ಆಫ್ಘಾನ್‌ನಲ್ಲಿ ಜೆಟ್ವಿಮಾನ ಅಪಘಾತ

ಆಫ್ಘಾನಿಸ್ತಾನ, ಜ.೨೧:ಪ್ರಯಾಣಿಕರಿದ್ದ ಜೆಟ್ ವಿಮಾನ ಆಫ್ಘಾನಿಸ್ತಾನದ ಟಾಪ್ ಖಾನಾದ ಪರ್ವತ ಪ್ರದೇಶಗಳಲ್ಲಿ ಪತನಗೊಂಡಿದೆ. ಆದರೆ, ಈ ವಿಮಾನ ಭಾರತದ ವಿಮಾನ ಅಲ್ಲವೆಂದು ಭಾರತೀಯ ವಿಮಾನ ನಿರ್ದೇಶನಾಲಯ ಅಧಿಕಾರಿಗಳು ತಿಳಿಸಿದ್ದಾರೆ.
ದುರಂತ ಘಟನೆಯೊಂದರಲ್ಲಿ, ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಶನಿವಾರ ರಾತ್ರಿ ಅಫ್ಘಾನಿಸ್ತಾನದ ಬಡಾಕ್ಷನ್ ಪ್ರದೇಶದಲ್ಲಿ ಪತನಗೊಂಡಿದ್ದು ವಿಮಾನದಲ್ಲಿ ಎಷ್ಟು ಜನರಿದ್ದರು ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ಅಫ್ಘಾನಿಸ್ತಾನ ನ್ಯೂಸ್ ಏಜೆನ್ಸಿ, ಖಾಮಾ ಪ್ರೆಸ್ ಪ್ರಕಾರ, ವಿಮಾನ ಅದರ ಮೂಲ ಮಾರ್ಗದಿಂದ ಹೊರಗುಳಿದಿದೆ ಮತ್ತು ಜನವರಿ ೨೦ ರ ಶನಿವಾರ ರಾತ್ರಿ ಬಡಾಕ್ಷಾನ್‌ನಲ್ಲಿರುವ ಜೆಬಾಕ್ ಜಿಲ್ಲೆಯ ಪರ್ವತ ಭೂಪ್ರದೇಶಕ್ಕೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.
ಪ್ರಯಾಣಿಕ ಜೆಟ್ ವಿಮಾನ ಕಿರಣ್ ಮತ್ತು ಮಿಂಜಾನ್ ಜಿಲ್ಲೆಗಳು ಮತ್ತು ಬಡಾಕ್ಷನ್‌ನ ಝೆಬಾಕ್ ಜಿಲ್ಲೆ ಸೇರಿದಂತೆ ಟಾಪ್ ಖಾನಾದ ಪರ್ವತ ಪ್ರದೇಶಗಳಲ್ಲಿ ಪತನಗೊಂಡಿದೆ. ಆದಾಗ್ಯೂ, ವಿಮಾನದ ಪ್ರಕಾರ ಮತ್ತು ಅದರಲ್ಲಿದ್ದ ಪ್ರಯಾಣಿಕರ ಸಂಖ್ಯೆಯನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಪ್ರಾಂತ್ಯದ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.
ಇದು ಚಾರ್ಟರ್ಡ್ ವಿಮಾನವಾಗಿದೆ ಮತ್ತು ಮಾಸ್ಕೋಗೆ ಹೋಗುವ ಮಾರ್ಗದಲ್ಲಿ ಅಪಘಾತಕ್ಕೀಡಾಗಿದ್ದರು, ಆದರೆ ಕೆಲವರು ಇದು ಪ್ರಯಾಣಿಕರ ವಿಮಾನ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಮಾಸ್ಕೋಗೆ ತೆರಳುತ್ತಿದ್ದ ವಿಮಾನ ಬಡಾಖಾನ್‌ನ ವಖಾನ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಫ್ಘಾನಿಸ್ತಾನ ಮಾಧ್ಯಮ ವರದಿ ಮಾಡಿದೆ. ಬಡಾಕ್ಷಣ್‌ನಲ್ಲಿರುವ ತಾಲಿಬಾನ್‌ನ ಮಾಹಿತಿ ಮತ್ತು ಸಂಸ್ಕೃತಿಯ ಮುಖ್ಯಸ್ಥರು ಘಟನೆಯನ್ನು ದೃಢಪಡಿಸಿದ್ದಾರೆ, ಘಟನೆಯ ತನಿಖೆಗೆ ತಂಡ ಸ್ಥಳಕ್ಕೆ ಕಳುಹಿಸಲಾಗಿದೆ. ಸದ್ಯಕ್ಕೆ, ಅಧಿಕೃತ ಮೂಲಗಳು ಸಾವುನೋವುಗಳು ಅಥವಾ ಅಪಘಾತದ ಕಾರಣದ ಬಗ್ಗೆ ಮಾಹಿತಿಯನ್ನು ಒದಗಿಸಿಲ್ಲ. ಪ್ರಸ್ತುತ ತನಿಖೆಯಲ್ಲಿದೆ ಎನ್ನಲಾಗಿದೆ.