಿದೆ ಎಂದು ಅಕ್ಕಪಕ್ಕದ ಕೈಗಾರಿಕಾ ಕೇಂದ್ರದಲ್ಲಿ ಇರುವಂಥವರಿಗೆ ಶಬ್ದವಾಯಿತು ಎಂದು ಸ್ಥಳೀಯರು ಹೇಳಿದರು  ಆಮ್ಲಜನಕ ತುಂಬಿದ ಸಿಲಿಂಡರ್ ಗಳು ಏನಾದರೂ ಸ್ಫೋಟಗೊಂಡಿದ್ದರೆ ಭಾರೀ ಅನಾಹುತವೇ ಜರುಗುತ್ತಿತ್ತುಸದ್ಯ ದೇವರ ದಯದಿಂದ ಅಪಾಯ ತಪ್ಪಿದೆ ಎಂದು ಘಟಕ ಘಟಕದಲ್ಲಿ ಕೆಲಸ ಮಾಡುವ ಕಾರ್ಮಿಕರು ಸ್ಥಳೀಯ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಬಿ ಟಿ ಕುಮಾರಸ್ವಾಮಿ . ಉಪ ವಿಭಾಗದ ಅಧಿಕಾರಿ ಮಮತಾ ಹೊಸಗೌಡರ ಪ್ರೊಬೇಷನರಿ ಉಪ ವಿಭಾಗಾಧಿಕಾರಿ ವೀರೇಶ್ .ಸದರ್ನ್ ಗ್ಯಾಸ್ ಸಿಲಿಂಡರ್ ಘಟಕದ ಸಿಬ್ಬಂದಿ ವರ್ಗ ಇತರರ ಘಟನಾ ಸಂದರ್ಭದಲ್ಲಿ ಇದ್ದರು