ಆನ್ಲೈನ್ ಜೀವನ ಪ್ರಮಾಣ ಪತ್ರ ಸಕ್ರಿಯಗೊಳಿಸಲು ಕರೆ

ಕಲಬುರಗಿ: ಏ.18:ನಗರದ ಆಳಂದ ರಸ್ತೆಯಲ್ಲಿರುವ ಇ.ಪಿ.ಎಫ್ ಕ್ಷೇತ್ರೀಯ ಕಾರ್ಯಾಲಯದಿಂದ ಭವಿಷ್ಯ ನಿಧಿ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರು ವರ್ಷಕ್ಕೊಮ್ಮೆ ಆನ್ಲೈನ್ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಕೆಲವು ಭವಿಷ್ಯ ನಿಧಿ ಪಿಂಚಣಿದಾರರು ಆನ್ಲೈನ್ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸದ ಕಾರಣ ತಿಂಗಳ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿದೆ. ಅಂತಹ ಪಿಂಚಣಿದಾರರು ಕೂಡಲೇ ಸಂಭಂದಿಸಿದ ಬ್ಯಾಂಕ್, ಸಮೀಪದ ಸಿ.ಎಸ್.ಸಿ ಕೇಂದ್ರ, ಅಂಚೆ ಕಚೇರಿ ಅಥವಾ ಮೊಬೈಲ್ ಮೂಲಕ ಆನ್ಲೈನ್ ಜೀವನ ಪ್ರಮಾಣ ಪತ್ರವನ್ನು ಸಕ್ರಿಯಗೊಳಿಸಿ ತಿಂಗಳ ಪಿಂಚಣಿಯನ್ನು ಪುನರಾರಂಭ ಮಾಡಿಕೊಳ್ಳಬೇಕೆಂದು ಸಹಾಯಕ ಭವಿಷ್ಯ ನಿಧಿ ಆಯುಕ್ತ ಟಿ.ಎನ್. ನಂದನಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.