ಆಮ್ಲಜನಕ ಖರೀದಿಗೆ ಪ್ರಧಾನಿ ಕೇರ್ಸ್ ಗೆ ಕ್ರಿಕೆಟಿಗ ಪ್ಯಾಟ್ ಕಮಿನ್ಸ್ 50 ಸಾವಿರ ಡಾಲರ್ ನೆರವು

ನವದೆಹಲಿ, ಏ.,26- ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಮ್ಲಜನಕ ಕೊರತೆ ಎದುರಾಗಿದ್ದು ಅದರ ಖರೀದಿಗೆ ಆಸ್ಟ್ರೇಲಿಯಾ ಕ್ರಿಕೆಟಿಗ ಪ್ಯಾಟ್ ಕಮಿನ್ಸ್ 50 ಸಾವಿರ ಡಾಲರ್ ನೆರವನ್ನು ಪ್ರಧಾನಿ ಕೇರ್ಸ್ ನಿಧಿಗೆ ನೀಡಿದ್ದಾರೆ.

ಈ ಮ‌ೂಲಕ ವಿದೇಶದ ಕ್ರಿಕೆಟ್ ಆಟಗಾರ ಭಾರತದ ನೆರವಿಗೆ ಧಾವಿಸುವ ಮೂಲಕ ಅನೇಕ ಕ್ರಿಕೆಟಿಗರಿಗೆ ಮಾದರಿಯಾಗಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ – ಐಪಿಎಲ್‌ ನಲ್ಲಿ ಕೋಲ್ಕತಾ ನೈಟ್‌ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ‌. ಈ ಬಾರಿ ಐಪಿಎಲ್ ಹರಾಜಿನಲ್ಲಿ ದುಬಾರಿ ಬೆಲೆಗೆ ಹರಾಜಾಗಿದ್ದರು.

ಭಾರತೀಯ ಆಸ್ಪತ್ರೆಗೆ ಆಮ್ಲಜನಕ ಖರೀದಿ ಮಾಡುವ ಮೂಲಕ ಕೋವಿಡ್ ರೋಗಿಗಳಿಗೆ ನೆರವಾಗಲು ತಾವು ಪ್ರಧಾನಿ ನಿಧಿಗೆ ದೇಣಿಗೆ ನೀಡಿದ್ದೇನೆ ಇತರೆ ಐಪಿಎಲ್ ಆಟಗಾರರು ನೀಡಿ ಎಂದು ಅವರು ಸಹ ಆಟಗಾರರಲ್ಲಿ ಮನವಿ ಮಾಡಿದ್ದಾರೆ‌

ಭಾರತದ ಜನ ಅತ್ಯಂತ ಪ್ರೀತಿ ವಿಶ್ವಾಸವನ್ನು ತೋರುತ್ತಾರೆ.ಅದನ್ನು ತಾವು ಕ್ರಿಕೆಟ್ ಆಟಕ್ಕೆ ಭಾರತಕ್ಕೆ ಬಂದಾಗಲೆಲ್ಲಾ ಈ ಪ್ರೀತಿಯನ್ನು ಕಂಡಿದ್ದೇನೆ. ಇದೀಗ ಕೋವಿಡ್ ಸೋಂಕಿನಿಂದ ಭಾರತ ಸಮಸ್ಯೆಗೆ ಸಿಲುಕಿದೆ.ಇಂತಹ ಸಮಯದಲ್ಲಿ ಜನರ ನೆರವಿಗೆ ನಿಲ್ಲುವುದು ನಮ್ಮ ಕರ್ತವ್ಯ ಹೀಗಾಗಿ ಪ್ರತಿಯೊಬ್ಬರೂ ನೆರವು ನೀಡಿ ಎಂದು ಆಟಗಾರರಲ್ಲಿ ಅವರು ಮನವಿ ಮಾಡಿದ್ದಾರೆ‌

ಐಪಿಎಲ್ ಪಂದ್ಯಾವಳಿಯ ವೀಕ್ಷಣೆಗೆ ಜನರಿಗೆ ಅವಕಾಶ ಮಾಡಿಕೊಡದಿರುವುದು ಇಂತಹ ಸಂಕಷ್ಟದ ಸಮಯದಲ್ಲಿ ಭಾರತ ಸರ್ಕಾರದ ಕ್ರಮ ಸ್ವಾಗತಾರ್ಹ. ಮುಂದೆಯೂ ಇಂತಹ ಕಠಿಣ ಕ್ರಮ ಕೈಗೊಳ್ಳಿ ಎಂದು ಅವರು ಮನವಿ ಮಾಡಿದ್ದಾರೆ.

ಒಳ್ಳೆಯ ಕಾರಣಕ್ಕೆ ನೆರವಾಗಿ:.

ಕ್ರಿಕೆಟ್ ‌ಮೂಲಕ ದೇಶ ವಿದೇಶಗಳಲ್ಲಿ ಹೆಸರು ಹಣ ಮಾಡಲು ಸಹಕಾರಿಯಾಗಿದೆ. ಕೋವಿಡ್ ಇಡೀ ಜಗತ್ತಿಗೆ ಬಂದಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಒಳ್ಳೆಯ ಕಾರಣಕ್ಕಾಗಿ ದೇಣಿಗೆ ನೀಡಿ ಜನರನ್ನು ಉಳಿಸಲು ನೆರವಾಗೋಣ ಎಂದು ಎಂದು ಐಪಿಎಲ್ ಸೇರಿದಂತೆ ಇತರೆ ಕ್ರಿಕೆಟ್ ಆಟಗಾರರಿಗೆ ಅವರು ಮನವಿ ಮಾಡಿದ್ದಾರೆ.

ಭಾರತದ ಆಸ್ಪತ್ರೆಗೆ ಆಮ್ಲಜನಕ ಖರೀದಿಗೆ ತಾವು ದೇಣಿಗೆ ನೀಡಿದ್ದೇನೆ ನೀವು ಕೂಡ ದೇಣಿಗೆ ನೀಡಿ ಎಂದು ಆಸ್ಟ್ರೇಲಿಯಾದ ಆಟಗಾರ ಮನವಿ ಮಾಡಿದ್ದಾರೆ‌