ಆನ್ ಲೈನ್ ಶಿಕ್ಷಣ ಕಲಿಕೆಗೆ ಸಹಕಾರಿ

ಜಗಳೂರು.ಜ.೯; ಅಂತರ್ಜಾಲ ಶಿಕ್ಷಣವು  ವಿದ್ಯಾರ್ಥಿಗಳ ಕಲಿಕಾ ಬೋಧನೆಗೆ ಸಹಕಾರಿಯಾಗಿದ್ದು ಪ್ರತಿಯೊಬ್ಬರು ಇಂತಹ ಸೌಲಭ್ಯ ಪಡೆದು ಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ  ವೆಂಕಟೇಶ್ ಹೇಳಿದರು   ಸಾರ್ವ ಜನಿಕ  ಶಿಕ್ಷಣ ಇಲಾಖೆ  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ  ಪಟ್ಟಣದ ಬೇಡರ ಕಣ್ಣಪ್ಪ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ   ಎನ್ ಟಿಎಸ್ ಇ ಮತ್ತು ಎನ್ ಎಂಎಂಎಸ್ ಪರೀಕ್ಷೆಯನ್ನು ತೆಗೆದುಕೊಂಡ ವಿದ್ಯಾರ್ಥಿಗಳಿಗೆ ಸ್ಪರ್ಧಾಕಲಿ ಆನ್ಲೈನ್ ತರಬೇತಿಯ ಕಾರ್ಯಕ್ರಮ  ಉದ್ಘಾಟನೆ ನೆರೆವೇರಿಸಿ ಮಾತನಾಡಿದರು ಪ್ರತಿದಿನ   10.30 ರಿಂದ11.30 ರವರೆಗೆ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ   ಹತ್ತು ದಿನಗಳ ಆನ್ಲೈನ್ ತರಬೇತಿಯನ್ನು  ಕೋವಿಡ್ ಸಂಕಷ್ಟದ ಕಾಲದಲ್ಲಿ ಮುಖಾಮುಖಿ ತರಬೇತಿಯನ್ನು ವಿದ್ಯಾರ್ಥಿಗಳಿಗೆ ಹಮ್ಮಿ ಕೊಳ್ಳಲು ಸಾಧ್ಯವಾಗಿಲ್ಲ. ಆದರೂ  ವಿಧ್ಯಾರ್ಥಿಗಳ ಹಿತ ದೃಷ್ಟಿಯಿಂದ ಆನ್ ಲೈನ್ ತರಬೇತಿಗೆ ಅವಕಾಶ ನೀಡಿದ್ದೇವೆ  ಬಾರಿ ತಾಲ್ಲೂಕಿನಲ್ಲಿ ಹೆಚ್ಚು ವಿದ್ಯಾರ್ಥಿಗಳು ಅರ್ಹತೆಗಳಿಸಿ ತಾಲ್ಲೂಕಿನ ಹಿರಿಮೆಯನ್ನು ಹೆಚ್ಚಿಸುವಂತೆ ಮನವಿ ಮಾಡಿದರು
ಸ್ಪರ್ಧಾಕಲಿ ಆನ್ಲೈನ್ ತರಬೇತಿ ಹತ್ತು ದಿನಗಳ ಕಾಲ ಆನ್ ಲೈನ್ ನಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ   ವಿದ್ಯಾರ್ಥಿಗಳಿಗೆ  ತರಬೇತಿಯನ್ನು ನಿಡುತ್ತಿದ್ದೇವೆ ಆದ್ದರಿಂದ  ಎಲ್ಲಾ ಮುಖ್ಯ ಶಿಕ್ಷಕರು  ತಪ್ಪದೆ  ತಮ್ಮ ಶಾಲೆಯಲ್ಲಿ ಲಭ್ಯವಿರುವ ಪ್ರೊಜೆಕ್ಟರ್ ಮತ್ತು ಮೊಬೈಲ್ ಫೋನ್ ಮೂಲಕ ವಿದ್ಯಾರ್ಥಿಗಳು ಪಾಠವನ್ನು ವೀಕ್ಷಿಸಿ ಅದರ ಸದುಪಯೋಗವನ್ನು ಪಡೆದುಕೊಳ್ಳಲು  ಸಹಕಾರಿಯಾಗಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಇಸಿಒ ಹನಮಂತಪ್ಪ ಇಸಿಒ ಮಂಜಣ್ಣ .ಸಂಪನ್ಮೂಲ ವ್ಯಕ್ತಿಗಳಾದ ವೆಂಕಟೇಶ್ ಪ್ರದೀಪ್, ಮಂಜುನಾಥ್ ,ರುದ್ರೇಶ್ ಮತ್ತು ಶಾಲೆಯ ಮುಖ್ಯಶಿಕ್ಷಕ ನಂದಗೋಪಾಲ್ ಇತರ ಶಿಕ್ಷಕರು ಭಾಗವಹಿಸಿದ್ದರು