ಆಮ್ಲಜನಕ ಉತ್ಪಾದಿಸುವ ಲಕ್ಷಾಂತರ ಸಸಿಗಳು ಸಿದ್ಧ


ಲಕ್ಷ್ಮೇಶ್ವರ, ಜೂ11:ಸಮೀಪದ ಶೆಟ್ಟಿಕೆರಿ ಕೆರೆಯ ಆಸುಪಾಸಿನಲ್ಲಿ ಆಮ್ಲಜನಕದ ಸಾಂದ್ರಕಗಳು ಲಕ್ಷಾಂತರ ಸಂಗ್ರಹ ಇದೆ ಏನ್ರೀ ಇದೇನಿದು ನಗರಗಳಲ್ಲಿ ಆಮ್ಲಜನಕ್ಕಾಗಿ ಪರದಾಡುತ್ತಿದ್ದರೆ ಆಮ್ಲಜನಕದ ಸಾಂದ್ರತೆಗಳು ಲಕ್ಷಾಂತರ ಇವೆಯೆಂದು ಹೇಳುತ್ತೀರಲ್ಲಾ ಹೌದು ಇದು ನೈಸರ್ಗಿಕವಾಗಿ ಆಮ್ಲಜನಕ ಉತ್ಪಾದಿಸುವ ಲಕ್ಷಾಂತರ ಸಸಿಗಳು ಶೆಟ್ಟಿಕೆರಿ ನರ್ಸರಿಯಲ್ಲಿ ವಿವಿಧ ಜಾತಿಯ ಸಸಿಗಳು ಉತ್ಪಾದನೆಗಾಗಿ ಸಿದ್ಧಗೊಂಡಿವೆ.
ಪ್ರಸಕ್ತ ಮಳೆಗಾಲಕ್ಕಾಗಿ ನಾಟಿ ಮಾಡಲು ಬೇವು ಮಹಾಗನಿ, ಹೊಂಗೆ, ತಪಸಿ, ನೇರಳೆ, ಸಿಹಿ ಹುಣಸೆ, ಅರಳಿ ಆಲಾ, ಬಂಗಾಳಿ, ರೆಂಟ್ರೀ, ಗುಲ್ ಮೊಹರ್, ಶಿವನಿ, ತೇಗ, ಕಾಡ ಬಾದಾಮಿ, ಬಿದಿರು, ಕರಿ ಜಾಲಿ, ಅತ್ತಿ ಹಣ್ಣು, ನೀರು ಹಿಪ್ಪು, ಹೊಳೆ ದಾಸಾಳ ಸೇರಿದಂತೆ ಸಸಿಗಳನ್ನು ಬೆಳೆಯಲಾಗುತ್ತಿದೆ ಒಟ್ಟು 1.16 ಲಕ್ಷ ಸಸಿಗಳನ್ನು ಬೆಳೆಯಲಾಗಿದ್ದು ಇದರಲ್ಲಿ 30000 ಸಸಿಗಳನ್ನು ಎನ್‍ಆರ್‍ಇಜಿ ಯೋಜನೆಯಡಿ ಬೆಳೆಸಿದ್ದಾರೆ.
ಇನ್ನುಳಿದ 86000 ಸಸಿಗಳನ್ನು ಅರಣ್ಯ ಇಲಾಖೆಯ ಅನುದಾನದಲ್ಲಿ ಬೆಳೆಯಲಾಗಿದೆ. ಇಲ್ಲಿನ ಸಸಿಗಳನ್ನು ಪ್ರಸಕ್ತ ವರ್ಷದಲ್ಲಿಯೇ ರೈತರು ರಸ್ತೆಬದಿ ಶಾಲೆ ಮತ್ತಿತರ ಕಡೆ ನಾಟಿ ಮಾಡುವ ಮೂಲಕ ಹಸಿರಾಗಿಸಲು ಇಲಾಖೆ ಸಂಪೂರ್ಣ ಸಿದ್ಧಗೊಂಡಿದೆ.
ಈ ಕುರಿತು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಆರ್.ಹೆಚ್ ಮುಲ್ಲಾ ಅವರು ಪ್ರತಿಕ್ರಿಯಿಸಿ ಇಲಾಖೆಯು ಈಗಾಗಲೇ ಲಕ್ಷಾಂತರ ಸಸಿಗಳನ್ನು ನಾಟಿ ಮಾಡಲು ಸಿದ್ಧಗೊಂಡಿದ್ದು ಪರಿಸರ ಸಂರಕ್ಷಣೆಗಾಗಿ ನೈಸರ್ಗಿಕ ಆಮ್ಲಜನಕ ಉತ್ಪಾದನೆಗಾಗಿ ಜನರು ಇಲಾಖೆಯಲ್ಲಿ ಕೈಜೋಡಿಸಬೇಕಾಗಿದೆ. ಎಲ್ಲಿಯೂ ಮರಗಳನ್ನು ಕಡಿಯದಂತೆ ಜಾಗೃತಿ ಜನರಲ್ಲಿ ಮೂಡಬೇಕಾಗಿದೆ. ಒಂದು ಮರ ಲಕ್ಷಾಂತರ ಜನರ ಜೀವದ ಉಸಿರು ಆಮ್ಲಜನಕವನ್ನು ಉತ್ಪಾದನೆ ಮಾಡುತ್ತಿದೆ. ನೈಸರ್ಗಿಕ ಆಮ್ಲಜನಕದ ಈ ಸಾಂದ್ರಕಗಳನ್ನು ಬೆಳೆಸಿ ಪೆÇೀಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.