ಆನೇಕಲ್‌ನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಆನೇಕಲ್. ಏ. ೧೬ – ಸಾಮಾನ್ಯ ಪ್ರಜೆಯಿಂದ ರಾಷ್ಠಪತಿ ವರೆಗೂ ಸಮಾನವಾದ ಮತದಾನ ಹಕ್ಕನ್ನು ಕೊಟ್ಟಿದ್ದು ಡಾ|| ಬಿ.ಆರ್.ಅಂಬೇಡ್ಕರ್ ರವರು ಎಂಬುದನ್ನು ನಾವು ಯಾರು ಮರೆಯಬಾರದು ಗಡಿನಾಡು ಜೈ ಬೀಮ್ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಕ್ರಾಂತಿ ಮುನಿರಾಜು ತಿಳಿಸಿದರು.
ಅವರು ತಾಲ್ಲೂಕಿನ ನೆರಳೂರು ಗ್ರಾಮದಲ್ಲಿ ಗಡಿನಾಡು ಜೈ ಬೀಮ್ ವೇದಿಕೆ ವತಿಯಿಂದ ಆಯೋಜಿಸಿದ್ದ ಸಂವಿದಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್ ಅವರ ೧೩೩ ನೇ ವರ್ಷದ ಜಯಂತೋತ್ಸವ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಬೇಡ್ಕರ್ ರವರು ಮಹಾನ್ ಮಾನವತಾವಾದಿ ಶೋಷಿತ ವರ್ಗದ ಆಶಾಕಿರಣ, ಮಹಿಳೆಯರ ಪಾಲಿಗೆ ಸಮಾನತೆಯ ನಂದಾದೀಪವಾಗಿದ್ದಾರೆ ಎಂದರು. ಕಾನೂನು ರೂಪದಲ್ಲಿ ನಮಗೆ ಸಂವಿಧಾನ ಕೊಟ್ಟು ಅಸಮಾನತೆಯನ್ನು ಹೋಗಲಾಡಿಸಿದ್ದು ಶಿಕ್ಷಣ ಒಂದೇ ಅಸಮಾನತೆಯನ್ನು ಹೋಗಲಾಡಿಸಲು ಇರುವ ಮಾರ್ಗ ಎಂದು ಅಂಬೇಡ್ಕರ್ ರವರ ಜೀವನ ಚರಿತ್ರೆ ಹೇಳುತ್ತಿದೆ ಎಂದರು.
ಹಿಂದಿನ ಕಾಲದಲ್ಲಿ ರಾಣಿಯ ಹೊಟ್ಟೆಯಲ್ಲಿ ರಾಜ ಹುಟ್ಟುತ್ತಿದ್ದ ಮುಂದಿನ ದಿನಗಳಲ್ಲಿ ಮತ ಪೆಟ್ಟಿಗೆ ಮೂಲಕ ರಾಜ ಹುಟ್ಟುತ್ತಾನೆ ಎಂದು ಅಂಬೇಡ್ಕರ್ ರವರು ಅಂದೇ ಹೇಳಿದ್ದರು ಅದರಂತೆ ಈವತ್ತಿನ ದಿನಗಳಲ್ಲಿ ಮೈಸೂರು ಮಹಾರಾಜರ ಕುಟುಂಬದ ಕುಡಿ ಚುನಾವಣೆ ಮೂಲಕ ಮಂತ್ರಿಯಾಗಲು ಹೊರಟಿದ್ದಾರೆ ಎಂದರು.
ದಲಿತ ಕುಟುಂಬದಲ್ಲಿ ಜನಿಸಿದ ಮಹಾಜ್ಞಾನಿಯಾಗಿದ್ದ ಅಂಬೇಡ್ಕರ್ ಇಡೀ ವಿಶ್ವವೇ ಬೆರಗಾಗುವಂತಹ ಅತಿದೊಡ್ಡ ಸಂವಿಧಾನ ರಚಿಸಿ ದಲಿತರ ಏಳ್ಗೆಗೆ ಮೀಸಲಾತಿ ಕಲ್ಪಿಸಿದ ಮಹಾಚೇತನ ಎಂದರು ಅಲ್ಲದೆ ದಲಿತ ಕುಟುಂಬದ ಪ್ರತಿಯೊಬ್ಬ ಮಕ್ಕಳು ತಪ್ಪದೆ ಶಿಕ್ಷಣ ಪಡೆದುಕೊಂಡು ಉನ್ನತ ಹುದ್ದೆ ಅಲಂಕರಿಸಿ ಸಮ ಸಮಾಜದ ನಿರ್ಮಾಣಕ್ಕೆ ಬದ್ಧರಾಗೋಣ ಎಂದು ತಿಳಿಸಿದರು.
ಇದೇ ಸಂzsರ್ಭದಲ್ಲಿ ಅರವಂಟಿಕೆ ಮತ್ತು ಅನ್ನದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಹಾಗೆಯೇ ಡಾ|| ಬಿ.ಆರ್ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅಂಬೇಡ್ಕರ್ ರವರಿಗೆ ಜೈಕಾರ ಹಾಕಿದರು,
ಕಾರ್ಯಕ್ರಮದಲ್ಲಿ ಗಡಿನಾಡು ಜೈ ಬೀಮ್ ವೇದಿಕೆಯ ಕಾರ್ಮಿಕ ಘಟಕದ ಅಧ್ಯಕ್ಷ ಅನಿಲ್ ನಾಯ್ಕ್, ತಾಲ್ಲೂಕು ಪ್ರದಾನ ಕಾರ್ಯದರ್ಶಿ ರವಿಕುಮಾರ್, ಸಿ,ನಾಗರಾಜ್, ಡಿ.ರವಿ. ಮಹಾರಾಣ ಪ್ರತಾಪ್, ಜಗದೀಶ್, ದೀಫಕ್, ಸಂತೋಷ್, ಶ್ರೀಮತಿ ಭವ್ಯ ಕ್ರಾಂತಿ ಮುನಿರಾಜು ಮತ್ತು ಗಡಿನಾಡು ಜೈ ಬೀಮ್ ವೇದಿಕೆಯ ಪದಾದಿಕಾರಿಗಳು ಬಾಗವಹಿಸಿದ್ದರು.