ಆಪರೇಷನ್ ಕೋಣೆಯಲ್ಲಿ ಗುಜರಿ ಸಾಮಗ್ರಿ:ಜಿಪಂ ಸಿಇಓ ಆಕ್ರೋಶ

ಕಲಬುರಗಿ ಆ 6: ಅಳಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ ಬದೋಲೆ ಅವರು ಕಡಗಂಚಿ ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶಗೊಡ ಘಟನೆ ನಡೆದಿದೆ.
À ಕಡಗಂಚಿ ಗ್ರಾಮದ ಪ್ರಾಥಮಿಕಆರೋಗ್ಯ ಕೇಂದ್ರಕ್ಕೆ ಭೇಟಿಯ ಸಂದರ್ಭದಲ್ಲಿ ಸ್ಥಳೀಯ ವೈದ್ಯಾಧಿಕಾರಿಗಳು ಹಾಜರಿರಲಿಲ್ಲ.ಸುಮಾರು ಹೊರರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದು,ವೈದ್ಯರಿಲ್ಲದೇ ಇರುವುದರಿಂದ ತೊಂದರೆ ಅನುಭವಿಸಿರುವುದುಕಂಡುಬಂತು. ಆಸ್ಪತ್ರೆ ವಾರ್ಡ, ಹೆರಿಗೆ ಕೋಣೆ, ಶಸ್ತ್ರ ಚಿಕಿತ್ಸಾ ಕೊಠಡಿ ವೀಕ್ಷಿಸಿದರು.ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಆಸ್ಪತ್ರೆಯ ಅನುಪಯುಕ್ತ ಸಾಮಗ್ರಿಗಳು ಇಟ್ಟಿದ್ದು ಕಂಡುಬಂದಿದ್ದು, ಇದನ್ನು ಕಂಡು ತೀವ್ರಆಕ್ರೋಶಗೊಂಡು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿದರು. ಈ ವೈದ್ಯರ ಸಂಬಳದಿಂದಆಸ್ಪತ್ರೆಯಲ್ಲಿ ಉಪಯೋಗಿಸದೇ ಇರುವ ವೈದ್ಯಕೀಯಉಪಕರಣಗಳ ನಿರ್ವಾಹಣೆ ಖರ್ಚು ವೆಚ್ಚವನ್ನು ಭರಿಸಲು ಸೂಚಿಸಿದರು.
ಕಡಗಂಚಿ ಗ್ರಾಮದಲ್ಲಿ ಎನ್‍ಆರ್‍ಎಲ್‍ಎಮ್‍ಯೋಜನೆ ಅಡಿ ಕಡಗಂಚಿ ಸಂಜೀವನಿ ಗ್ರಾಮ ಪಂಚಾಯತ ಮಟ್ಟದಒಕ್ಕೂಟದ ವತಿಯಿಂದ ಪ್ರಾರಂಭಿಸಿರುವ ಸಂಜೀವಿನಿ ಸಖಿ ಸ್ಯಾನಿಟರಿನ್ಯಾಪಕಿನ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿಉತ್ಪಾದಕಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಸಹಾಯಸಂಘದ ಸದಸ್ಯರೊಂದಿಗೆ ಸ್ಯಾನಿಟರಿ ನ್ಯಾಪಕಿನ್ ಘಟಕದ
ಉತ್ಪಾದನೆಯ ಹಂತದ ಕುರಿತು ವೀಕ್ಷಿಸಿ, ನಂತರ ಸಂಜೀವಿನಿ ಸಖಿ
ಸಂಘದ ಅಧ್ಯಕ್ಷರ ಹಾಗೂ ಸದಸ್ಯರ ಜೊತೆ ಚರ್ಚಿಸಿದರು.
