ಆಪ್ ಅಭ್ಯರ್ಥಿ ಕೇಶವರೆಡ್ಡಿ ಹಲವು ಪ್ರದೇಶಗಳಲ್ಲಿ ಪ್ರಚಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.24: ನಗರದ 10, 11 ಮತ್ತು ನಾಲ್ಕನೇ ವಾರ್ಡ್ಗಳಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೊರಲಗುಂದಿ ದೊಡ್ಡ ಕೇಶವ ರೆಡ್ಡಿ ಅವರು ಭರ್ಜರಿ ಪ್ರಚಾರ ನಡೆಸಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿ, ನಾನು ಸೋತರೂ ಗೆದ್ದರೂ ಸದಾ ನಿಮ್ಮೊಂದಿಗೆ ಜನಸೇವೆ ಮಾಡಲು ಸಿದ್ಧನಿರುತ್ತೇನೆ.  ದೆಹಲಿ ಮತ್ತು ಪಂಜಾಬ್ ಮಾದರಿಗಳಲ್ಲಿ ನಮ್ಮ ಕರ್ನಾಟಕದಲ್ಲಿ ವಿಶೇಷವಾಗಿ ಬಳ್ಳಾರಿಯಲ್ಲಿಯೂ ಸಹ ಅಭಿವೃದ್ಧಿ ಹೊಂದಬೇಕಾದರೆ ನಮ್ಮ ಪಕ್ಷದ ಪರಕೆ ಗುರುತಿಗೆ ತಮ್ಮ  ಮತ ನೀಡಿ ಎಂದರು.
ಈ ಸಂದರ್ಭದಲ್ಲಿ  ಪಕ್ಷದ ಬಳ್ಳಾರಿ ಜಿಲ್ಲಾ ಉಸ್ತುವಾರಿ ನವಲಿ ಹಿರೇಮಠ, ನಗರದ ಅಧ್ಯಕ್ಷ ಜೆ. ವಿ. ಮಂಜುನಾಥ, ವಿ.ಬಿ. ಮಲ್ಲಪ್ಪ, ಟಿ ಕಿರಣ್ ಕುಮಾರ್, ಅಮೆರ್ ಖಾದ್ರಿ, ನೂರ್, ಪ್ರದೀಪ್ ರೆಡ್ಡಿ ರಾಘವ್ ರೆಡ್ಡಿ, ಪ್ರಸಾದ್ ರೆಡ್ಡಿ, ರಘು ಶೆಟ್ಟಿ, ದಿವಾಕರ್, ಶಿವಲಿಂಗ ನಾಯಕ್, ಸುಹೇಲ್ ಅಮಿತ್ ಪ್ರತಾಪ್ ಮುಂತಾದವರು ಪ್ರಚಾರದಲ್ಲಿ  ಪಾಲ್ಗೊಂಡಿದ್ದರು.