ಆಮಿಷಗಳಿಗೆ ಬಲಿಯಾಗಿ ಮತ ನೀಡಿದರೆ ದುಃಖ ಕಟ್ಟಿಟ್ಟ ಬುತ್ತಿ.

ಚಿತ್ರದುರ್ಗ. ಏ.೧೩; ಜನರು ಬರುವ ಚುನಾವಣೆಗಳಲ್ಲಿ ಆಮೀಷಗಳಿಗೆ, ಬಲವಂತಕ್ಕೆ, ಪ್ರಭಾವಕ್ಕೆ ಮಣಿದು ಮತ ಚಲಾಯಿಸಿದರೆ, ವ್ಯವಸ್ಥೆಗಳು ಕೆಟ್ಟು ದುಃಖಕ್ಕೆ ಕಾರಣವಾಗುತ್ತದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ ಎಚ್ ಕೆ ಸ್ವಾಮಿ ತಿಳಿಸಿದರು.ಅವರು ಚಿತ್ರದುರ್ಗ ನಗರದ ತಿರುಮಲ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಾತನಾಡುತ್ತಿದ್ದರು.ಬುದ್ಧ ಹೇಳಿದ ಆಸೆಗೆ ದುಃಖಕ್ಕೆ ಮೂಲ ಎಂಬ ಪದವನ್ನು, ವಾಕ್ಯವನ್ನು ಈಗಿನ ಚುನಾವಣೆಗೂ ಸಹ ಅಳವಡಿಸಿಕೊಳ್ಳಬಹುದು. ಜನರು ಆಸೆ ಆಮಿಷಗಳಿಗೆ, ದುಡ್ಡಿನ ಒತ್ತಡಕ್ಕೆ ಮಣಿದು ಮತ ಚಲಾಯಿಸುತ್ತಿರುವದರಿಂದ ಪ್ರಾಮಾಣಿಕವಾದ ವ್ಯಕ್ತಿಗಳ ಆಯ್ಕೆಯಾಗದೆ, ದುರಾಡಳಿತ ಮಾಡುವಂತ, ಮೋಸ ಅನ್ಯಾಯ ಮಾಡುವಂತ ವ್ಯಕ್ತಿಗಳ ಆಯ್ಕೆ ಹೆಚ್ಚಾಗುತ್ತಿದ್ದು ಪ್ರಜಾಪ್ರಭುತ್ವ ದಿನದಿನೇ, ಕುಸಿಯುತ್ತಿದೆ ಎಂದರು.ಮಕ್ಕಳ ಮನಸ್ಸು ಸೂಕ್ಷ್ಮವಾಗಿದ್ದು ಅವರಿಗೆ ಪ್ರಚಲಿತ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ತಿಳಿಸಿ ಕೊಡುವುದರಿಂದ ಮನೆಯಲ್ಲಿ ಬದಲಾವಣೆ ತರಲು ಮಕ್ಕಳು ಸಹಕಾರಿಯಾಗಿವೆ ಎಂದರು.ನಾವು ಮಕ್ಕಳಿಗೆ ಏನು ತಿಳಿಯುವುದಿಲ್ಲ ಎಂಬ ಭಾವನೆಯನ್ನು ಹೊಂದುವುದಕ್ಕಿಂತ, ಅವರಿಗೆ ಎಲ್ಲಾ ತಿಳುವಳಿಕೆಗಳು ಪ್ರಕೃತಿದತ್ತವಾಗಿ ಬಂದಿರುವುದರಿಂದ, ಅವರ ಮನಸ್ಸನ್ನ ಜಾಗೃತಿಗೊಳಿಸುವ ಕೆಲಸವು ಬೇಸಿಗೆ ಶಿಬಿರಗಳಲ್ಲಿ ಆಗಬೇಕು ಎಂದು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಅಂಬೇಡ್ಕರ್ ರವಿ, ವಿಂಡ್ ಮಿಲ್ಲಿನ ವ್ಯವಸ್ಥಾಪಕರಾದ ಸುರೇಶ್, ಮಹಿಳಾ ಸಂಘಟಿಕರಾದ ಅಂಬುಜಾ ರೆಡ್ಡಿ, ಹಾಗೂ ಇನ್ನಿತರ ಸೇವಾ ಸಂಸ್ಥೆಗಳ ಸಂಘ ಸದಸ್ಯರುಗಳು ಹಾಜರಿದ್ದರು.