ಆಮಿಷ, ಅಕ್ರಮ ತಡೆಯಲು ನಿರಂತರ ಸಹಾಯವಾಣಿ ನಿರ್ವಹಣೆ


ಧಾರವಾಡ,ಏ.3: ಕರ್ನಾಟಕ ರಾಜ್ಯ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಗಳು ಘೋಷಣೆ ಆಗಿದ್ದು, ಎಲ್ಲೆಡೆ ರಾಜಕೀಯ ಕಾರ್ಯಚಟುವಟಿಕೆಗಳು ಹೆಚ್ಚುತ್ತಿವೆ. ಚುನಾವಣೆಗಳನ್ನು ಪಾರದರ್ಶಕವಾಗಿ, ನ್ಯಾಯಸಮ್ಮತವಾಗಿ ಮತ್ತು ಮುಕ್ತವಾಗಿ ಜರುಗಿಸಲು ಕೇಂದ್ರ ಚುನಾವಣಾ ಆಯೋಗದ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತವು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಸಾರ್ವಜನಿಕರ ಸಹಕಾರವು ಮುಖ್ಯ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಚುನಾವಣೆಗಳು ಶಾಂತಿಯುತವಾಗಿ ಮತ್ತು ಸುಗಮವಾಗಿ ಜರುಗಿಸಲು ಜಿಲ್ಲೆಯ 24 ಕಡೆಗೆ ಚೆಕ್ ಪೆÇೀಸ್ಟ್ ತೆರೆಯಲಾಗಿದ್ದು, ದಿನದ 24 ಗಂಟೆ ಸಿಬ್ಬಂದಿಗಳಿದ್ದು, ವಾಹನ ತಪಾಸಣೆ ಮಾಡುತ್ತಿದ್ದಾರೆ.
ಮತದಾರರಿಗೆ ಆಮಿಷ ಒಡ್ಡುವ, ಹಣ, ವಸ್ತು, ಸರಾಯಿ, ಕಾಣಿಕೆಗಳನ್ನು ಹಂಚುವ ಚುನಾವಣಾ ಅಪರಾಧಿ ಕೃತ್ಯಗಳನ್ನು ತಡೆಗಟ್ಟಲು ಜಿಲ್ಲಾಡಳಿತದ ಕಾರ್ಯಕ್ಕೆ ಸಾರ್ವಜನಿಕರ ಸಹಕಾರವು ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಚುನಾವಣೆಯನ್ನು ಯಶಸ್ವಿಯಾಗಿ ಜರುಗಿಸಲು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಹಾಗೂ ಜಿಲ್ಲೆಯ ಏಳು ವಿಧಾನಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಗಳಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿಗಳನ್ನು ತೆರೆಯಲಾಗಿದೆ.
ಪ್ರತಿ ಸಹಾಯವಾಣಿಗೆ ಮೂರು ಸಿಪ್ಟ್ ದಲ್ಲಿ ದಿನದ 24 ಗಂಟೆ ಕರ್ತವ್ಯ ನಿರ್ವಹಿಸಿ, ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಲು ಮೂರು ಜನ ಸಿಬ್ಬಂದಿಗಳನ್ನು ನೇಮಿಸಿ, ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಮತದಾರರ ಹೆಸರು ಸೆರ್ಪಡೆ, ಗುರುತಿನ ಚೀಟಿ, ಮತದಾರಯಾದಿ ಮತ್ತು ಚುನಾವಣಾ ಮಹಿತಿ ನೀಡಲು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಶಾಖೆಯಲ್ಲಿ 1950 ಸಂಖ್ಯೆಯ ಸಹಾಯವಾಣಿ ತೆರೆಯಲಾಗಿದೆ.
ಜಿಲ್ಲೆಯ ಮತದಾರರು, ಸಾರ್ವಜನಿಕರು ತಮ್ಮ ನಗರ, ಗ್ರಾಮ ಅಥವಾ ವಾಸದಪ್ರದೇಶ ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಪಕ್ಷ, ಪಕ್ಷದ ಪ್ರತಿನಿಧಿ, ಪಕ್ಷದ ಕಾರ್ಯಕರ್ತ ಅಥವಾ ಇತರೆ ಯಾರೇ ಆಗಲಿ ಮತದಾರರಿಗೆ ಹಣ, ಸರಾಯಿ, ಗೃಹಬಳಕೆ ವಸ್ತು, ಕಾಣಿಕೆ ಅಥವಾ ಇತರ ಯಾವುದೇ ಸ್ವರೂಪದ ಆಮಿಷ ನೀಡುವದಾಗಲಿ ಅಥವಾ ಕೋಮು ಸಾಮರಸ್ಯ, ವ್ಯಕ್ತಿ ಚಾರಿತ್ರ್ಯ, ಜಾತಿ, ಭಯ ಹುಟ್ಟಿಸುವ, ಬೆದರಿಕೆ ಹಾಕುವ ಘಟನೆಗಳು ನಡೆಯುತ್ತಿದ್ದಲ್ಲಿ ತಕ್ಷಣ ಚುನಾವಣಾಧಿಕಾರಿಗಳ ಕಚೇರಿ ಸಹಾಯವಾಣಿಗೆ ಅಥವಾ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಸಹಾಯವಾಣಿಗೆ ಕರೆ ಮಾಡಿ, ಮಾಹಿತಿ ನೀಡಬೇಕು.
