
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಪಕ್ಷ ನೀಡಿದ ಟಾಸ್ಕ್ ಎಲ್ಲವನ್ನೂ ಮಾಡಿದೆ. ಅದಕ್ಕೆ ಸ್ಪಂದನೆಯಾಗಿ ಆಮ್ ಆದ್ಮಿ ಪಕ್ಷ ಬಳ್ಳಾರಿ ನಗರದ ಅಭ್ಯರ್ಥಿಯಾಗಿ ನನ್ನ ಹೆಸರನ್ನು ಘೋಷಣೆ ಮಾಡಿತ್ತು. ಆದರೆ ಈಗ ಬೇರೊಬ್ಬರಿಗೆ ಟಿಕೆಟ್ ನೀಡುತ್ತಿರುವುದರಿಂದ ಪಕದಷದಿಂದ ಹೊರ ಬಂದಿರುವೆ ಎಂದು ಕೆ.ಎರ್ರಿಸ್ವಾಮಿ ಹೇಳಿದ್ದಾರೆ.
ನಗರದಲ್ಲಿನ ಬಳ್ಳಾರಿ ಪತ್ರಕರ್ತರ ಒಕ್ಕೂಟದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು.
ಸಾಮಾಜಿಕ, ಸಂಘಟನೆಯ ಹೋರಾಟಗಾರನಾಗಿ ಎಂದೂ ನಾನು ದುಖಃದಿಂದ ಸುದ್ದಿಗೋಷ್ಟಿ ಮಾಡಿಲ್ಲ. ಇಂದು ಆಪ್ ಪಕ್ಷದ ಮೋಸದಿಂದ ದುಖಃದಿಂದ ಸುದ್ದಿಗೋಷ್ಟಿ ಮಾಡಬೇಕಾದ ಪರಿಸ್ಥಿತಿ ಬಂದಿದೆ.
ಪಕ್ಷದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಅವರು ನನ್ನ ವಿರುದ್ದ ಕೇಂದ್ರ ಕಚೇರಿಗೆ ಪತ್ರ ಬರೆದು. ನನಗೆ ಸಹಕಾರ ಮಾಡಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸಮಿತಿ ಬೇರೊಬ್ಬ ಅಭ್ಯರ್ಥಿ ಬರುತ್ತಾರೆ. ಅವರು ಕೋಟಿಗಟ್ಟಲೆ ವೆಚ್ಚ ಮಾಡುತ್ತಾರೆ ಎಂದು ಹೇಳಿದೆಂದರು.
ನಾನು ಚುನಾವಣೆಗೆ ಎಲ್ಲಾ ರೀತಿ ಸಿದ್ದ ಮಾಡಿಕೊಂಡಿದ್ದೆ. ಪ್ರಾಣಾಳಿಕೆಯ ಕರ ಪತ್ರ ಮುದ್ರಣ ಮಾಡಿದೆ. ಗ್ಯಾರೆಂಟಿ ಕಾರ್ಡು ಮುದ್ರಿಸಿದೆ.
ನಾನು ನಾಮಪತ್ರ ಸಲ್ಲಿಸಲು ಬಿ ಫಾರಂ ಕೇಳಿದರೆ. ಈಗ ಈ ಬಾರಿ ಬೇಡ, ಸಂಘಟನೆ ಮಾಡಿ ಎನ್ನುತ್ತಿದ್ದಾರೆ. ನನಗೆ ಅವಕಾಶ ನೀಡದಿದ್ದರೆ ನನ್ನ ಬಗ್ಗೆ ಅನೇಕ ಅನುಮಾನಗಳು ಮೂಡಿ ಸಮಾಜದಲ್ಲಿ ನನಗೆ ಅವಮಾನ , ಅಪನಂಬಿಕೆ ಬರುತ್ತದೆಂದು ಹೇಳಿದೆ. ಆದರೆ ನಿಮ್ಮ ಪ್ರಚಾರ ಸರಿ ಇಲ್ಲ. ನಿಮ್ಮ ನಾಯಕತ್ವ ಸರಿ ಇಲ್ಲ ಎಂದು ಟಿಕೆಟ್ ನಿರಾಕರಿಸಿದ್ದಾರೆ. ಇಂತಹ ಭ್ರಷ್ಟ ಪಕ್ಷದಲ್ಲಿ ಇರಲ್ಲ ತೊರೆಯುವೆ.
ಪಕ್ಷದ ಅಭ್ಯರ್ಥಿ ಘೋಷಣೆ ಮಾಡಿ ಬಿ ಫಾರಂ ಮಾರಟಕ್ಕಿಡುವ ಪಕ್ಷ ಇದಾಗಿದೆಂದು ಆರೋಪಿಸುದರು.
ಇಂತಹ ಭ್ರಷ್ಟ ಪಕ್ಷವನ್ನು ಬೆಂಬಲಿಸಬೇಡಿ ಎಂದು ಮನೆ ಮನೆಗೆ ತೆರಳಿ ಹೇಳುವೆ ಎಂದರು.