ಆಪ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಸರ್ಕಾರಿ ಉದ್ಯೋಗ: ಜಗದೀಶ್

ಚಿತ್ರದುರ್ಗ,ಏ.13: ಕರ್ನಾಟಕ ರಾಜ್ಯದಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.33ರಷ್ಟು ಮೀಸಲಾತಿ, ಉಚಿತ ಸಿಟಿ ಸಾರಿಗೆ ಬಿಪಿಎಲ್ ಕಾರ್ಡ ಹೊಂದಿರುವ ಮಹಿಳೆಗೆ ಮಾಸಿಕ 1000 ರೂ.ಸಬಲೀಕರಣ ಭತ್ಯೆ ರೈತ ವಿರೋಧಿ ಕಾನೂನುಗಳ ರದ್ದು ಸೇರಿದಂತೆ ಇತರೆ ವಿವಿಧ ರೀತಿಯ ಸೌಲಭ್ಯಗಳನ್ನು ಪಕ್ಷದ ಕಡೆಯಿಂದ ಗ್ಯಾರೆಂಟಿ ಕಾರ್ಡ್ ಮೂಲಕ ನೀಡಲಾಗುವುದು ಎಂದು ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶೀ ಜಗದೀಶ್ ಹೇಳಿದ್ದಾರೆ.ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ವಾಮಿನಾಥನ್ ವರದಿಯನ್ನು ಆಧರಿಸಿ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಸಣ್ಣ ರೈತರ ಸಾಲ ಮನ್ನಾ, ಕೃಷಿಗೆ 12 ಗಂಟೆಗೆ ವಿದ್ಯುತ್, ಕಬ್ಬು ಕಾರ್ಖಾನೆಗೆ ಉಚಿತ ವಿದ್ಯುತ್, ಬೆಳೆ ಮಾರಿದ ದಿನವೇ ಹಣ ಪಾವತಿ, ಯುವಜನತೆಗೆ ವರ್ಷಕ್ಕೆ 2 ಲಕ್ಷ ಉದ್ಯೋಗ ಅಲ್ಲದೆ ಉದ್ಯೋಗ ಸಿಗುವವರೆಗೆ ತಿಂಗಳಿಗೆ 3000 ನಿರುದ್ಯೋಗ ಭತ್ಯೆ, 12ನೇ ತರಗತಿ ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಸಲು ತಿಂಗಳಿಗೆ 5000 ರೂ. ಸ್ಪೈಫಂಡ್ ನೊಂದಿಗೆ 6 ತಿಂಗಳು ಉದ್ಯೋಗ ತರಬೇತಿ ಇದರೊಂದಿಗೆ ಸ್ಥಳೀಯ ಚುನಾವಣೆಯಲ್ಲಿ ಮತದಾನದ ವಯಸ್ಸನ್ನು 16ಕ್ಕೆ ಇಳಿಸಲಾಗುವುದು ಎಂದರು. ಚಿತ್ರದುರ್ಗದಲ್ಲಿ ರಾಗಿಯ ಮೇಲೆ ಕೇಂದ್ರೀಕೃತವಾಗಿರುವ ಅಹಾರ ಸಂಸ್ಕರಣಾ ಘಟಕಗಳ ಸಮೂಹ ಸ್ಥಾಪನೆ, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಯುವಕರಿಗೆ ತರಬೇತಿ ನೀಡುವ ಕೌಶಲ್ಯ ಅಭೀವೃದ್ದಿ ಕೇಂದ್ರ ಸ್ಥಾಪನೆ, ಚಿತ್ರದುರ್ಗ ಕೋಟೆ ಮತ್ತು ಕೋಟೆವ ಗುಂಡಿ ರಾಕ್ ಶೆಲ್ಟರ್ ಅನ್ನು ಸಂಪರ್ಕಿಸುವ ಗೆರಿಟೇಜ್ ಟ್ರಯಲ್ ನಿರ್ಮಾಣ ಮಾಡಲಾಗುವುದೆಂದು ಜಗದೀಶ್ ತಿಳಿಸಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯವತಿಯಿಂದ ಜಿಲ್ಲೆಯ ಆರು ಕ್ಷೇತ್ರಗಳಲ್ಲಿಯೂ ಸಹಾ ಸ್ಪರ್ದೇ ಮಾಡಲಾಗುವುದು. ಇದರಲ್ಲಿ ಮೂರು ಕ್ಷೇತ್ರಗಳಲ್ಲಿ ಜಯಗಳಿಸಲಾಗುವುದು. ಎಂದ ಅವರು ಜಿಲ್ಲಾ ಸಮಿತಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರ ಬಗ್ಗೆ ಉತ್ತರಿಸಿದ ಅವರು, ಜಿಲ್ಲಾ ಸಮಿತಿಯವರಾಗಿ ಪಾರ್ಟಿಯ ಬಗ್ಗೆ ಪ್ರಚಾರ ಮಾಡಬೇಕಿದೆ ಅದನ್ನು ಬಿಟ್ಟು ರಾಜ್ಯ ಸಮಿತಿಯವರು ನಮ್ಮನ್ನು ಕೇಳಿಲ್ಲ ಮಾಡಿಲ್ಲ ಎಂದು ದೂರುವುದು ಸರಿಯಲ್ಲಿ ನಮ್ಮ ಪಾಲಿನ ಕೆಲಸವನ್ನು ನಾವು ಮಾಡಬೇಕು ಎಂದ ಅವರು ಚುನಾವಣೆಯ ಸಮಯದಲ್ಲಿ ಈ ರೀತಿಯಾಗಿ ಪಾರ್ಟಿಯನ್ನು ಬದಲಾಯಿಸುವುದು ಸರಿಯಲ್ಲ ಇದು ಬೇರೆ ರೀತಿಯ ಅರ್ಥವನ್ನು ಕಲ್ಪಿಸುತ್ತದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಾಧ, ಪಕ್ಷದ ಅಭ್ಯರ್ಥಿಗಳಾದ ಮಹಾಂತೇಶ್, ಪಾಪಣ್ಣ, ರಾಜನಾಯಕ, ರಾಜು ತಿಪ್ಪೇಸ್ವಾಮಿ ಉಪಸ್ಥಿತದ್ದರು.