ಆಮ್ಲಜನಕ ಕೊರತೆ ಅಮೃತಸರದಲ್ಲಿ ಆರು ಮಂದಿ ಸಾವು

ಅಮೃತಸರ, ಏ. 24- ಆಮ್ಲಜನಕದ ಕೊರತೆಯಿಂದಾಗಿ ಐದು ಮಂದಿ ಕೋವಿಡ್ ಸೋಂಕಿತರು ಸೇರಿಸಂತೆ ಆರು ಮಂದಿ ಮೃತಪಟ್ಟಟಿರುವ ಘಟನೆ ಇಲ್ಲಿನ ನೀಲಕಂಠ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದೆ.
ರಾಜಧಾನಿ ದೆಹಲಿಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಹಲವರು ಸಾವನ್ನಪ್ಪುತ್ತಿರುವ ಬೆನ್ನಲ್ಲೇ ಪಂಜಾಬ್ ನ ಅಮೃತಸರದಲ್ಲಿ ಇದೇ ರೀತಿಯ ದುರಂತ ಸಂಭವಿಸಿರುವುದು ಆತಂಕ ಸೃಷ್ಟಿಸಿದೆ.
ಮೃತಪಟ್ಟವರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಆಮ್ಲಜನಕ ಪೂರೈಸುವಂತೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾರೂ ನೆರವಿಗೆ ಧಾವಿಸಿಲ್ಲ ಎಂದು ನೀಲಕಂಠ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಈ ಘಟನೆ ಸಂಭವಿಸಿದ ಬಳಿಕವೂ ಕೇವಲ ಐದು ಸಿಲಿಂಡರ್ ಕಳುಹಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ದೂರಿದರು.