
ದೇವದುರ್ಗ,ಏ.೨೬- ದೇಶದ ೧೮ವರ್ಷದ ತುಂಬಿದ ಪ್ರತಿಪ್ರಜೆಗೂ ಸಂವಿಧಾನ ಅಮೂಲ್ಯವಾದ ಮತದಾನ ಹಕ್ಕನ್ನು ನೀಡಿದೆ. ಮತವನ್ನು ಯಾವುದೇ ಕಾರಣಕ್ಕೂ ಆಸೆ, ಆಮಿಷಗಳಿಗೆ ಮಾರಿಕೊಳ್ಳದೆ ಆತ್ಮಸಾಕ್ಷಿಗೆ ಅನುಗುಣವಾಗಿ ಮತದಾನ ಮಾಡಬೇಕು ಎಂದು ಆರೋಗ್ಯ ಇಲಾಖೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಶಿವಪ್ಪ ಹೇಳಿದರು.
ತಾಲೂಕಿನ ಭೂಮನಗುಂಡ ಗ್ರಾಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸ್ಥಳೀಯ ಗ್ರಾಪಂಯಿಂದ ನರೇಗಾ ಕೂಲಿಕಾರರಿಗೆ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಪ್ರತಿಯೊಬ್ಬ ಮತದಾರರೂ ಚುನಾವಣೆಯಲ್ಲಿ ವೋಟ್ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಗೊಳ್ಳಲಿದೆ. ಮೇ ೧೦ರಂದು ಪ್ರತಿಯೊಬ್ಬರೂ ಮತದಾನ ಮಾಡುವಂತೆ ಮನವಿ ಮಾಡಿದರು.
ನಂತರ ಕಡ್ಡಾಯ ಮತದಾನ ಮಾಡುವ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಗ್ರಾಕೂಸ್ ಸಂಘಟನೆ ಮುಖಂಡ ಈರಣ್ಣ, ಆಂಜಿನೇಯ, ನಾಗರಾಜ ಅರಳೆಬಂಡಿ, ಸ್ಯಾಮುವೆಲ್ ಹಾಗೂ ಕೂಲಿಕಾರರು ಇದ್ದರು.