ಆಮ್ಲಜನಕ ಉತ್ಪಾದನೆ ಹೆಚ್ಚಳಕ್ಕೆ ಗಣಿ ಸಚಿವ ನಿರಾಣಿ ಕೈಗಾರಿಕೆಗಳಿಗೆ ಸೂಚನೆ

ಬೆಂಗಳೂರು, ಏ. ೨೨: ರಾಜ್ಯದಲ್ಲಿ ಇನ್ನು ಮುಂದೆ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ ಉದ್ಭವಿಸದು. ಸದ್ಯ ಉದ್ಯಮಗಳಿಗೆ ಸರಬರಾಜಾಗುತ್ತಿರುವ ಆಮ್ಲಜನಕವನ್ನು ಈಗ ಹೆಚ್ಚು ಆಸ್ಪತ್ರೆಗೆ ಪೂರೈಕೆ ಮಾಡಲು ಸರ್ಕಾರ ಮುಂದಾಗಿದೆ. ಉಕ್ಕು ಕಂಪನಿಗಳಿಗೆ ಅಮ್ಲಜನಕ ಉತ್ಪಾದನೆಯನ್ನು ಹೆಚ್ಚಿಸಲು ಸೂಚಿಸಿದೆ.

ಕೋವಿಡ್ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಆಗುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಉಕ್ಕು ಕಂಪನಿಗಳಿಗೆ ಸರಬರಾಜಾಗುವ ಆಮ್ಲಜನಕ ಪೂರೈಕೆಯನ್ನು ಕಡಿತಗೊಳಿಸಿ, ವೈದ್ಯಕೀಯ ಬಳಕೆಗೆ ಹೆಚ್ಚು ಪೂರೈಸಲು ಸಮ್ಮತಿಸಲಾಗಿದೆ ಎಂದು ಗಣಿ ಸಚಿವ ಮುರಗೇಶ ನಿರಾಣಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಉದ್ಯಮಗಳು ಕೂಡ ಇದಕ್ಕೆ ಸಮ್ಮತಿ ನೀಡಿವೆ. ಜನರ ತುರ್ತು ಆರೋಗ್ಯದ ಹಿನ್ನೆಲೆಯಲ್ಲಿ ಕೈಗಾರಿಕೆಗಳಿಗೆ ಪೂರೈಕೆಯಾಗುತ್ತಿದ್ದ ಅಮ್ಲಜನಕವನ್ನು ಕುಂಠಿತಗೊಳಿಸಲಾಗಿದೆ. ಜೊತೆಗೆ ಆಮ್ಲಜನಕ ಉತ್ಪಾದನೆಯನ್ನು ಹೆಚ್ಚಿಸಬೇಕೆಂದು ಎಂದು ತಿಳಿಸಿದ್ದಾರೆ.