ಆನ್‍ಲೈನ್‍ನಲ್ಲಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿ ಬಂಧನ: 16 ಲಕ್ಷ ಹಣ, ಒಡವೆ ವಸ್ತು ವಶ

ಮಂಡ್ಯ: ಏ.06:- ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಆನ್‍ಲೈನ್ ನಲ್ಲಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಬಂಧಿಸಿ ಆತನಿಂದ 16 ಲಕ್ಷ ರೂ.ಮೌಲ್ಯದ ಹಣ, ಒಡವೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೋಲಿಸ್ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
ಪ್ರಕರಣದ ವಿವರ: ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ಫಿರ್ಯಾದಿಯೊಬ್ಬರು ಹಾಜರಾಗಿ ದೂರೊಂದನ್ನು ನೀಡಿ ತಾನು ಟiಟಿgಚಿಥಿಚಿಣmಚಿಣಡಿimoಟಿಥಿ.ಛಿom ನಲ್ಲಿ ತನ್ನ ವೈಯಕ್ತಿಕ ವಿವರಗಳನ್ನು ದಾಖಲು ಮಾಡಿದ್ದು, ಇದರಿಂದ ವ್ಯಕ್ತಿಯೊಬ್ಬ ಪರಿಚಯವಾಗಿ ತನಗೆ ರೈಲ್ವೆ ಇಲಾಖೆಯಲ್ಲಿ ಕ್ಲರ್ಕ್ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಾವತಿಸಲು ವಿವಿಧ ಕಾರಣಗಳನ್ನು ನೀಡಿ ಹಂತ ಹಂತವಾಗಿ ಫೋನ್‍ಫೇ, ಗೂಗಲ್ ಹಾಗೂ ಇತರೆ ಆನ್‍ಲೈನ್ ಪೇಮೆಂಟ್ ಮುಖಾಂತರ ಒಟ್ಟು 31,34,300/- ರೂ ಹಣವನ್ನು ಪಾವತಿಸಿಕೊಂಡು ಕೆಲಸ ಕೊಡಿಸದೆ ಮತ್ತು ಹಣ ವಾಪಸ್ ನೀಡದೆ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಂಡ್ಯ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಮೇಲ್ಕಂಡಂತೆ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
16 ಲಕ್ಷ ರೂ. ಮೌಲ್ಯದ ನಗದು ಚಿನ್ನಾಭರಣ ವಶ
ಸಿ.ಇ.ಎನ್ ಅಪರಾಧ ಪೊಲೀಸ್ ಠಾಣಾ ಪಿ.ಐ ಎನ್.ಜಯಕುಮಾರ್ ರವರ ನೇತೃತ್ವದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯವರ ವಿಶೇಷÀ ತಂಡ ರಚನೆ ಮಾಡಲಾಗಿತ್ತು. ಸದರಿ ತಂಡವು ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಮಾಡಿ ಮಂಡ್ಯ ತಾಲ್ಲೂಕಿನ ಮಾಚಹಳ್ಳಿ ಗ್ರಾಮದ ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆತನು ಮೋಸ ಮಾಡಿ ಪಡೆದ ಹಣದಲ್ಲಿ 16,00,000/- (ಹದಿನಾರು ಲಕ್ಷ ರೂಪಾಯಿಗಳ ಈ ಕೆಳಕಂಡಂತೆ ಹಣ, ಒಡವೆ ಹಾಗೂ ಇತರ ವಸ್ತುಗಳು ಸೇರಿದಂತೆ ವಶಪಡಿಸಿಕೊಳ್ಳಲಾಗಿರುತ್ತದೆ.
ನಗದು ಹಣ 10,000,00/- ರೂ ಮೂರು ಚಿನ್ನದ ಉಂಗುರಗಳು ಹಾಗೂ ಒಂದು ಚಿನ್ನದ ಚೈನು ಸೇರಿ 37 ಗ್ರಾಂ, ಇವುಗಳ ಒಟ್ಟು ಮೌಲ್ಯ ಸುಮಾರು 2,34,000/- ರೂಗಳು ಒಂದು ಆಫಲ್ ಐ ಫೋನ್ ಇದರ ಮೌಲ್ಯ 1,30,000/- ರೂ ಒಂದು ಫಲ್ಸರ್ ಬೈಕ್ ವಶಪಡಿಸಿಕೊಳ್ಳಲಾಗಿರುತ್ತದೆ.
ಆರೋಪಿಯು ಇದೇ ರೀತಿ ಆನ್‍ಲೈನ್ ಮೂಲಕ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಸಾರ್ವಜನಿಕರಿಗೆ ನಂಬಿಸಿ ಮೈಸೂರು, ಕೆ.ಆರ್.ನಗರ,ದಾವಣಗೆರೆ, ಬೆಂಗಳೂರಿನ ಕಾಟನ್‍ಪೇಟೆ, ಚಿಕ್ಕಮಗಳೂರು, ಹರಿಹರ ಪೊಲೀಸ್ ಠಾಣೆ ಸೇರಿದಂತೆ ಒಟ್ಟು 06 ಪ್ರಕರಣಗಳು ದಾಖಲಾಗಿರುವುದು ವಿಚಾರಣೆ ವೇಳೆ ತಿಳಿದುಬಂದಿರುತ್ತದೆ.
ಈ ಪತ್ತೆ ದಳದ ಮಂಡ್ಯ ಸಿ.ಇ.ಎನ್ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರನ್ನು ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.