ಆಮ್ಲಜನಕ ಸಾಗಾಣಿಕೆ ವಾಹನಗಳಿಗೆ ಪರವಾನಗಿ ವಿನಾಯ್ತಿ

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕು ತೀವ್ರಗೊಳ್ಳುತ್ತಿದೆ. ಎರಡನೇ ಅಲೆಯ ಭೀತಿ ಎದುರಾಗಿದೆ. ಈ ನಡುವೆ ಕೇಂದ್ರ ಸಕರ್‌ರವು, ಆಮ್ಲಜನಕ ಸಾಗಿಸುವ ವಾಹನಗಳಿಗೆ ೨೦೨೧ ರ ಸೆಪ್ಟೆಂಬರ್ ೩೦ ರವರೆಗೆ ಪರವಾನಗಿ ವಿನಾಯ್ತಿ ವಿಸ್ತರಿಸಿದೆ.
ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಎಂ.ಎಸ್.ಎಂ.ಎಸ್.ಇ. ಖಾತೆ ಸಚಿವ ನಿತಿನ್ ಗಡ್ಕರಿಯವರು ತಮ್ಮ ಟ್ವಿಟರ್ ಸಂದೇಶದಲ್ಲಿ ಈ ವಿಷಯ ತಿಳಿಸಿದ್ದಾರೆ. ’ಆಕ್ಸಿಜನರ್ ಸಿಲಿಂಡರ್ ಸಾಗಿಸುವ ವಾಹನಗಳಿಗೆ ಮೋಟಾರು ವಾಹನ ಕಾಯ್ದೆ ೧೯೮೮ ರ ಅನ್ವಯ ಸೆಪ್ಟೆಂಬರ್ ೩೦ ರವರೆಗೆ ಪರವಾನಗಿ ವಿನಾಯ್ತಿ ನೀಡಲು ಒಪ್ಪಿಗೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ. ’ಕೇಂದ್ರ ಸಕರ್‌ರದ ಈ ಕ್ರಮದಿಂದ ರಾಜ್ಯಗಳ ನಡುವೆ ಆಮ್ಲಜನಕ ಸಾಗಾಣೆಗೆ ಸಾಕಷ್ಟು ಅನುಕೂಲವಾಗಲಿದೆ. ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ದ ನಮ್ಮ ಹೋರಾಟ ಬಲಪಡಿಸುತ್ತದೆ’ ಎಂದು ಸಚಿವರು ಹೇಳಿದ್ದಾರೆ.
ಈ ನಡುವೆ, ವಾಹನ ನೊಂದಣಿ ಪ್ರಮಾಣ ಪತ್ರ ಸಲ್ಲಿಕೆ ವಿರುದ್ದ ವಾಹನ ನೊಂದಣಿಗೆ ಸಂಬಂಧಿಸಿದಂಥೆ ಮೋಟಾರು ವಾಹನ ತೆರಿಗೆಯಲ್ಲಿ ರಿಯಾಯ್ತಿ ನೀಡುವ ಕರಡು ಅಧಿಸೂಚನೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿದೆ. ಸಾರಿಗೆಯೇತರ ವಾಹನಗಳ ಸಂದರ್ಭದಲ್ಲಿ ಮೋಟಾರು ವಾಹನ ತೆರಿಗೆಯಲ್ಲಿ ಶೇ. ೨೦ ರಷ್ಟು ಮತ್ತು ಸಾರಿಗೆ ವಾಹನಗಳ ಸಂದರ್ಭದಲ್ಲಿ ಶೇ. ೧೫ ರಷ್ಟು ರಿಯಾಯ್ತಿ ಇದೆ ಎಂದು
ಹೇಳಲಾಗಿದೆ.