ಆನ್ಲೈನ್ನಲ್ಲಿ ಆಸ್ತಿ ತೆರಿಗೆ ಪಾವತಿ ಸುಲಭ ; ನಾಗರೀಕರು ಆನ್ಲೈನ್ ಸೌಲಭ್ಯ ಬಳಸಿಕೊಳ್ಳಿರಿ 

ಬಳ್ಳಾರಿ, ಫೆ. 02:

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯ ಆಸ್ತಿಗಳಿಗೆ ನಾಗರೀಕರು ಆನ್ಲೈನ್ ಮೂಲಕ ಆಸ್ತಿ ತೆರಿಗೆಯನ್ನು ಪಾವತಿ ಮಾಡಬಹುದು ಎಂದು ಮಹಾನಗರ ಪಾಲಿಕೆಯ ಆಯುಕ್ತ ಜಿ. ಖಲೀಲ್ ಸಾಬ್ ಅವರು ತಿಳಿಸಿದ್ದಾರೆ. 

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ಅಧಿಕಾರಿಗಳು `ಅಸ್ತಿ ತೆರಿಗೆ ನಿಗಧಿ ಮತ್ತು ಪಾವತಿ’ ಕುರಿತು ವಿವಿಧ ಸಂಘಗಳ ಪದಾಧಿಕಾರಿಗಳು, ಸದ್ಯರು ಮತ್ತು ವಾಣಿಜ್ಯೊದ್ಯಮಿಗಳು – ಕೈಗಾರಿಕೋದ್ಯಮಿಗಳಿಗೆ ಮಾಹಿತಿ ನೀಡಿದರು. 

ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಶ್ವೇತ. ಬಿ. ಸೋಮು ಅವರನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಮಹಾರುದ್ರಗೌಡ ಅವರು ಸ್ವಾಗತಿಸಿ, ಸನ್ಮಾನಿಸಿ ಅಭಿನಂದಿಸಿ, ಬಳ್ಳಾರಿ ಎಪಿಎಂಸಿಯು 1966 ರಿಂದ ಪ್ರಾರಂಭವಾಗಿದ್ದೂ ವ್ಯಾಪಾರಿಗಳು ಬಾಡಿಗೆಯನ್ನು ಪಾವತಿಸುತ್ತಿದ್ದು. ಕಳೆದ 2 – 3 ವರ್ಷಗಳಿಂದ ಎಪಿಎಂಸಿಯ ಅಂಗಡಿಗಳು ವ್ಯಾಪಾರಿಗಳಿಗೆ ಮಾರಾಟವಾಗಿವೆ. ಕಾರಣ ಪ್ರಸ್ತುತ ಸಾಲಿನಿಂದ ಆಸ್ತಿ ತೆರಿಗೆಯನ್ನು ಬಡ್ಡಿ – ದಂಡರಹಿತವಾಗಿ ಪಾವತಿ ಮಾಡಲು ಸಿದ್ದವಾಗಿದ್ದೇವೆ ಎಂದರು. 

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,  ಆಸ್ತಿ ತೆರಿಗೆಯನ್ನು ನಿಗಧಿ ಮಾಡುವ ಕುರಿತು ಸಬ್ ರಿಜಿಸ್ಟಾçರ್ ಕಚೇರಿ ಜೊತೆ ಆಸ್ತಿ ಮೌಲ್ಯವನ್ನು ನಿಗಧಿ ಮಾಡಬೇಕು ಎಂದು ಸಲಹೆ ನೀಡಿದರು.

ಬಳ್ಳಾರಿ ಮಹಾನಗರ ಪಾಲಿಕೆಯ ಅಧಿಕಾರಿ ನೂರ್ ಅಹ್ಮದ್ ಅವರು, ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ಆನ್ಲೈನ್ನಲ್ಲಿ `ಆಸ್ತಿ ತೆರಿಗೆಯನ್ನು ನಿಗದಿ ಮಾಡುವ ಮತ್ತು ತೆರಿಗೆ ಪಾವತಿಸುವ ಕುರಿತು ವಿವರಿಸಿದರು. ಸಕಾಲದಲ್ಲಿ ತೆರಿಗೆ ಪಾವತಿಸದಿದ್ದಲ್ಲಿ ಶೇ. 2 ರಷ್ಟು ದಂಡ, ಸಕಾಲದಲ್ಲಿ ಆಸ್ತಿ ತೆರಿಗೆಯನ್ನು ಪಾವತಿ ಮಾಡಿ ಒಟ್ಟು ಮೊತ್ತದಲ್ಲಿ ಶೇ. 5ರ ರಿಯಾಯಿತಿ ಪಡೆಯುವ ಕುರಿತು ಸಭೆಗೆ ಮಾಹಿತಿ ನೀಡಿದರು. 

ಗೌರವಾಧ್ಯಕ್ಷರಾದ ಸಿ. ಶ್ರೀನಿವಾಸರಾವ್ ಅವರು, ಬಳ್ಳಾರಿ ಮಹಾನಗರ ಪಾಲಿಕೆ, ವಾಡಾ ಮತ್ತು ಬುಡಾ ವ್ಯಾಪ್ತಿಯಲ್ಲಿ ಅನಧಿಕೃತ ಲೇಔಟ್ಗಳ ರಚನೆ, ಕಟ್ಟಡಗಳ ನಿರ್ಮಾಣ ವ್ಯಾಪಕವಾಗಿ ನಡೆದಿದೆ. ಇದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು. ಹಿರಿಯರಾದ ವಾಸುದೇವರಾವ್, ಎ. ಸುಧಾಕರ್ ಅವರು ಪ್ರಶ್ನೆಗಳನ್ನು ಕೇಳಿದರು. 

ಮೇಯರ್ ಶ್ವೇತ ಬಿ. ಸೋಮು ಅವರು, ಮಹಾನಗರ ಪಾಲಿಕೆಯ ಅಭಿವೃದ್ಧಿಯು ಆಸ್ತಿ ತೆರಿಗೆಯ ಶೇ. 80 ರಿಂದ 90 ರಷ್ಟನ್ನು ಆಧರಿಸಿರುತ್ತದೆ. ಕಾರಣ ಸಾರ್ವಜನಿಕರು ತಪ್ಪದೇ ತಮ್ಮ ಆಸ್ತಿಯ ತೆರಿಗೆಯನ್ನು ಪಾವತಿ ಮಾಡಿ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.  

ಕಾರ್ಪೊರೇಟರ್ ನೂರ್ ಅಹ್ಮದ್ ಇನ್ನಿತರರು ಸಭೆಯಲ್ಲಿದ್ದರು. ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರು ವಂದನಾರ್ಪಣೆ ಸಲ್ಲಿಸಿದರು. 

ಉಪಾಧ್ಯಕ್ಷರಗಳಾದ ಎಸ್ ದೊಡ್ಡನಗೌಡ, ಗಿರಿಧರ ಸೂಂತ್ ,ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೇಡ್ ಮಲ್ಲಿಕಾರ್ಜುನ ಗೌಡ ಮತ್ತು ವಿ. ರಾಮಚಂದ್ರ, ಹಿರಿಯ ಸದಸ್ಯರಾದ ವಿ. ರವಿಕುಮಾರ್, ಚೇರ್ಮನ್ಗಳಾದ, ಟಿ.ಶ್ರೀನಿವಾಸ್ ರಾವ್, ನೇಕಾರ ನಾಗರಾಜ್, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು, ಇತರೇ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು