ಆಮ್ಲಜನಕ ಪೂರೈಕೆ ಸಾಧನ ತಯಾರಿಕೆ ಹೆಚ್ಚಿಸಲು ಪ್ರಧಾನಿ ಕರೆ

ನವದೆಹಲಿ, ಏ.16-ದೇಶಾದ್ಯಂತ ಕೋವಿಡ್-19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆ ಮಾಡುವ ಸಾಧನಗಳ ತಯಾರಿಕೆಯನ್ನು ಹೆಚ್ಚಳ ಮಾಡುವಂತೆ ಹೇಳಿದ್ದಾರೆ.

ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಸಮರ್ಪಕ ಆಮ್ಲಜನಕ ಸಾಧನಗಳ ಲಭ್ಯತೆಯ ಕುರಿತು ಇಂದು ಸಮಗ್ರ ಪರಿಶೀಲನೆ ನಡೆಸಿದರು.

ಸೋಂಕಿತರಿಗೆ ಚಿಕಿತ್ಸೆ ನೀಡುವ ಪ್ರಕ್ರಿಯೆಯಲ್ಲಿ ಆಮ್ಲಜನಕ ಪೂರೈಕೆ ಸಾಧನ ಪ್ರಮುಖ ಪಾತ್ರ ವಹಿಸಲಿವೆ. ಈ ಕಾರಣದಿಂದಾಗಿ ಉತ್ಪಾದನೆ ಹೆಚ್ಚಿಸುವಂತೆ ಪ್ರಧಾನಿಗಳು ಕರೆ ನೀಡಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.

ಆರೋಗ್ಯ, ಸ್ಟೀಲ್, ರಸ್ತೆ ಸಾರಿಗೆ ಕೈಗಾರಿಕಾ, ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಗಳಿಂದ ಮಾಹಿತಿ ಪಡೆದಿದ್ದಾರೆ ಎಂದು ಪ್ರಧಾನಿ ಕಚೇರಿ ವಿವರಿಸಿದೆ.