ಆನೆ ದಂತ ಮಾರುತ್ತಿದ್ದವರ ಬಂಧನ

Malaysian customs officers show elephant tusks which were recently seized in Port Klang outside Kuala Lumpur December 11, 2012. Malaysia's customs authorities late Monday seized two containers with some 1,500 pieces of elephant tusks, weighing around 24,000 kg and estimated to be worth 6 million ringgit ($1.96 million), according to a press release issued by the Malaysian Customs Department on Tuesday. The ivories, which were loaded in Togo, travelled through Algeciras, Spain, before finally arriving in Port Klang. Although shipping documents listed the containers' final destination as Port Klang, customs intelligence said that the containers were planned to be sent to China. REUTERS/Bazuki Muhammad (MALAYSIA - Tags: ENVIRONMENT CRIME LAW ANIMALS)

ಮೈಸೂರು,ಮಾ.27:- ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಆನೆದಂತ ಮಾರಾಟ ಮಾಡುತ್ತಿದ್ದ ನಾಲ್ವರು ವ್ಯಕ್ತಿಗಳನ್ನು ಬಂಧಿಸಿದ್ದು ಬಂಧಿತರಿಂದ ಎರಡು ದಂತ, ಮೂರು ಬೈಕ್ ಸೇರಿದಂತೆ ನಾಲ್ಕು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ತುಂಬುಸೋಗೆಯ ನಿವಾಸಿಗಳಾದ ರವಿಕುಮಾರ್, ಶಿವಕುಮಾರ್, ಹೆಚ್.ಡಿ.ಕೋಟೆಯ ಕುಮಾರನಾಯಕ, ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿಯ ಸಾಲಕೊಪ್ಪಲು ನಿವಾಸಿ ಅಶೋಕ ಎಂದು ಗುರುತಿಸಲಾಗಿದೆ.
ಇವರು ಹೆಚ್.ಡಿ.ಕೋಟೆ ತಾಲೂಕಿನ ಅಣ್ಣೂರು ಬಳಿ ಎರಡು ದಂತಗಳನ್ನು ಮಾರಾಟ ಮಾಡಲು ಯತ್ನಿಸಿದ ವೇಳೆ ಅರಣ್ಯ ಸಂಚಾರಿ ದಳದ ಪೆÇಲೀಸರು ಮಿಂಚಿನ ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ ಎರಡು ಆನೆದಂತ, ಹೀರೋ ಹೊಂಡಾ ಫ್ಯಾಷನ್ ಪ್ಲಸ್, ಹೀರೋ ಹೊಂಡ, ಹೀರೋ ಹೊಂಡ ಸ್ಪ್ಲೆಂಡರ್, ಟಾಟಾ ಏಸ್, ಗೂಡ್ಸ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಡಿಸಿಎಫ್ ಎ.ಟಿ.ಪೂವಯ್ಯ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರ್ ಎಫ್ ಒ ವಿವೇಕ್, ಡಿಆರ್ ಎಫ್ ಒ ಗಳಾದ ಬಿ.ಎನ್.ಸುಂದರ್, ಪ್ರಮೋದ್, ಡಿ.ಎಂ.ವಿನೋದ್ ಕುಮಾರ್, ಪಿ.ಲಕ್ಷ್ಮೀಶ, ಎಂ.ಜೆ.ನಾಗರಾಜ್, ಅರಣ್ಯ ರಕ್ಷಕರಾದ ಗೋವಿಂದ, ಶರಣಪ್ಪ, ಕೊಟ್ರೇಶ್ ಪೂಜಾರ್, ರವಿಕುಮಾರ್, ಚನ್ನಬಸವಯ್ಯ, ವಿರೂಪಾಕ್ಷ, ಚಾಲಕರಾದ ಮಧು,ಪುಟ್ಟಸ್ವಾಮಿ ಪಾಲ್ಗೊಂಡಿದ್ದರು.