ಆಪತ್ತಿಗಾಗುವ ರಕ್ತ ದಾನಿಗಳೇ ಪ್ರತ್ಯಕ್ಷ ದೇವರಗಳು

????????????????????????????????????

ಸಿರುಗುಪ್ಪ, ಜ.02: ದಾನಗಳಲ್ಲಿ ಶ್ರೇಷ್ಟ ದಾನ ರಕ್ತದಾನವಾಗಿದ್ದು ಯಾರು ಕುಲ ಮತವನ್ನು ಲೆಕ್ಕಿಸದೆ ಆಪತ್ತಿನಲ್ಲಿರುವವರಿಗೆ ರಕ್ತದಾನ ಮಾಡುತ್ತಾರೋ ಅವರೇ ಪ್ರತ್ಯಕ್ಷ ದೇವರುಗಳು ಎಂದು ಆರ್.ಟಿ.ಐ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಸಮಾಜಸೇವಕರಾದ ಎ.ಎಂ.ಪಿ. ವಾಗೀಶರವರು ಅಭಿಪ್ರಾಯಪಟ್ಟರು.
ನಗರದ ಶ್ರೀಯಲ್ಲಮ್ಮ ದೇವಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಮಾಜಸೇವಕರಾದ ಎ.ಎಂ.ಪಿ. ವಾಗೀಶರವರ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿ ಬಳಗ,ಹಾಗೂ ಎಸ್.ಸಿ,ಎಸ್.ಟಿ ಮತ್ತು ಒ.ಬಿ.ಸಿ ಇಲಾಖೆ ಕೃಷಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ, ಹಿರಿಯ ನಾಗರಿಕರಿಗೆ ಹೊದಿಕೆಗಳ ವಿತರಣೆ ಹಾಗೂ ರೈತರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಮೇಲೆ ಬಂದವರು ಶೋಷಿತವರ್ಗವನ್ನು ಗುರುತಿಸಿ ಅವರಿಗೂ ಉತ್ತಮ ಶಿಕ್ಷಣ ಕೊಡಿಸಿ ಮೇಲೆತ್ತುವ ಕೆ¯ಸ ಮಾಡಿದಾಗ ಮಾತ್ರ ಸಮಾಜದಲ್ಲಿನ ಅಸಮತೋಲನವನ್ನು ಹೋಗಲಾಡಿಸಲು ಸಾಧ್ಯವೆಂದು ತಿಳಿಸಿದರು.
ಸಮಾರಂಭದಲ್ಲಿ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಶಾಷು ಮೋಹಿದ್ದೀನ್ ಮಾತನಾಡಿ ಜನರ ಭಾವನೆಗಳನ್ನು ಅರಿತವರು ಮಾತ್ರ ಸಮಾಜಸೇವೆ ತೊಡಗಲು ಸಾಧ್ಯ ಸಮಾಜದ ಕೆಳಸ್ತರದವರಿಗೆ ಸಹಾಯ ಹಸ್ತ ನೀಡುವವರಿಗೆ ಇಲಾಖೆಯ ಸಹಾಯ ಯಾವಗಲೂ ಇರುತ್ತದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಗ್ರ ಕೃಷಿಯಲ್ಲಿ ಪ್ರಗತಿ ಹೊಂದಿದ ಬಲಕುಂದಿ ಗ್ರಾಮದ ರೈತ ರುದ್ರಮುನಿಸ್ವಾಮಿ ಯವರನ್ನು ಸನ್ಮಾನಿಸಲಾಯಿತು ಶಶಿಧರಕೋಟೆ ಸಮಾಜ ಸೇವಕರು ರಾಘವೇಂದ್ರವರ್ಮ, ತಾಲೂಕು ಪ.ವರ್ಗ.ಕಲ್ಯಾಣಾಧಿಕಾರಿಗಳು. ಸಿರುಗುಪ್ಪ, ಗಾದಿಲಿಂಗಪ್ಪ. ತಾಲೂಕು ಹಿಂದುಳಿದ ವರ್ಗಗಳ ಇಲಾಖೆ ಸಿರುಗುಪ್ಪ, ಕಾಳಿಂಗಪ್ಪ. ಪ್ರಾಂಶುಪಾಲರು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ. ನಡವಿ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಾದ ಮಡ್ಡೇರು ಸಿದ್ದಯ್ಯ. ಬಾಳಪ್ಪ ಕವಲೂರುಪತ್ರಕರ್ತರಾದ ವೀರೇಶ.ಎಂ. ಮಾರೆಪ್ಪ ನಾಯಕ.ಡಿ, ಕೃಷಿ ಅಧಿಕಾರಿಗಳಾದ ಪುರಷೋತ್ತಮ.ವೈ, ವಾಣಿಶ್ರೀ.ಹೆಚ್, ವೈ.ಡಿ.ವೆಂಕಟೇಶ.ಅಧ್ಯಕ್ಷರು ಯಲ್ಲಮ್ಮ ದೇವಿ ಹಿರಿಯ ಪ್ರಾಥಮಿಕ ಶಾಲೆ.ಲೋಕೇಶ,ಹಾಗೂ ಇನ್ನಿತರ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.