ಆಮೀಷಗಳಿಗೆ ಒಳಗಾಗದೆ ಪಕ್ಷ ಬೆಂಬಲಿಸಲು ಮುಖಂಡರ ಕರೆ

 ದಾವಣಗೆರೆ. ನ.೧೯; ರಾಜಕೀಯ ವಿಕೇಂದ್ರೀಕರಣಕ್ಕೆ ಗ್ರಾ.ಪಂಗಳು ಮೊದಲ ಪಾತ್ರವಹಿಸುತ್ತವೆ ಅದಕ್ಕಾಗಿ ಮುಂಬರುವ ಪರಿಷತ್ ಚುನಾವಣೆಯಲ್ಲಿ  ಯಾವುದೇ ಆಮೀಷಗಳಿಗೆ ಒಳಗಾಗದೆ ಪಕ್ಷದ ಗೆಲುವಿಗೆ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.
ನಗರದ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿಂದು ಬಿಜೆಪಿ ಪಕ್ಷ ಏರ್ಪಡಿಸಿದ್ದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು ದಾವಣಗೆರೆಯಲ್ಲಿ ಜನಸ್ವರಾಜ್ ಯಾತ್ರೆ ಪ್ರಾರಂಭಗೊಂಡಿದೆ. ನಂತರ ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಸಾಗಲಿದೆ. ಗ್ರಾ.ಪಂ ಸದೃಢವಾದರೆ ಸರ್ಕಾರದ ವ್ಯವಸ್ಥೆ ಅಚ್ಚುಕಟ್ಟಾಗಿ ಇರುತ್ತದೆ.ಕಳೆದ ಎರಡು ಬಾರಿ ಸೋಲು ಕಂಡಿದ್ದೇವೆ ಈ ಬಾರಿ ಗೆಲುವಿಗೆ ಸಹಕರಿಸಬೇಕು.ಇದು ಪ್ರತಿಷ್ಠಿತ ಚುನಾವಣೆ.ಇಲ್ಲಿ ಗೆದ್ದು ಹೆಚ್ಚು ಕೆಲಸ ಮಾಡಬೇಕಿದೆ. ದಾವಣಗೆರೆಯ ನಾಲ್ಕು ಕ್ಷೇತ್ರ ಚಿತ್ರದುರ್ಗ ವ್ಯಾಪ್ತಿಯಲ್ಲಿ ಬರಲಿದೆ.ನಮ್ಮ ಅಭ್ಯರ್ಥಿ ಯಾರೇ ಆಗಲಿ ಅವರನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು. ದಾವಣಗೆರೆ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವ ಪಣತೊಟ್ಟಿದ್ದೇನೆ ಹಾಗೂ ಎಲ್ಲರ ಸಹಕಾರದಿಂದ ಅಭಿವೃದ್ದಿ ಮಾಡುತ್ತಿದ್ದೇನೆ ಜಿಲ್ಲಾಸ್ಪತ್ರೆಗೆ ಅವಶ್ಯಕವಾಗಿದ್ದ ಎಂಆರ್ ಐ ಸ್ಕ್ಯಾನ್,ಡಯಾಲಿಸಿಸ್ ಕಲ್ಪಿಸುವುದಾಗಿ ಆರೋಗ್ಯ ಸಚಿವರು ಹೇಳಿದ್ದಾರೆ.ಬೆಳೆ ಹಾನಿಯಿಂದ ರೈತರು ತೊಂದರೆಯಲ್ಲಿ ಸಿಲುಕಿದ್ದಾರೆ ಅವರಿಗೆ ಸೂಕ್ತ ಪರಿಹಾರ ನೀಡಲಾಗುವುದು.ಮೆಕ್ಕೆಜೋಳ, ಭತ್ತ ದ ಖರೀದಿ ಕೇಂದ್ರ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು.ಯಾವುದೇ ಆಮಿಷಗಳಿಗೆ ಒಳಗಾಗದೆ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕರಿಸಬೇಕು ಎಂದರು.
ಸಂಸದ ಜಿ.ಎಂ ಸಿದ್ದೇಶ್ವರ್ ಮಾತನಾಡಿ ಗ್ರಾ.ಪಂ ಸದಸ್ಯರ ಮತಗಳು ತುಂಬಾ ಮುಖ್ಯ ಪ್ರಧಾನಿ ಮೊದಿಯವರ ಗ್ರಾಮಸ್ವರಾಜ್ಯದ ಕನಸು ನನಸು ಮಾಡಲು ನೇರವಾಗಿ ಗ್ರಾಪಂ ಗಳಿಗೆ ಹೆಚ್ವಿನ ಅನುದಾನ ನೀಡಿದ್ದಾರೆ .ಪ್ರತಿ ಗ್ರಾ.ಪಂನಲ್ಲಿ ಫಲಾನುಭವಿಗಳಿಗೆ ಮನೆ,ನಿವೇಶನವನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನೀಡಲಾಗುತ್ತಿದೆ.
ಜಲಜೀವನ ಮೀಷನ್ ಮೂಲಕ ಪ್ರತಿ ಗ್ರಾ.ಪಂಗೂ ನೇರವಾಗಿ ನಲ್ಲಿ ನೀರು ಬರುವಂತೆ ಮಾಡಿದ್ದಾರೆ.ಪ್ರತಿ ರೈತ ಕುಟುಂಬಕ್ಕೆ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ನೆರವಾಗಿದ್ದಾರೆ. ಗ್ರಾ.ಪಂ ಗಳಿಗೆ ಸಿಮೆಂಟ್ ರಸ್ತೆ, ಚೆಕ್ ಡ್ಯಾಂ, ಅಂಗನವಾಡಿ ಸೇರಿದಂತೆ ಹಲವಾರು ಯೋಜನೆ ನೀಡಿದ್ದಾರೆ.ಗ್ರಾ. ಪಂಗಳ ಸದಸ್ಯರು  ಆಮಿಷಕ್ಕೆ ಒಳಗಾಗದೆ ಮತ ನೀಡಬೇಕು. ಇಂದು ಅಥವಾ ನಾಳೆ ಅಭ್ಯರ್ಥಿ ಘೋಷಣೆ ಯಾಗಲಿದೆ ಅವರ ಗೆಲುವಿಗೆ ಸಹಕರಿಸಬೇಕು
ಮತದಾನದ ವೇಳೆ ಸಾಕಷ್ಟು ಗೊಂದಲಗಳಾಗಿವೆ.ಕೇವಲ ಒಂದು ಗೆರೆ ಹಾಕುವ ಮೂಲಕ ಸೂಕ್ತವಾಗಿ ಮತ ಹಾಕಬೇಕು ಎಂದು ಅರಿವು ಮೂಡಿಸಿದರು. ಬಿಎಸ್ ವೈ ಸಾಕಷ್ಟು ಕೆಲಸ ಮಾಡಿದ್ದಾರೆ ಅವರ ನಂತರ ಬೊಮ್ಮಾಯಿ ಅಧಿಕಾರ ಬಂದ ಮೇಲೆ ರೈತರ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡಿದ್ದಾರೆ.ಅಂಗವಿಕಲರಿಗೆ ಕೊಡುಗೆ ನೀಡಿದ್ದಾರೆ.
