ಆನ್ಲೈನ್ ವಂಚನೆ ಕಂಡು ಬಂದರೆ ತಕ್ಷಣ ದೂರು ನೀಡಿ : ಜಿಲ್ಲಾಧಿಕಾರಿ ಡಾ.ಸುಶೀಲ.ಬಿ

ಯಾದಗಿರಿ: ಮೇ 25:ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್‍ಬುಕ್ ನ ನಕಲಿ ಖಾತೆಗಳನ್ನು ಸೃಷ್ಟಿ ಮಾಡಿ ಡಿಪಿಗೆ ಜಿಲ್ಲಾಧಿಕಾರಿ ಹೆಸರು ಮತ್ತು ಫೆÇೀಟೋವನ್ನು ಬಳಕೆ ಮಾಡಿ ಸಾರ್ವಜನಿಕರಿಗೆ, ಜಿಲ್ಲಾ ಮಟ್ಟದ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಮೆಸೇಜ್ ಮಾಡಿ ಹಣದ ಬೇಡಿಕೆಯಿಟ್ಟು ವಂಚನೆ ಮಾಡುವುದು ಕಂಡು ಬಂದರೆ ತಕ್ಷಣ ದೂರು ನೀಡಿ ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ತಿಳಿಸಿದ್ದಾರೆ.

ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ಸೃಷ್ಟಿ ಮಾಡಿ ಜಿಲ್ಲಾಧಿಕಾರಿಗಳ ಹೆಸರು ಮತ್ತು ಡಿಪಿ ಯಲ್ಲಿ ಪೆÇೀಟೋ ಬಳಸಿಕೊಂಡು ವಂಚನೆ ಮಾಡಲು ಯತ್ನಿಸುವ ಪ್ರಕರಣಗಳು ಕಂಡು ಬಂದಿದ್ದು ಸೈಬರ್ ಕ್ರೈಮ್ ನಲ್ಲಿ ದೂರು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅಧಿಕಾರಿಗಳು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಮೊಬೈಲ್ ಬಳಕೆ ಮಾಡುವುದರ ಜೊತೆಗೆ ಆನ್ಲೈನ್ ವಂಚಕರ ಫೆÇೀನ್ ಮತ್ತು ಮೆಸೆಜ್ ಗಳು ಬಂದಾಗ ಎಚ್ಚರಿಕೆಯಿಂದ ಮೊಬೈಲ್ ಬಳಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.