ಮಾಹಿತಿದಾರರ ಗುರುತು ಗೌಪ್ಯವಾಗಿ ಇಡಲಾಗುವುದು ಆದರೆ ಹುಸಿ ಕರೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ವಿಧಾನಸಭಾ ಮತಕ್ಷೇತ್ರವಾರು ಆರಂಭಿಸಿರುವ ಚುನಾವಣಾ ಸಹಾಯವಾಣಿಗಳು ಇಂತಿವೆ:
69-ನವಲಗುಂದ ವಿಧಾನಸಭಾ ಮತಕ್ಷೇತ್ರ: 08380 229240,70-ಕುಂದಗೋಳ ವಿಧಾನಸಭಾ ಮತಕ್ಷೇತ್ರ: 08304 290239,71-ಧಾರವಾಡ ವಿಧಾನಸಭಾ ಮತಕ್ಷೇತ್ರ: 0836 2233822, 72-ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರ: 0836 2358035,73-ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರ: 0836 2213827,
74-ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ: 0836 2446133,75-ಕಲಘಟಗಿ ವಿಧಾನಸಭಾ ಮತಕ್ಷೇತ್ರ: 08370 284535
ಯಾವುದೇ ಚುನಾವಣಾ ಅಕ್ರಮಗಳು ನಡೆಯದಂತೆ ಎಚ್ಚರಿಕೆ ವಹಿಸಲು ಮತ್ತು ಪ್ರತಿಯೊಬ್ಬರು ಉತ್ತಮ ಜನಪ್ರತಿನಿಧಿ ಆಯ್ಕೆಗಾಗಿ ತಮ್ಮ ಅಮೂಲ್ಯ ಮತಚಲಾಯಿಸಲು ಅನುವಾಗುವಂತೆ ಹಾಗೂ ಚುನಾವಣೆಗೆ ಯಾವುದೇ ಪ್ರಭಾವ, ಒತ್ತಡಗಳಿಲ್ಲದ ಮತದಾರಸ್ನೇಹಿ ವಾತಾವರಣ ರೂಪಿಸಲು ಸಾರ್ವಜನಿಕರು ಸಹಕಾರ ನೀಡಬೆಕು ಎಂದು ಅವರು ತಿಳಿಸಿದ್ದಾರೆ.
ಯಾವುದೇ ರೀತಿಯ ಚುನಾವಣಾ ಅಕ್ರಮಗಳು ನಡೆಯುತ್ತಿದ್ದರೆ ಅಥವಾ ನಡೆಸಲು ಉದ್ದೇಶಿಸಿದ್ದರೆ ಈ ಕುರಿತು ತಕ್ಷಣ ಸಹಾಯವಾಣಿಗಳಿಗೆ ಮಾಹಿತಿ ನೀಡಬೇಕು. ಸಹಾಯವಾಣಿಯ ದೂರು ಆದರಿಸಿ ಸಂಭಂದಿಸಿದ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸುತ್ತದೆ. ಸೂಕ್ತ ಕ್ರಮ ಜರುಗಿಸಿ, ಅಪರಾಧ ತಡೆಗಟ್ಟುವ ಕೆಲಸ ಮಾಡುತ್ತದೆ.
ಚುನಾವಣಾ ಆಯೋಗದ ನಿಯಮಗಳು ಮತ್ತು ಭಾರತೀಯ ದಂಡ ಸಂಹಿತೆ ಪ್ರಕಾರ ಚುನಾವಣಾ ಅಕ್ರಮ ನಡೆಸುವವರು ಎಷ್ಟು ಅಪರಾಧಿಗಳೋ, ಅದರಲ್ಲಿ ಪಾಲ್ಗೋಳ್ಳುವ ಮತ್ತು ಅದಕ್ಕೆ ಸಹಕರಿಸುವವರು ಅಷ್ಟೇ ಅಪರಾಧಿಗಳಾಗುತ್ತಾರೆ. ಜಿಲ್ಲೆಯಲ್ಲಿ ಸುವ್ಯವಸ್ಥಿತವಾಗಿ ಚುನಾವಣೆ ಜರುಗಿಸಲು ಜಿಕ್ಲಾಡಳಿತಕ್ಕೆ ಮತ್ತು ಚುನಾವಣಾಧಿಕಾರಿ, ಚುನಾವಣಾ ಸಿಬ್ಬಂದಿಗಳಿಗೆ ಸಹಕಾರ ನೀಡುವಂತೆ ಸಾರ್ವಜನಿಕರಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡ ಅವರು ಮನವಿ ಮಾಡಿದ್ದಾರೆ.