ಅಮೃತ ಗ್ರಾಮ ಯೋಜನೆ ಮೂಲಕ ಹೈಟೆಕ್ ಗ್ರಾಮ ಮಾಡಲು ೫ ಗ್ರಾಮ ಆಯ್ಕೆ ಮೂಲಕ ಅನುದಾನ ನೀಡಲಾಗಿದೆ.ಎಲ್ಲಾ ಕಡೆ ಬಿಜೆಪಿ ಅಲೆ ಇದೆ
ಪಕ್ಷ ನಮ್ಮ ದೇವರು ತಾಯಿ ಎಂದು ತಿಳಿದು ಬಿಜೆಪಿ ಅಭ್ಯರ್ಥಿ ಗೆ ಮತ ನೀಡಬೇಕು ಎಂದರು.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ ಇತಿಹಾಸದಲ್ಲಿ ಬಿಜೆಪಿಗೆ ಒಂದು ಅವಕಾಶ ಲಭಿಸಿದೆ.ಇದನ್ನು ಸದುಪಯೋಗ ಮಾಡಿಕೊಳ್ಳಬೇಕು.ಯಾವುದೇ ಕಾಯಿದೆ ಅಥವಾ ಅಂಗೀಕಾರ ತಿದ್ದುಪಡಿಯಾಗ ಬೇಕಾದರೆ ಕೆಳಮನೆ ಹಾಗೂ ಮೇಲ್ಮನೆಯಲ್ಲಿ ಮಾತ್ರ ಸಾಧ್ಯ. ಈ ಬಾರಿ ಅವಕಾಶ ಇದೆ ಬಿಜೆಪಿ ಹೆಚ್ಚು ಸಂಖ್ಯೆ ಗಳಿಸಲು ಸಾಧ್ಯವಿದೆ .ಕಳೆದ ಬಾರಿ ೨೨ ಮತದಿಂದ ಸೋತಿದ್ದೇವೆ.ಈ ಚುನಾವಣೆ ಸ್ವಾಭಿಮಾನದ ಪ್ರಶ್ನೆಯಾಗಿದೆ ಎಂದರು. ಕಾಂಗ್ರೆಸ್ ದೇಶ ವಿಭಜನೆ ಮಾಡಲು ಹೊರಟಿದೆ. ಜಾತಿ ಮಧ್ಯೆ ವಿಷಬಿತ್ತುವುದು ಕಾಂಗ್ರೆಸ್ ಕೆಲಸ.ಆದರೆ ನಮ್ಮದು ಸಂಸ್ಕಾರವುಳ್ಳ ಪಕ್ಷ . ಹಿಂದೆ ಹಿಂದೂಸ್ತಾನ್ ಒಂದೇ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು ಆದರೆ ಇಂದು ಅಹಿಂದಾ ಎನ್ನುತ್ತಾರೆ. ಸಂವಿಧಾನದ ಮೂಲ‌ಹಕ್ಕುಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಯವರಿಗಿಂತ ದೊಡ್ಡ ಅಹೀಂದಾ ನಾಯಕರು ಬೇಕಾ.ಅವರು ಜಾತಿ ತಾರತಮ್ಯ ಮಾಡಲಿಲ್ಲ.ಎಲ್ಲರಿಗಿಂತ ಹೆಚ್ಚು ಅಧಿಕಾರ ನಡೆಸಿದ್ದಾರೆ. ವಿಶ್ವದ ಮಟ್ಟದ ನಾಯಕರಾಗಿದ್ದಾರೆ.  ಜಾತಿ ಬಗ್ಗೆ ಮಾತನಾಡಲಿಲ್ಲ.ಸಬ್ ಕಾ ವಿಕಾಸ್ ಎನ್ನುವ ಮೂಲಕ ಅಧಿಕಾರ ನಡೆಸಿದರು ಕಾಂಗ್ರೆಸ್ ಹಿಂದುಳಿದವರು, ಲಿಂಗಾಯತ, ಅಲ್ಪಸಂಖ್ಯಾತರನ್ನು ಒಡೆಯುವ ಕೆಲಸಮಾಡುತ್ತಿದ್ದಾರೆ. ಆದ್ದರಿಂದ ಯಾವ ಆಮೀಷಕ್ಕೂ ಲೆಕ್ಕಿಸದೇ ಪಕ್ಷ ಬೆಂಬಲಿಸಬೇಕು ಎಂದರು.ಈ ವೇಳೆ ಮೇಯರ್ ಎಸ್.ಟಿ ವಿರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ವಿರೇಶ್ ಹನಗವಾಡಿ, ಸಚಿವರುಗಳಾದ ಗೋಪಾಲಯ್ಯ,ಡಾ.ಕೆ ಸುಧಾಕರ್, ಸಂಸದ ಜಿ.ಎಂ ಸಿದ್ದೇಶ್ವರ್,ಶಾಸಕರುಗಳಾದ ಎಸ್.ಎ ರವೀಂದ್ರನಾಥ್,ಎಸ್ ವಿ ರಾಮಚಂದ್ರ, ಪ್ರೊ.ಲಿಂಗಯ್ಯ,ಮುಖಂಡರಾದ ಬಿ.ವೈ ವಿಜಯೇಂದ್ರ, ಮಹೇಶ್ ಟೆಂಗಿನಕಾಯಿ ಹಾಗೂ ಜಿಲ್ಲೆಯ ಮುಖಂಡರುಗಳು ಉಪಸ್ಥಿತರಿದ್ದರು.

ReplyReply to allForward