ಆನ್ ಲೈನ್ ವಸ್ತು ಡೋರ್ ಡೆಲಿವರಿ ಮಾಡುವವರಿಗೆ ಅರಿವು ಮೂಡಿಸಲು ಮನವಿ

ದಾವಣಗೆರೆ.ಏ.೨೨; ರಾಜ್ಯದಲ್ಲಿ ಕರ್ಪ್ಯೂ ಸಮಯದಲ್ಲಿ ಹಾಗೂ ನೈಟ್ ಕರ್ಪ್ಯೂ ಸಮಯದಲ್ಲಿ ವಿವಿಧ ಮೊಬೈಲ್ ಆಫ್ ಬಳಸಿ ಆನ್ ಲೈನ್ ಆಹಾರ ಡೋರ್ ಡೆಲಿವರಿ ಮಾಡುವ ಕಂಪನಿಗಳು ಸ್ಥಳೀಯವಾಗಿ ಕಛೇರಿಗಳ ಹೊಂದಿರುವ ಬಗ್ಗೆ ಮಾಹಿತಿ ಮತ್ತು ಡೆಲಿವರ್ ಮಾಡುವವರ ಗುರುತಿನ ಪತ್ರ ಹೊಂದದೆ,ಸ್ಥಳಿಯ ಪೊಲೀಸ್  ಪರಿಶೀಲನೆ ಪ್ರಮಾಣ ಪತ್ರ ಬಗ್ಗೆ, ಮೆಡಿಕಲ್ ಪ್ರಮಾಣ ಪತ್ರ ಹಾಗೂ ಡೆಲಿವರ್ ಮಾಡುವವರು ಉತ್ತಮವಾದ ಸ್ವಚ್ಚ ಉಡುಗೆಗಳನ್ನು ಹಾಕದೇ ,ಫೇಸ್ ಮಾಸ್ಕ್  ಧರಿಸಿದೆ ,ಕೈ ಗಳಿಗೆ ಗ್ಲೌಸ್ ಹಾಕದೇ ಆಹಾರ ಪದಾರ್ಥಗಳನ್ನು ಡೆಲಿವರಿ ಮಾಡುತ್ತಿದ್ದಾರೆ ಅಂತವರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ ಶ್ರೀಕಾಂತ್ ಮನವಿ ಮಾಡಿದ್ದಾರೆ. ಇವರು ದಿನ ಪೂರ್ತಿ ನಗರವೆಲ್ಲಾ ಸುತ್ತಾಡುತ್ತಾರೆ.ಇವರ ಬಳಿ ನೊಂದಣಿಯಾದ ಅನೇಕ ಆಹಾರ ತಯಾರಕರು ಸ್ಥಳೀಯವಾಗಿ ಟ್ರೇಡ್ ಲೈಸನ್ಸ್ ಪಡೆದಿರುವುದಿಲ್ಲಾ,ಹಾಗೂ ಆನ್ ಲೈನ್ ಆಹಾರ ವಿತರಣೆಗೆ ಕಂಪನಿಗಳಿಗೆ ನೊಂದಣಿ ಯಾದ  ಸರಬರಾಜು ಮಾಡುವವರ ಬಗ್ಗೆ   ಆಹಾರ ಸುರಕ್ಷತಾ ಅಧಿಕಾರಿಗಳು ಆಹಾರ ಪದಾರ್ಥ ಸಿದ್ದ ಪಡಿಸುವ ಸ್ಥಳಗಳಿಗೆ ಭೇಟಿ ನೀಡದೆ ಪರಿಶೀಲನೆ ಮಾಡದೆ ಲೈಸನ್ಸ್ ನೀಡಿರುತ್ತಾರೆ,ಅನೇಕ ಆಹಾರ ಪದಾರ್ಥಗಳ ಸಿದ್ದ ಪಡಿಸುವ ಸ್ಥಳ ಗಳನ್ನು ತ್ವರಿತವಾಗಿ ಪರಿಶೀಲನೆ ಮಾಡಬೇಕಾಗಿದೆ, ನೈಟ್ ಕರ್ಪ್ಯೂ ರಾತ್ರಿ 9 ಗಂಟೆ ನಂತರ ಯಾವುದೇ ಆಹಾರ ಪದಾರ್ಥಗಳ ಡಿಲಿವರಿ ಮಾಡಲು ಮಾಡಲು ಅನುಮತಿ ನೀಡದಂತೆ ಸೂಕ್ತ ಕ್ರಮ ವಹಿಸಲು ಮನವಿ ಮಾಡುತ್ತೇನೆ,ಆನ್ ಲೈನ್ ನಲ್ಲಿ ನೊಂದಣಿ ಯಾಗದೇ ಸ್ಥಳಿಯವಾಗಿ ಇರುವ ಬಹಳಷ್ಟು ತಿಂಡಿ ಊಟದ ಹೋಟಲ್ ಬೀದಿ ಬದಿಯ ವ್ಯಾಪಾರಗಳ ಜೀವನ ಕಷ್ಟದಲ್ಲಿದೇ ಅವರುಗಳ ಹಿತಾಸಕ್ತಿಯನ್ನು ಕಾಪಾಡಲು ತಮ್ಮಲ್ಲಿ ಕೋರಿದೆಈ ಬಗ್ಗೆ ಪರಿಶೀಲನೆ ಮಾಡಲು ಹಾಗೂ ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ.