ಆನೆ ದಂತಗಳ ಕಲಾಕೃತಿ ಮಾರಾಟ ಯತ್ನ: ಮೂವರ ಬಂಧನ

ಮೈಸೂರು, ಡಿ.25: ಆನೆ ದಂತಗಳ ಕಲಾಕೃತಿಗಳನ್ನು ಮಾರಾಟ ಮಾಡಲು ಯತ್ನಿಸಿದ ಮೂವರನ್ನು ಅರಣ್ಯ ಸಂಚಾರ ದಳದ ಅಧಿಕಾರಿಗಳು ಇಂದು ಬಂಧಿಸಿದ್ದಾರೆ.
ಬಂಧಿತರನ್ನು ಮೈಸೂರಿನ ಮನೋಹರ್ (45), ಸೋಮವಾರಪೇಟೆಯ ಶಿವದಾಸ್ (55) ಹಾಗೂ ಸುಮಂತ್ (26) ಎಂದು ಗುರುತಿಸಲಾಗಿದೆ. ಇವರಿಂದ ಆನೆದಂತದಲ್ಲಿ ಕೆತ್ತಿದ ಮೂರು ಕಲಾಕೃತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇವರು ಇಲ್ಲಿನ ನಾಯ್ಡುನಗರದಲ್ಲಿ ಕಲಾಕೃತಿಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಡಿಸಿಎಫ್ ಪೂವಯ್ಯ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿದೆ.
ಕಾರ್ಯಾಚರಣೆಯಲ್ಲಿ ಆರ್‍ಎಫ್ ಒ ವಿವೇಕ್, ಸಿಬ್ಬಂದಿ ಸುಂದರ್, ವಿನೋದ್, ಪ್ರಮೋದ್, ಲಕ್ಷ್ಮೀಶ, ನಾಗರಾಜ್, ಸ್ನೇಹಾ, ಮೇಘನಾ, ಚನ್ನಬಸವ, ಮಹಂತೇಶ್, ಶರಣಪ್ಪ, ಗೋವಿಂದು, ರವಿಕುಮಾರ್, ರವಿನಂದನ್, ವಿರೂಪಾಕ್ಷ, ಪುಟ್ಟಸ್ವಾಮಿ ಮತ್ತು ಮಧು ಕಾರ್ಯಾಚರಣೆ ತಂಡದಲ್ಲಿದ್ದರು.