ಆನ್‌ಲೈನ್ ಪ್ರವಚನ

ಬೆಂಗಳೂರು.ಏ.೨೨: ಇಂದಿರಾನಗರ, ದೇವನಹಳ್ಳಿಯಲ್ಲಿ ಅಂಧ ಮಕ್ಕಳ ಶಾಲೆ ಆರಂಬಿಸಿ ಸಾವಿರಾರು ಅಂಧ ಮಕ್ಕಳಿಗೆ ಉಚಿತವಾಗಿ ಅನ್ನ, ಅಕ್ಷರ, ಆಶ್ರಯ ನೀಡಿದ ಸ್ವಾಮೀಜಿ ಶ್ರೀ ರಾಕುಂಜೀರವರು ವಿಶ್ವ ಶಾಂತಿ, ಲೋಕ ಕಲ್ಯಾಣಕ್ಕಾಗಿ ಕಳೆದ ೪೦೦ ದಿನಗಳಿಂದ ಸತತವಾಗಿ ಆನ್‌ಲೈನ್ ಮೂಲಕ ಮಹಾಭಾರತ, ರಾಮಾಯಣ, ಸೇರಿದಂತೆ ಹಲವಾರು ಮಹನೀಯರ ಬಗ್ಗೆ ಸಾರ್ವಜನಿಕರಿಗೆ ಜ್ಞಾನರ್ಜನೆಗಾಗಿ ಆನ್‌ಲೈನ್ ಮೂಲಕ ಪ್ರವಚನ ನೀಡಿದರು.
ಇದೇ ಸಂದರ್ಭದಲ್ಲಿ ಸ್ವಾಮೀಜಿ ಶ್ರೀ ರಾಕುಂಜೀರವರು ಮಾತನಾಡಿ ಮನುಷ್ಯ ತನ್ನ ಅತಿಯಾದ ಆಸೆಯಿಂದ ಇಂದು ಪ್ರಪಂಚ ವಿನಾಶದತ್ತ ಸಾಗುತ್ತಿದೆ. ನಾನು, ನನ್ನದು ಎಂಬ ಅಹಂಭಾವನೆ ಬೆಳಸಿಕೊಂಡು ಮಾನಸಿಕವಾಗಿ ಕುಗ್ಗುತ್ತಿದ್ದಾನೆ ಎಂದರು.
ಕಾಡು ನಾಶವಾಗಿ, ಕಾಂಕ್ರೀಟ್ ನಾಡಾಗಿ ಪ್ರಾಣಿಗಳು ವಲಸೆ ಬರುತ್ತಿದೆ. ಮನುಷ್ಯ ಆಸೆಗೆ ಮಿತಿ ಇರಲಿ, ಇಲ್ಲದೇ ಹೋದರೆ ನಾಶದತ್ತ ಸಾಗುವುದು ಖಚಿತ .
ಹಣ ಮಾಡುವ ಉದ್ದೇಶ ಸರಿಯಾಗಿದೆ. ಆದರೆ ಉತ್ತಮ ಮಾರ್ಗದಿಂದ ಕಾಯಕ ಶ್ರಮದಿಂದ ಹಣಗಳಿಸಿ. ಸ್ವಲ್ಪ ಹಣವನ್ನು ಸಮಾಜದ ಅಭಿವೃದ್ದಿ ಉಪಯೋಗ ಮಾಡಿ.
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬುದು ಅರಿಯಬೇಕು. ಬಡತನ ನಿರ್ಮೂಲನೆಯಾಗಬೇಕಾದರೆ ಬಡವನ ಕೈಗೆ ದುಡಿಮೆ ನೀಡಿ, ಆರ್ಥಿಕ ಸಹಾಯ ಮಾಡಿ ಮತ್ತು ವಯೋವೃದ್ದರನ್ನು ಆನಾಥರಾಗಲು ಬೀಡಬೇಡಿ ಎಂದು ತಿಳಿಸಿದರು.