“ಆನ‌” ಚಿತ್ರೀಕರಣ ಮುಕ್ತಾಯ

ಮಹಿಳಾ ಪ್ರಧಾನದ ಸೂಪರ್ ಹೀರೋ ಕನ್ಸೆಪ್ಟ್ ನ ” ” ಆನ” ಚಿತ್ರೀಕರಣ ಪೂರ್ಣಗೊಂಡಿದೆ .

ನಟಿ ಅದಿತಿ ಪ್ರಭುದೇವ ವಿಭಿನ್ನ ಪಾತ್ರ ನಿರ್ವಹಣೆ ಮಾಡಿದ್ದಾರೆ.

ಹೆಸರುಫಟ್ಟ ಬಳಿ‌ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಸಲಾಗಿದ್ದು, ಅಲ್ಲೇ‌ ಚಿತ್ರೀಕರಣ ಪೂರ್ಣಗೊಳಿಸಿ ಕುಂಬಳಕಾಯಿ ಒಡೆಯಲಾಗಿದೆ.

ಮಾತಿನ ಜೋಡಣೆ ಕೂಡ ಮುಕ್ತಾಯ ಹಂತದಲ್ಲಿದ್ದು, ಮಾರ್ಚ್‌ ನಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ.

ಮನೋಜ್ ಪಿ ನಡುಲಮನೆ ನಿರ್ದೇಶಿಸಿದ್ದಾರೆ.

ಪೂಜಾವಸಂತಕುಮಾರ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ, ರಿತ್ವಿಕ್ ಮುರಳೀಧರನ್‌ ಸಂಗೀತ ವಿದೆ.

ಅದಿತಿ ಪ್ರಭುದೇವ, ಸುನೀಲ್ ಪುರಾಣಿಕ್, ಚೇತನ್ ಗಂಧರ್ವ, ಸುನೀಲ್ ಕುಮಾರ್ ಡಿ.ಕೆ, ವಿಕಾಶ್ ಉತ್ತಯ್ಯ, ಪ್ರೇರಣ ಕಂಬಂಮ್, ವರುಣ್ ಅಮರವಾತಿ, ಸಮರ್ಥ್ ನರಸಿಂಹರಾಜು, ಕಾರ್ತಿಕ್ ನಾಗಾರಾಜಾನ್, ಶಿವಮಂಜು

ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.