ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗಳು ಪರದಾಡುತ್ತಿರುವ ಸಾರ್ವಜನಿಕರು

ಆಳಂದ ;ಮಾ.26: ಪಟ್ಟಣದ ಅಭಿವೃದ್ಧಿಗಾಗಿ ಶಾಸಕ ಸುಭಾಷ ಆರ್. ಗುತ್ತೇದಾರ ಅವರು ಸಾಕಷ್ಟು ಯೋಜನೆಗಳು ತಂದು ಶ್ರಮಿಸುತ್ತಿದ್ದರು ಕೂಡಾ ಇಲಾಖೆಯ ಅಧಿಕಾರಿಗಳ ನಿಲ್ಯಕ್ರ್ಷದಿಂದ ಕಾಮಗಾರಿಗಳು ಆಮೆಗತ್ತಿಯಲ್ಲಿ ನಡೆಯುತ್ತಿರುವುದರಿಂದ ಸಾರ್ವಜನಿಕರು ವ್ಯಾಪಾರಸ್ಥರು ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ.

ಪುರಸಭೆ ವ್ಯಾಪ್ತಿಯ ಎಸ್.ಎಫ್.ಸಿ ವಿಶೇಷ ಯೋಜನೆ ಅಡಿಯಲ್ಲಿ ಸುಮಾರು 2 ಕೋಟಿ ರೂ ಮೊತ್ತದಲ್ಲಿ ನಗರದಲ್ಲಿ ಒಳಚರಂಡಿ ಮತ್ತು ಶೀತಲಗೊಂಡ ಸೇತುವೆಗಳನ್ನು ತೆರವುಗೊಳಿಸಿ ನೂತನ ಸೇತುವೆ ನಿರ್ಮಾಣದ ಕಾಮಾರಿಗಳು ನಡೆಯುತ್ತಿದ್ದು. ಆದರೆ ಪಟ್ಟಣದ ಹೃದಯ ಭಾಗವಾದ ಗಣೇಶ ಚೌಕದಿಂದ ತಹಶೀಲ ಕಚೇರಿಗೆ ಮುಖ್ಯ ರಸ್ತೆಯ ದಾಕುಲ ಮಜೀದಿ ಹತ್ತಿರದ ಸೇತುವೆ ತೆರವುಗೊಳಿಸಿದ್ದರಿಂದ ಸುಮಾರು ವಾರ ಕಳೆದರೂ ಕಾಮಗಾರಿ ಪ್ರಾರಂಭವಾಗದೇ ಪರದಾಡುವಂತೆಹ ಪರಿಸ್ಥಿತಿಯಲ್ಲಿ ಸಾರ್ವಜನಿಕರು ದೈನದಿಂದ ಕೆಲಸಗಳಿಗೆ ಹೋಗಿ ಬರಲು ಶ್ರೀ ರಾಮ ಮಾರ್ಕೇಟದಿಂದ ರಜವಿ ರಸ್ತೆ ಮಾರ್ಗವಾಗಿ ತಹಶೀಲ ಕಚೇರಿಗೆ ಹೋಗುವಂತಹ ಸಮಸ್ಯೆ ಎದುರು ಆಗಿದೆ. ಪಟ್ಟಣದ ಸಂಪರ್ಕ ಕಡಿತಗೊಂಡರೂ ಕೂಡಾ ವಾರ್ಡಗೆ ಸಂಬಂಧಿಸಿದ ಪುರಸಭೆ ಸದಸ್ಯರು, ಇಲಾಖೆಯ ಅಧಿಕಾರಿಗಳು ಮತ್ತು ಕಾಮಗಾರಿ ಗುತ್ತಿಗೆದಾರರ ಚಕಾರ ಎತ್ತುತ್ತಿಲ್ಲಾ. ಜಿಲ್ಲೆಯ ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ಪಟ್ಟಣಕ್ಕೆ ಭೇಟಿ ನೀಡಿ ಆಮೆಗತ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಶ್ರೀಘ್ರದಲ್ಲಿಯೇ ಪೂರ್ಣಗೊಳಿಸುವರೇ ?.


ಎಸ್.ಎಫ್.ಸಿ ವಿಶೇಷ ಯೋಜನೆಯ ಕಾಮಗಾರಿಗಳು ಅಳತೆಯ ಪುಸಕ್ತದಂತೆ ಮಾಡಲು ಸೂಚಿಸಿದ್ದೇನೆ. ಆದರೆ ಕಾಮಗಾರಿಗಳು ಪ್ರಗತಿಯಲ್ಲಿವೆ ಕೆಲ ತಾಂತ್ರಿಕ ದೋಷಗಳಿಂದ ವಿಳಂಬವಾಗುತ್ತಿದೆ. ಶ್ರೀಘ್ರದಲ್ಲಿಯೇ ಕಾಮಗಾರಿ ಕೆಲಸ ಪ್ರಾರಂಭಿಸಲು ಗುತ್ತಿಗೆದಾರರಿಗೆ ತಾಕೀತು ಮಾಡುತ್ತೇನೆ.

     ಜಗದೀಶ ಸೇಡಂ, ಜೆಇ ಪುರಸಭೆ ಆಳಂದ

ಪಟ್ಟಣದ ಅಭಿವೃದ್ಧಿಗಾಗಿ ಶಾಸಕರು ಅನುದಾನ ತಂದರೂ ಕೂಡಾ ಪರಿಪೂರ್ಣವಾಗಿ ಕಾಮಗಾರಿಗಳು ಆಗುತ್ತಿಲ್ಲ. ಸುಮಾರು 10 ದಿನಗಳಿಂದÀ ಹಿಂದೆ ಸೇತುವೆ ತೆರವುಗೊಳಿಸಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇವರ ಲಕ್ಷಣ ನೋಡಿದರೇ ಇನ್ನೂ 3-4 ತಿಂಗಳೂ ಕಳೆದರು ಈ ಕಾಮಗಾರಿ ಮುಗಿಯುವ ಹಂತದಲ್ಲಿ ಇಲ್ಲ. ಇದೇ ರೀತಿ ವಿಳಂಬ ನೀತಿ ಅನುಸರಿಸಿದ್ದರೆ ಪಟ್ಟಣದ ಜನತೆಯೊಂದಿಗೆ ಪುರಸಭೆ ಮುಂದೆ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ.

    ಮಹಾಂತೇಶ ಸಣ್ಣಮನಿ ಕರವೇ ತಾಲ್ಲೂಕು ಅಧ್ಯಕ್ಷರು, ಆಳಂದ