ಆಮಶಂಕೆ ಹಾಗೂ ರಕ್ತ ಭೇದಿಗೆ ಮನೆಮದ್ದು

೧.ಸುಟ್ಟ ಈರುಳ್ಳಿ ತಿನ್ನುವುದರಿಂದ ರೋಗಾಣುಪೂರಿತ ಆಮಶಂಕೆ ಗುಣವಾಗುವುದು.
೨.ಖರ್ಜೂರವನ್ನು ಪ್ರತಿನಿತ್ಯ ಸೇವಿಸುತ್ತಿದ್ದರೆ ಆಮಶಂಕೆಯು ಹತ್ತಿರ ಬರುವುದಿಲ್ಲ. ಬಂದಾಗ ಕೂಡ ಖರ್ಜೂರವನ್ನು ಸಣ್ಣ ಹೆಚ್ಚಿ
ನೀರಿನಲ್ಲಿ ಹಾಕಿ ಕುದಿಸಿ ಕಷಾಯದ ರೀತಿ ಮಾಡಿ ಕುಡಿ ಆಮಶಂಕೆ, ಭೇಧಿ ಎಲ್ಲವೂ ನಿವಾರಣೆ ಯಾಗುವುದು.
೩.ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಮಜ್ಜಿಗೆಯಲ್ಲಿ ಅರೆದು ಕುಡಿದರೆ ಆಮಶಂಕೆ ಅಥವಾ ಬರೀ ಭೇದಿ ಕಡಿಮೇಯಗುತ್ತದೆ.
೪.ಕರಿಬೇವಿನ ಎಲೆಯನ್ನು ಅರೆದು ಮಜ್ಜಿಗೆಯಲ್ಲಿ ಕಲಸಿ ಕುಡಿದರೆ ರಕ್ತಭೇದಿ ಅಥವಾ ಆಮಶಂಕೆ ನಿವಾರಣೆಯಗುತ್ತದೆ.
೫.ಗಟ್ಟಿ ಮೊಸರಲ್ಲಿ ಮೆಂತ್ಯವನ್ನು ನೆನಸಿ ಸೇವಿಸಿದರೆ ಆಮಶಂಕೆ ಅಥವಾ ಭೇದಿ ನಿವಾರಣೆಯಾಗುತ್ತದೆ.
೬.ಟೀ ಸೋಪ್ಪನ್ನು ಹಾಗೂ ಏಲಕ್ಕಿಯನ್ನು ನೀರಿನಲ್ಲಿ ಹಾಕಿ ಕುದಿಸಿ ಶೋಧಿಸಿ ಕುಡಿಯಬೇಕು.
೭.ನೇರಳೆ ಹಣ್ಣಿನ ಷರಬತ್ತನ್ನು ಕುಡಿಯುವುದರಿಂದ ರಕ್ತಭೇದಿ ನಿಲ್ಲುತ್ತದೆ.
೮. ಕಾಯಿಸಿ ಆರಿಸಿದ ಹಾಲಿಗೆ ೧ ಹನಿ ನಿಂಬೆ ಹಣ್ಣಿನ ರಸವನ್ನು ಹಾಕಿ ತಕ್ಷಣವೇ ಕುಡಿಯಬೇಕು.
೯.ನೇಂದ್ರ ಬಾಳೇಹಣ್ಣನ್ನು ಮಜ್ಜಿಗೆ ಯಲ್ಲಿ ಮಸೆದು ಸಕ್ಕರೆ ಸಹಿತವಾಗಿ ಸೇವಿಸಬೇಕು.
೧೦.ಉತ್ರಾಣಿ ಸೊಪ್ಪಿನ ರಸ ಎರಡು ಚಮಚ, ಜೇನು ತುಪ್ಪ ೨ ಚಮಚ ಸೇರಿಸಿ ದಿನಕ್ಕೆ ೨ ಬಾರಿಯಂತೆ ೨-೩ ದಿನ ಸೇವಿಸಬೇಕು.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