ಆಮ್ಲಜನಕ ಯಂತ್ರಗಳ ಉಚಿತ ಸೇವೆಗೆ ಕೊಡುಗೆ

ದಾವಣಗೆರೆ.ಜೂ.೯;  ತನ್ ಜಿಮ್  ಸಮಿತಿ ವತಿಯಿಂದ 5ಆಮ್ಲಜನಕ ಯಂತ್ರಗಳನ್ನು ಉಚಿತವಾಗಿ ಸೇವೆ ನೀಡಲು ಖರೀದಿಸಲಾಗಿದೆ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.  ಜೆ ಇಮಾಮ್ ನಗರದಲ್ಲಿರುವ ಕಚೇರಿಯಲ್ಲಿ ಸಂಪರ್ಕಿಸಿ ರೋಗಿಗಳು ವೈದ್ಯರ ಶಿಫಾರಸ್ಸು ಹಾಗೂ ಆಧಾರ್ ಕಾರ್ಡ್ ತೋರಿಸಿ ಇದರ ಸೇವೆಯನ್ನು ಪಡೆಯಬಹುದಾಗಿದೆ .ಸುಮಾರು ಹತ್ತು ಲೀಟರ್ ನ ಈ ಯಂತ್ರಗಳು 6ಲಕ್ಷ ರೂ ಬೆಲೆಬಾಳುತ್ತವೆ ಎಂದಿದ್ದಾರೆ. ಸಮಾರಂಭದಲ್ಲಿ ತಂಜೀಮ್ ಸಮಿತಿಯ ಸದಸ್ಯ ಆದ  ಅಬ್ದುಲ್ ಘನಿ ತಾಹಿರ್ ,ಅಯ್ಯೂಬ್ ಪೈಲ್ವಾನ್ ಹಾಗೂ ಲಿಯಾಕತ್ ಅಲಿ ರಜ್ವಿ ಆರಿಫ್ ಖಾನ್ -ಸಿರಾಜ್ ಅಹ್ಮದ್ ಹಾಗೂ ಸಯೀದ್ ಚಾರ್ಲಿ .ಅಬ್ದುಲ್ ಜಬ್ಬಾರ್ ದಾದಾಪೀರ್ ಜಾಬಿರ್ ಅಹ್ಮದ್   ಉಪಸ್ಥಿತಿ ಇದ್ದರು.