
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.01: ಪ್ರಸಕ್ತ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದಿಂದ ಕೆ.ಎರ್ರಿಸ್ವಾಮಿ ಮತ್ತು ಸಿರುಗುಪ್ಪ ಕ್ಷೇತ್ರಕ್ಕೆ ಲೋಕೇಶ ನಾಯಕ್ ಅವರನ್ನು ಕಣಕ್ಕಿಳಿಸಲು ಪಕ್ಷ ಟಿಕೆಟ್ ಘೋಷಣೆ ಮಾಡಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷ ಕಿರಣ್ ಕುಮಾರ್ ತಿಳಿಸಿದ್ದಾರೆ.
ಅವರು ಇಂದು ನಗರದ ಬಳ್ಳಾರಿ ಪತ್ರಕರ್ತರ ಒಕ್ಕೂಟದಲ್ಲಿ ಸುದ್ದಿಗೋಷ್ಟಿ ನಡೆಸಿ ಈ ವಿಷಯ ತಿಳಿಸಿದರು.
ದೆಹಲಿ ಮುಖ್ಯ ಮಂತ್ರಿ ಕ್ರೇಜಿವಾಲ ಅವರು ಚುನಾವಣೆ ಪ್ರಚಾರಕ್ಕೆ ಬರುವ ಸಾಧ್ಯತೆ ಇದೆಂದರು.
ಹತ್ತನೇ ತರಗತಿ ಓದಿರುವ ಬಳ್ಳಾರಿ ಅಭ್ಯರ್ಥಿ ಎರ್ರಿಸ್ವಾಮಿ ಮತ್ತು ಲೋಕೇಶ್ ನಾಯಕ ಮಾತನಾಡಿ, ಶೂನ್ ಕಮೀಷನ್ ನಿಂದ ಸರ್ಕಾರ ನಡೆಸುವ ಪಕ್ಷ ಆಮ್ ಆದ್ಮಿ. ಹಾಗಾಗಿ ಜನರು ಈ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸಲಿದ್ದಾರೆಂದರು.
ಕುಕ್ಕರ್ ಸೀರೆ ಯಾರು ಏನೇ ಹಂಚಲಿ ನಾವು ಮಾತ್ರ ಏನು ನೀಡಲ್ಲ. ಭ್ರಷ್ಟಾಚಾರ ರಹಿತವಾದ ಪಕ್ಷ ನಮ್ಮದು ಎಂದರು.
ಸಿರುಗುಪ್ಪ ಅಭ್ಯರ್ಥಿ ಲೋಕೇಶ್ ನಾಯಕ್ ಸಹ ಹತ್ತನೇ ತರಗತಿ ಓದಿದ್ದು. ಸಿರುಗುಪ್ಪದಲ್ಲಿನ ಅಕ್ಕಿ ಕಾರ್ಖಾನೆಗಳಿಂದ ಹೊರ ಹೊಮ್ಮುವ ಧೂಳು ನಿಯಂತ್ರಣಕ್ಕೆ ಹೋರಾಟ ಮಾಡಲಿದೆ. ಅಕ್ರಮ ನಿವೇಶನಗಳ ಸಕ್ರಮ ಮಾಡಲಿದೆಂದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ಪಂಪನಗೌಡ, ಖಲಂದರ್ ಮೊದಲಾದವರು ಇದ್ದರು.