ಆಮಿಷ ಒಡ್ಡಿ ಮತ ಪಡೆಯಲು ಬಯಸುವ ವಿಧಾನಸಭಾ ಚುನಾವಣಾ ಅಭ್ಯರ್ಥಿಯನ್ನು ಅನರ್ಹ ಗೊಳಿಸಲು ಮನವಿ

ವಿಜಯಪುರ :ಎ.11: ನಮ್ಮ ದೇಶದ ಆಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ಉದ್ಘಾಟನೆಯಾಗುವುದರ ಒಳಗಾಗಿ ದೇಶದಲ್ಲಿ ಜಾತಿ ವ್ಯವಸ್ಥೆಗಳು ಹಾಗು ಅಧರ್ಮ ಬ್ರಷ್ಟ ವ್ಯವಸ್ತೇಯನ್ನು ಬೇರು ಸಮೇತ ಕಿತ್ತೋಗೆದು ಕಠಿಣ ಕಾನೂನು ಜಾರಿಗೊಳಿಸಿ ದೇಶದಲಲ್ಲಿ ಎಲ್ಲ ಸಮುದಾಯದ ಸಾರ್ವಜನಿಕರಿಗೆ ಸಂಪೂರ್ಣ ನ್ಯಾಯ ಸಮತ್ತದ ಶ್ರೀರಾಮ ಲಕ್ಷ್ಮಣರ ಆದರ್ಶವ್ಯಕ್ತಿತ್ವವನ್ನು ದೇಶದಲ್ಲಿ ಎಲ್ಲರೂ ಅಳವಡಿಸಿಕೊಂಡು ರಾಜರಾಜ್ಯ ನಿರ್ಮಿಸುವ ಕುರಿತು ಮತ್ತು ಜಿಲ್ಲೆಯ ಮತದಾರರಿಗೆ ಹಣ ಕಳಪೆ ಸರಾಯಿ, ಕುಕ್ಕರ್, ಸೀರೆ ಹಾಗೂ ಇನ್ನಿತರ ಆಮೀಪ್ಯ ಒಡ್ಡಿ ಮತ ಪಡೆಯಲು ಬಯಸುವ ವಿಧಾನಸಭಾ ಚುನಾವಣೆಯ ಅಭ್ಯರ್ಥಿ ಸ್ಥಾನದಿಂದ ಅನರ್ಹ ಗೋಳಿಸುವ ಕುರಿತು ಜಿಲ್ಲಾಧಿಕಾರಿಗಳ ಮುಖಾಂತರ ಚುನಾವಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಕ್ಷಣಾ ವೇಧಿಕೆ ಸ್ವಾಭಿಮಾನಿ ಬಣ ಜಿಲ್ಲಾ ಘಟಕ ವಿಜಯಪುರದ ಎಲ್ಲ ಪದಾಧಿಕಾರಿಗಳು ಮನವಿ ಮಾಡಿಕೊಳ್ಳುವುದೇನೆಂದರೆ, 10-04-2023 ರಂದು ರಾಜ್ಯಾದಂತ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಸದರಿ ಚುನಾವಣೆಗೆ ನಿಲ್ಲುವ ಕೆಲವು ಅಭ್ಯರ್ಥಿಗಳು ಜಿಲ್ಲೆಯ ಮತದಾರರಿಗೆ ಹಣ, ಕಳಪೆ ಸರಾಯಿ (ಬಡ ಸಾರ್ವಜನಿಕರ ಜೀವಕ್ಕೆ ಹಾನಿ): ಕುಕ್ಕರ್ ಸೀರೆ ಹಾಗೂ ಇನ್ನಿತರ ಆಮೀಷ ಒಡ್ಡಿ ಮತ ಪಡೆಯಲು ಬಯಸುವವರನ್ನು(ಗುರುತಿಸಿ, ವಿಧಾನಸಭೆ ಚುನಾವಣೆಯ ಅಭ್ಯರ್ಥಿ ಸ್ಥಾನದಿಂದ ಅನರ್ಹ ಗೊಳಿಸಬೇಕು, ಏಕೆಂದರೆ, ಭಾರತಾಂಬೆಯ ಕನ್ನಡಾಂಬೆಯ, ಎಲ್ಲ ಸಮುದಾಯದ ಸಾರ್ವಜನಿಕರ ನಿಜವಾದ ಸೇವೆ ಮಾಡಬೇಕೆಂದವರು ಕಾನೂನು ಬಾಹಿರವಾಗಿ ಮತದಾರರಿಗೆ ಆಮಿಷ್ಟ ಒಡ್ಡಿ ಮತಕೇಳುವುದಿಲ್ಲ. ದೇಶ ಸೇವೆ’ ಜೊತೆ ಎಲ್ಲ ಸಮೂದಾಯದ ಸಾರ್ವಜನಿಕರ ಪ್ರಾಮಾಣಿಕ ಸೇವೆ ಬಯಸುವ ಕಳಕಳ ವೃತ್ತಿ ಇದ್ದರೆ, ಆಮೀಪ್ಯ ಒಡ್ಡಿ ಮತ ಕೇಳುವ ಅವಶ್ಯಕತೆ ಇರುವುದಿಲ್ಲ, ಅದಕ್ಕಾಗಿ, ಇಂತಹ ಹೇಡಿ, ದೇಶದ್ರೋಹಿ ಅಭ್ಯರ್ಥಿಗಳ ಮೇಲೆ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಂಡು ಅಭ್ಯರ್ಥಿ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಕರವೇ ಸ್ವಾಭಿಮಾನಿ ಬಣ ವಿಜಯಪುರ ಜಿಲ್ಲೆಯ ಎಲ್ಲ ಪಧಾದಿಕಾರಿಗಳು ಆಗ್ರಹಿಸುತೇವೆ.

ಈ ಸಂದರ್ಭದಲ್ಲಿ ಜಯದೇವ ಸೂರ್ಯವಂಶಿ ಜಿಲ್ಲಾಧ್ಯಕ್ಷರು, ಗಿರೀಶ ಕಲಘಟಗಿ, ಲಕ್ಷ್ಮಣ ಕಂಬಾಗಿ, ಸಿದ್ದರಾಮ ಹಳ್ಳೂರ, ಸಂಕೇತ ಪಟ್ಟಣದ, ಮಲ್ಲಿಕಾರ್ಜುನ ಬಿರಾದಾರ, ಈಶ್ವರಚಂದ್ರ ಪಡಗಣ್ಣವರ, ಡಾ. ಮಹಮ್ಮದ ಗುರಿಕಾರ, ತಿಮ್ಮನಗೌಡ ಪಾಟೀಲ ರಾಜೇಶ್ವರಿ ಮಠಪತಿ, ಜಯಶ್ರೀ ನನಮ, ಸಾಯಿರಾಬಾನು ಸನದಿ, ಲಿಂಗರಾಜ ಬಿದರಕುಂದಿ, ರಾಜು ಪಟ್ಟಣಶೆಟ್ಟಿ, ರಾಜುಗೌಡ ಬಿರಾದಾರ, ಸತೀಶ ಆಲಗುಂಟಿ ಇನ್ನಿತರರು ಉಪಸ್ಥಿತರಿದ್ದರು.