ಸಂಘದ ಮಹಿಳೆಯರು ಸ್ವಾವಲಂಬಿಯಾಗಿ ಎನ್‍ಆರ್‍ಎಲ್‍ಎಮ್
ಯೋಜನೆಯಡಿ ಸಮುದಾಯ ಬಂಡವಾಳ ನಿಧಿ ಸಾಲ ಪಡೆದು ಈ
ಘಟಕವನ್ನು ಪ್ರಾರಂಭಿಸಲಾಗಿದ್ದು, ಪ್ರಸ್ತುತ ಘಟಕದಲ್ಲಿ 16
ಸದಸ್ಯರು ಕಾರ್ಯನಿರ್ವಹಿಸುತ್ತಿದ್ದು, ದಿನ ಒಂದಕ್ಕೆ ನೂರು
ನ್ಯಾಪಕಿನ್ ಪ್ಯಾಡ್‍ಗಳನ್ನು ಸಿದ್ದಪಡಿಸಿ, 8 ಪ್ಯಾಡ್‍ಗಳ ಒಂದು
ಪ್ಯಾಕ್‍ನ್ನು ತಯಾರಿಸಿ, ದರ 30 ರೂಗಳಂತೆ ಸ್ಥಳೀಯವಾಗಿ
ಎಮ್‍ಬಿಕೆ,ಎಲ್‍ಸಿಆರ್‍ಪಿ ಹಾಗೂ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ
ಮಾಡಲಾಗುತ್ತಿದೆ.ಅಳಂದ ತಾಲೂಕಿನ ಕಡಗಂಚಿ, ಕೊಡಲಹಂಗರಗಾ, ಖಜೂರಿ ಗ್ರಾಮಗಳಲ್ಲಿನ ರೈತರು ತೋಟಗಾರಿಕೆ ಇಲಾಖೆಯ ಅಡಿಯಲ್ಲಿ
ಕಡಗಂಚಿ ಗ್ರಾಮದಲ್ಲಿ ಸರ್ಕಾರದ ಸಬ್ಸಿಡಿ ಅನುದಾನ ಪಡೆದು
ಬೆಳೆದ ಮೂರುವರೆ ಎಕರೆಯಲ್ಲಿ ಬಾಳೆ ಹಾಗೂ
ಟೊಮೋಟೋ ಬೆಳೆ ವೀಕ್ಷಣೆ ಮಾಡಿದರು. ಸಬ್ಸಿಡಿ ದರದಲ್ಲಿ
ರೈತರು ಖರೀದಿಸಿದ ಟ್ಯಾಕ್ಟರ್‍ಗಳನ್ನು ವೀಕ್ಷಣೆ ಮಾಡಿ, ರೈತರ
ಜೊತೆ ಟ್ಯಾಕ್ಟರಗಳ ಉಪಯೋಗದ ಕುರಿತು ಚರ್ಚೆ
ಮಾಡಿದರು. ಕೂಡಲಹಂಗರಗಾ ಗ್ರಾಮದಲ್ಲಿ ನಿರ್ಮಾಣ
ಮಾಡಿರುವ ರೈತರ ಕೃಷಿ ಹೊಂಡ ಹಾಗೂ ಪಾಲಿಹೌಸ್ ವೀಕ್ಷಿಸಿ ನಂತರ
ಖಜೂರಿ ಗ್ರಾಮದ ರೈತರ ಜಮೀನಿನಲ್ಲಿ ನಿರ್ಮಾಣ ಮಾಡಿರುವ ಇರುಳ್ಳಿ
ಶೇಖರಣ ಘಟಕಕ್ಕೆ ಭೇಟಿ ವೀಕ್ಷಣೆ ಮಾಡಿ, ನಂತರ ಸಿದ್ದೇಶ್ವರ
ನೀರು ಬಳಕೆದಾರ ಸಂಘದವರು ನಿರ್ಮಾಣ ಮಾಡಿರುವ ಕೃಷಿ
ಹೊಂಡ ವೀಕ್ಷಿಸಿದರು. ಸ್ಥಳದಲ್ಲಿ ಉಪಸ್ಥಿತರಿದ್ದತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಿಗೆ ಜಿಲ್ಲೆಯಾದ್ಯಂತಹೆಚ್ಚು ಹೆಚ್ಚು ಸರ್ಕಾರದ ಇಲಾಖೆಯ ಸೌಲಭ್ಯಗಳನ್ನುರೈತರಿಗೆ ಮಂಜೂರು ಮಾಡಿ ಅನುಕೂಲ ಮಾಡಿಕೊಡಲು
ಸೂಚಿಸಿದರು