ಆಪಾರ ಪ್ರಮಾಣದ ಮೇವು ಬೆಂಕಿ ಆಹುತಿ

ಮುದಗಲ್.ಜ.೦೭-ಪಟ್ಟಣದ ಖಾಜಾ ಸಾಬ, ಹಸನ್ ಸಾಬ ಮೂಲಿಮನಿ ಎಂಬುವರ ಅವರ ಹೂಲದಲ್ಲಿ ಜಾನುವಾರುಗಳಿಗೆ ಕುಡಿ ಹಾಕಿದ್ದ ಮೂರು ಬಣವಿಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಆಪಾರ ಪ್ರಮಾಣದ ಮೇವು ಬೆಂಕಿಗೆ ಆಹುತಿಯಾಗಿದೆ.
ಮೇವಿನ ಬಣವಿಗೆ ಹತ್ತಿದ ಬೆಂಕಿ ನಂದಿಸಲು ಅಂಗ್ನಿ ಶಾಮಕ ಸಿಬ್ಬಂದಿಗಳು ಹರಸಾಹಸ ಪಟ್ಟರು ಯಾವುದೆ ಪ್ರಯೋಜನವಾಗಲಿಲ್ಲ.
ದನ ಕರುಗಳಿಗೆ ಒಂದು ವರ್ಷಕ್ಕೆ ಆಗುವಷ್ಟು ಮೂರು ಬಣವಿ ಸುಟ್ಟು ಹೋಗಿದೆ. ಅಂದಾಜು ೮೦ಸಾವಿರ ರೂಪಾಯಿ ಮೌಲ್ಯದ ಮೇವು ನಷ್ಟವಾಗಿದೆ. ಈ ಕೂಡಲೆ ಸರಕಾರ ಪರಿಹಾರ ನೀಡಬೇಕು ಯುವ ಮುಖಂಡ ವಿರೇಶ ಉಪ್ಪಾರ ಮುದಗಲ್ ಒತ್ತಾಯ ಮಾಡಿದರು.