ಆಮ್ಲಜನಕದ ಅವಶ್ಯಕತೆ ಇರುವವರು ಸದುಪಯೋಗ ಪಡಿಸಿಕೊಳ್ಳಿ: ದೋಖ

ಸೈದಾಪುರ:ಮೇ.21:ಕೋವಿಡ್-19 ಎರಡನೇ ಅಲೆಯ ಸಂದರ್ಭದಲ್ಲಿ ಗ್ರಾಮೀಣ ಭಾಗದ ಹೆಚ್ಚಿನ ಸೋಂಕಿತರಿಗೆ ಆಮ್ಲಜನಕ ಕೊರತೆ ಕಾಡುತ್ತಿರುವ ಹಿನ್ನಲೆಯಲ್ಲಿ ನಮ್ಮ ಟ್ರಷ್ಟ್ ವತಿಯಿಂದ ಒಟ್ಟು 13 ಆಮ್ಲಜನಕ ಸಾಂದ್ರಕಗಳನ್ನು ಸಾರ್ವಜನಿಕರ ಕೊಡುಗೆಯಾಗಿ ನೀಡಲಾಗಿದ್ದು ಇದರ ಸದೂಪಯೋಗವನ್ನು ಪಡೆದುಕೊಳ್ಳಬೇಕು ಎಂದು ಟ್ರಸ್ಟ್‍ನ ಅಧ್ಯಕ್ಷ ಶರಣಿಕಕುಮಾರ ದೋಖಾ ತಿಳಿಸಿದ್ದಾರೆ.

ಪಟ್ಟಣದಲ್ಲಿ ಪಾಶ್ರ್ವ ಪದ್ಮಾವತಿ ಗೋಶಾಲಾ ಟ್ಟಸ್ಟನಿಂದ ಆಮ್ಲಜನಕ ಸಾಂದ್ರಕಗಳನ್ನು ಮೊದಲನೇ ಹಂತವಾಗಿ ವಾತವರಣದಲ್ಲಿ ಇರುವ ಆಮ್ಲಜನಕವನ್ನು ಶುದ್ಧೀಕರಿಸಿ ರೋಗಿಗಳಿಗೆ ನೀಡಬಹುದಾದ ಮೂರು ಆಮ್ಲಜನಕ ಸಾಂಧ್ರಕಗಳನ್ನು ಉಚಿತವಾಗಿ ಸಾರ್ವಜನಿಕರ ಉಪಯೋಗಕ್ಕಾಗಿ ವೈದ್ಯರಿಗೆ ಹಸ್ತಾಂತರಿಸಿ ಮಾತನಾಡಿದರು. ಸೈದಾಪುರ ವಲಯದಲ್ಲಿರುವ ಒಟ್ಟು 30 ರಿಂದ 40 ಗ್ರಾಮದ ಜನರ ಬಳಕೆಗೆ ಉಚಿತವಾಗಿ ನೀಡತಿದ್ದೇವೆ. ನಂತರ ಟ್ರಷ್ಟ್‍ನ ಸದಸ್ಯೆ ಮತ್ತು ಹಿರಿಯ ನ್ಯಾಯವಾದಿ ಮಹಿಪಾಲರೆಡ್ಡಿ ದುಪ್ಪಲ್ಲಿ ಮಾತನಾಡಿ ಈ ಸಾಂಧ್ರಕಗಳು ಕೋವಿಡ್ ಸೋಂಕಿತರಿಗಷ್ಟೇ ಅಲ್ಲ, ಕೋವಿಡ್‍ನಿಂದ ಗುಣಮುಖರಾಗಿ ಮನೆಗೆ ಮರಳಿದ ಮೇಲೂ ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರಿಗೆ ವೈದ್ಯರ ಸಲಹೆ ಮೇರಿಗೆ ನೀಡಲಾಗುವುದು. ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ತಲೆದೋರಿದ ಕೂಡಲೇ ನಾವು ಈ ಆಕ್ಸಿಜನ್ ಸಾಂದ್ರಕಗಳನ್ನು ಖರೀದಿಗೆ ಬೇಡಿಕೆ ನೀಡಿದ್ದೇವೆ, ಆದರೆ ಅವುಗಳಿಗೆ ದೇಶಾದ್ಯಂತ ಹೆಚ್ಚಿನ ಬೇಡಿಕೆ ಇದ್ದ ಕಾರಣ ಈಗ 13ರಲ್ಲಿ ಮೊದಲನೆ ಹಂತವಾಗಿ ಎರಡು ಲಭ್ಯವಾಗಿದೆ ಮುಂದಿನ ಎರಡು -ಮೂರು ದಿನಗಳಲ್ಲಿ ಎಲ್ಲಾ ಆಮ್ಲಜನಕ ಸಾಂದ್ರಕಗಳು ಮತ್ತು ಒಂದು ವಾರದಲ್ಲಿ ಉಚಿತ ಆಮ್ಲಜನಕಯುಕ್ತ ಆಂಬುಲೇನ್ಸ್ ಸೇವೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಟ್ರಸ್ಟ್‍ನ ಸದಸ್ಯ ಡಾ. ಪ್ರಮೋದ ಕುಲಕರ್ಣಿ, ಕಿರಣಕುಮಾರ, ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಗಡದ್, ಸಂದೀಪಕುಮಾರ ದೋಖ ಸೇರಿದಂತೆ ಇತರರಿದ್ದರು.

ಬಡ ಗ್ರಾಮೀಣ ಜನರ ಕೊರೊನಾ ಸೋಂಕಿನಿಂದ ಆಮ್ಲಜನಕ ತೊಂದರೆ ಎದುರಿಸುತ್ತಿರುವವರಿಗೆ ಈ ಸಾಂಧ್ರಕಗಳು ಅವರ ಜೀವ ರಕ್ಷಣೆಗೆ ನೆರವಾಗುತ್ತವೆ. ಇದರಿಂದ ಆಕ್ಸಿಜನ್ ಕೊರತೆಯಿಂದ ಸಂಭವಿಸವ ಸಾವುಗಳನ್ನು ತಕ್ಕ ಮಟ್ಟಿಗೆ ತಡೆಯಬಹುದು. ಹಾಗೂ ಯಾರಿಗೆ ಆಮ್ಲಜನಕ ತೊಂದರೆಯನ್ನು ಎದುರಿಸುತ್ತಿದ್ದರೆ ಅವರು ನಮಗೆ ಸಂಪರ್ಕ ಮಾಡಿದರೆ ನಿಮ್ಮ ಮನೆ ಬಾಗಿಲಿಗೆ ಇದರ ಉಚಿತ ಸೇವೆ ನೀಡಲು ನಮ್ಮ ಟ್ರಷ್ಟ್‍ನ ಸದಸ್ಯರು ತಯಾರು ಮಾಡಿಕೊಂಡಿದ್ದಾರೆ. ಆದರಿಂದ ಕೊರೊನಾ ಬಗ್ಗೆ ಭಯ ಬೇಡ ಎಚ್ಚರಿಕೆ ಇರಲ್ಲಿ.

           ಡಾ.ಪ್ರಮೋದ ಕುಲಕರ್ಣಿ, ಸದಸ್ಯ   ಪಾಶ್ರ್ವ ಪದ್ಮಾವತಿ ಗೋಶಾಲಾ ಟ್ಟಸ್ಟ್ಟ್