ಆಮ್ಲಜನಕ ಸಾಂದ್ರಕ ಹಸ್ತಾಂತರ

ಹುಬ್ಬಳ್ಳಿ, ಜೂ 6: ಕೋವಿಡ್ ಹಿನ್ನೆಲೆಯಲ್ಲಿ ಕುಸುಗಲ್ ರಸ್ತೆಯ ನವೀನ ಪಾರ್ಕ್ ನಿವಾಸಿಗಳ ಸಂಘದ ವತಿಯಿಂದ ಎರಡು ಆಮ್ಲಜನಕ ಸಾಂದ್ರಕಗಳನ್ನು ನವಲಗುಂದ ಕ್ಷೇತ್ರದ ಜನರಿಗಾಗಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮುಖಾಂತರ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶಂಕರ ಪಾಟೀಲ ಮನೇನಕೊಪ್ಪ ವಿವಿಧ ದಾನಿಗಳು ಪ್ರಸಕ್ತ ಸಂದರ್ಭದಲ್ಲಿ ಹೆಚ್ಚು ರೈತಾಪಿ ಜನರನ್ನು ಹೊಂದಿರುವ ನವಲಗುಂದ ಕ್ಷೇತ್ರಕ್ಕೆ ನೀಡುತ್ತಿರುವುದು ಶ್ಲಾಘನೀಯ. ಈ ಕಾರ್ಯವನ್ನು ಕ್ಷೇತ್ರದ ಜನ ಎಂದೂ ಮರೆಯಲ್ಲ ಎಂದರು.

ನವೀನ ಪಾರ್ಕ್ ನಿವಾಸಿಗಳ ಸಂಘದ ಚೇರಮನ್ ಸಿಎ ಎನ್. ಎ. ಚರಂತಿಮಠ, ಉಪಾಧ್ಯಕ್ಷ ವೈದ್ಯನಾಥನ್, ಕಾರ್ಯದರ್ಶಿ ವಸಂತ ಹೊರಟ್ಟಿ, ಸಮಿತಿಯ ಸದಸ್ಯರಾದ ನಾರಾಯಣ ಹಬೀಬ, ಸುಭಾಸ ಬಾಗಲಕೋಟಿ, ಜಾನ್ ನವಲಗುಂದ ತಹಶಿಲ್ದಾರ ನವೀನ ಹುಲ್ಲೂರ, ಮುಂತಾದವರು ಉಪಸ್ಥಿತರಿದ್ದರು.
ಂಣಣಚಿಛಿhmeಟಿಣs ಚಿಡಿeಚಿ