ಆಮ್ಲಜನಕಯುಕ್ತ ಬಸ್‍ಗೆ ಚಾಲನೆ, ಸಾರ್ವಜನಿಕರಿಗೆ ಅನುಕೂಲ

ಆಳಂದ :ಮೇ.29: ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ 2ನೇ ಅಲೆಯಿಂದ ತಾಲ್ಲೂಕಿನಲ್ಲಿ ಗ್ರಾಮೀಣ ಭಾಗಗಳಲ್ಲಿ ಕೋವಿಡ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಶಾಸಕ ಗುತ್ತೇದಾರ ಅವರ 70ನೇ ಹುಟ್ಟು ಹಬ್ಬ ಪ್ರಯುಕ್ತ ಸಾರ್ವಜನಿಕರಿಗೆ ಅನಕೂಲವಾಗಲಿ ಎಂಬ ನಿಟ್ಟಿನಲ್ಲಿ ಆಮ್ಲಜನಕಯುಕ್ತ ಬಸ್‍ಗೆ ಸೇವೆಗೆ ಚಾಲನೆ ನೀಡಲಾಯಿತು.

ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ದೇಶಕ ಮಲ್ಲಿಕಾರ್ಜುನ ಜಿ.ತಡಕಲ್ ಅವರ ನೇತೃತ್ವದಲ್ಲಿ ಈ ಸಾರಿಗೆ ಬಸ್‍ನಲ್ಲಿ 5 ಬೆಡಗಳು 5 ಜಂಬೋ ಸಿಲಿಂಡರ್ ಅಳವಡಿಸಲಾಗಿದ್ದು ತುರ್ತು ಪರಿಸ್ಥಿತಿಯಲ್ಲಿ ಕೊರೊನಾ ಸೋಂಕಿತರಿಗೆ ಇದರಿಂದ ಅನಕೂಲವಾಗಲಿದೆ ಎಂದು ಶಾಸಕರ ಹುಟ್ಟು ಹಬ್ಬದ ಪ್ರಯುಕ್ತ ಸಾರ್ವಜನಿಕ ಆಸ್ಪತ್ರೆಗೆ ಹಸ್ಥಾಂತರ ಮಾಡಲಾಯಿತು. ಹುಟ್ಟು ಹಬ್ಬದ ಪ್ರಯುಕ್ತ ಬಡವರಿಗೆ ಹಣ್ಣು ಹಂಪಲು ವಿತರಣೆ ಮಾಡಿ ಮಾತನಾಡಿದ ಶಾಸಕ ಸುಭಾಷ ಆರ್. ಗುತ್ತೇದಾರ ಮಾತನಾಡಿದ ಅವರು ನನ್ನ ಹುಟ್ಟು ಹಬ್ಬದ ಪ್ರಯುಕ್ತ ಈಗಾಗಲೇ ಆಸ್ಪತ್ರೆಗೆ 15 ಜಂಬೋ ಸಿಲಿಂಡರ ಉಚಿತವಾಗಿ ಎಸ್.ಆರ್.ಜಿ ಫೌಂಡೇಶನ ವತಿಯಿಂದ ನೀಡಲಾಗಿದೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯವರು ಕೂಡಾ ಆಮ್ಲಜನಕಯುಕ ನಮ್ಮ ತಾಲ್ಲೂಕಿಗೆ ಕೊಟ್ಟಿದ್ದಾರೆ ಇದರಿಂದ ಸೋಂಕಿತರಿಗೆ ತಕ್ಷಣ ಚಿಕಿತ್ಸೆ ಸಿಗಲಿದೆ ಎಂದರು. ಇದನ್ನು ಮಾದನಹಿಪ್ಪರಗಾ, ನಿಂಬರ್ಗಾ, ನರೋಣಾ, ಖಜೂರಿ ಹೋಬಳಿ ಕೇಂದ್ರಗಳಿಗೆ ಈ ವಾಹನ ಸಂಚರಿಸಿ ಕೋವಿಡ ಸೋಂಕಿತರಿಗೆ ವರದಾನವಾಗಲಿದೆ. ನಾವು ಮಹಾರಾಷ್ಟ್ರ ಗಡಿಯಲ್ಲಿ ಇರುವುದರಿಂದ ಕೊರೊನಾ ಸೋಂಕು ಹೆಚ್ಚಾಗುತ್ತಿದೆ ಈಗಾಗಲೇ ಹಳ್ಳಿಗಳಲ್ಲಿ ಕೊರೊನಾ ಹೆಚ್ಚಾಗಿದ್ದು ಇದನ್ನು ತಡೆಗಟ್ಟಲು ನಮ್ಮ ಅಭಿಮಾನಿಗಳು ಹಾಗೂ ಅಧಿಕಾರಿಗಳ ತಂಡದೊಂದಿಗೆ ತಡೆಗಟ್ಟಲು ಸಾಕಷ್ಟು ಶ್ರಮಿಸಲಾಗುತ್ತಿದೆ ಎಂದರು. ಡಾ.ವಿಶ್ವರಾಧ್ಯ ತಡಕಲ್ ಮಾತನಾಡಿ ಈ ಒಂದು ಆಮ್ಲಜನಕಯುಕ್ತ ವಾಹನದಿಂದ ತುರ್ತು ಪರಿಸ್ಥಿತಿಯಲ್ಲಿ ಸೋಂಕಿತರಿಗೆ ಆಕ್ಸಿಜನ್ ಸಿಗುವಂತೆ ಬಸ್ಸಿನಲ್ಲಿ ವ್ಯವಸ್ಥೆ ಮಾಡಲಾಗಿದ್ದು ಕೋವಿಡ ನಿಯಮದ ಪ್ರಕಾರ ಸೈನಿಟೈಜರ್ ಮಾಸ್ಕ ಇತರೆ ಸೌಲಭ್ಯಗಳು ಇದರಲ್ಲಿ ಇದ್ದರಿಂದ ಹಳ್ಳಿಯ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಈ.ಕ.ರ.ಸಾ.ಸಂಸ್ಥೆ ನಿರ್ದೇಶಕ ಮಲ್ಲಿಕಾರ್ಜುನ ಜಿ.ತಡಕಲ್, ಅಧಿಕಾರಿಗಳಾದ ಶೇಖ ಹುಸೇನಿ ಡಿ.ಎಂ.ಇ, ನಾಗರಾಜ ವಾರದ ಡಿ.ಎಂ.ಇ, ಆಳಂದ ಘಟಕ ವ್ಯವಸ್ಥಾಪಕ ರಮೇಶ ಹಾಗೂ ಎಸ್.ಪಿ.ದಲ್ಲು ಮತ್ತು ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಶಿವರಾಜ ರದ್ದೇವಾಡಿ, ಮಾಜಿ ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ, ಮಂಡಲ ಅಧ್ಯಕ್ಷ ಆನಂದ ಪಾಟೀಲ್, ಕೆಎಂಎಪ ನಿರ್ದೇಶಕ ಸಂತೋಷ ಗುತ್ತೇದಾರ, ಪುರಸಭೆ ಅಧ್ಯಕ್ಷೆ ರಾಜಶ್ರೀ ಖಜೂರಿ, ಉಪಾಧ್ಯಕ್ಷ ಈರಣ್ಣಾ ಹತ್ತರಕಿ ಹಾಗೂ ಮಲ್ಲಿಕಾರ್ಜುನ ಕಂದಗೂಳೆ, ಸುನೀಲ ಹಿರೋಳ್ಳಿಕರ, ಅಶೋಕ ಗುತ್ತೇದಾರ, ಶರಣು ಕುಮಸಿ, ಮಲ್ಲಣ್ಣಾ ನಾಗೂರೆ, ಶ್ರೀಮಂತ ನಾಮಣೆ, ಪ್ರಕಾಶ ಮಾನೆ, ಸೇರಿದಂತೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

ನಾಯಕತ್ವ ಬದಲಾವಣೆ ಇಲ್ಲ

ಕೋವಿಡ 2ನೇ ದೇಶವನ್ನು ಸಂಕಷ್ಟಕ್ಕೆ ದೂಡಿದೆ ಇಂಥ ಸಮಯದಲ್ಲೂ ಕೂಡಾ ಇದನ್ನು ತಡಗಟ್ಟು ಮಾನ್ಯ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪನವರ ಹಗಲು ಇರುಳು ಶ್ರಮಿಸುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಸಾಧ್ಯ ಇಲ್ಲ ಮುಖ್ಯಮಂತ್ರಿ ಬಿ.ಎಸ್.ಯಡ್ಡಿಯೂರಪ್ಪನವರು ಅವಧಿ ಪೂರ್ಣಗೊಳಿಸಲಿದ್ದಾರೆ. ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆಗೆ ನಾವು ಹೋಗುತ್ತಿದ್ದೇವೆ. ನಮ್ಮ ನಾಯಕರು ಅವರೇ. ಆಗಿದ್ದಾರೆ.

ಸುಭಾಷ.ಆರ್. ಗುತ್ತೇದಾರ, ಶಾಸಕರು ಆಳಂದ