ಆನ್ ಲೈನ್ ಮೂಲಕ ಪರವಾನಗಿ

ಚಿತ್ತಾಪುರ:ಜ.3: ತಾಲೂಕು ತೋಟಗಾರಿಕೆ ಇಲಾಖೆಯಿಂದ ಬೀಜ ಮಾರಾಟ ಪರವಾನಗಿ ಪ್ರಮಾಣ ಪತ್ರ ತೋಟಗಾರಿಕಾ ಬೆಳೆಗಳ ಬೀಜ ಹಾಗೂ ಗಿಡಗಳ ಬೆಳೆಗಾರರಿಗೆ ನೊಂದಣಿ ದೃಢೀಕರಣ ಪತ್ರ ನೀಡುವ ಸೇವೆಗಳನ್ನು ಕಡ್ಡಾಯವಾಗಿ ಆನ್ ಲೈನ್ ತಂತ್ರಾಂಶದ ಮೂಲಕ ನೀಡಲಾಗುತ್ತಿದೆ.

ತಾಲೂಕಿನಲ್ಲಿರುವ ಎಲ್ಲಾ ಮಳಿಗೆಗಳು ಹಾಗೂ ತೋಟಗಾರಿಕೆ ಬೆಳೆಗಳ ಬೀಜ ಹಾಗೂ ಗಿಡಗಳ ಬೆಳೆಗಾರರು ಸಕಲ ಸೇವೆಯಡಿ ಸೇವಾ ಸಿಂಧು ತಂತ್ರಾಂಶದಲ್ಲಿ (ಆನ್ ಲೈನ್) ಅರ್ಜಿ ಸಲ್ಲಿಸಿ ಸೇವೆಗಳನ್ನು ಪಡೆಯಬಹುದು. ಪರವಾನಿಗೆ ಪಡೆಯದೇ ಬೀಜ ಮಾರಾಟ ಮಾಡುವುದು ಅನಧಿಕೃತವಾಗುವುದರಿಂದ ಮುಂದಿನ ದಿನಗಳಲ್ಲಿ ತಮ್ಮ ಅಂಗಡಿ ಪರವಾನಿಗಿ ಪಡೆಯುವುದು ಅವಶ್ಯವಾಗಿದೆ ಎಂದು ಚಿತ್ತಾಪುರ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ಇಲಾಖೆಯ ನಿರ್ದೇಶಕರಾದ ಸಿದ್ದಣ್ಣ ಅಣಬಿ ತಿಳಿಸಿದ್ದಾರೆ. 9449004777 ಮಾಹಿತಿಗಾಗಿ ಸಂಪರ್ಕಿಸಬಹುದು.