ಆನೆಯ ಉಪಟಳ- ಬಾಳೆ ತೋಟಕ್ಕೆ ದಾಳಿ: ಭಯಭೀತರದ ರೈತರು

ಹನೂರು: ಜು.24:- ತಾಲೂಕಿನ ಪೆÇನ್ನಾಚಿ ಗ್ರಾಮ ಅರಣ್ಯ ವ್ಯಾಪ್ತಿಯಲ್ಲಿ ರೇಡಿಯೋ ಕಾಲರ್ ಅಳವಡಿಸಿರುವ ಆನೆಯ ಉಪಟಳ ಹೆಚ್ಚಾಗಿದ್ದು ಈ ಭಾಗದ ತೋಟದ ಜಮೀನಿನ ರೈತರು ಭಯಭೀತರಾಗಿದ್ದು ಈ ಆನೆಯನ್ನು ಬೇರೆಡೆಗೆ ಕೊಂಡೊಯ್ಯಬೇಕು ಎಂಬುದು ಇಲ್ಲಿನ ಜನರ ಆಗ್ರಹವಾಗಿದೆ.
ತಾಲೂಕಿನ ಪೆÇನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಕ್ಕೆಹೋಲ ಗ್ರಾಮದ ತಂಗವೇಲು ಬಿನ್ ರಂಗಯ್ಯ ಅವರ ತೋಟಕ್ಕೆ ರಾತ್ರಿ ವೇಳೆ ದಾಳಿ ಮಾಡಿದೆ. ಈವೇಳೆ ತಂಗವೇಲು ಅವರ ಮೇಲೆ ಆನೆಯು ದಾಳಿ ಮಾಡಲು ಮುಂದಾಗಿದ್ದು ಇವರು ತಪ್ಪಿಸಿಕೊಂಡು ಸಣ್ಣಪುಟ್ಟ ಗಾಯಗಳಾಗಿದೆ.
ತೋಟದಲ್ಲಿ ತೆಂಗಿನ ಮರ ಹಾಗೂ ಹಲಸಿನ ಮರ ನೀರಾವರಿ ಪೈಪ್‍ಗಳನ್ನು ದ್ವಂಶ ಮಾಡಿ ಬೆಳೆ ಹಾನಿ ಮಾಡಿದೆ. ಅಲ್ಲದೆ ಕಳೆದ ದಿನಗಳಿಂದ ಅಷ್ಟೇ, ಬಾಳೆ ತೋಟಕ್ಕೆ ದಾಳಿ ಮಾಡಿ ಬಾಳೆಗಿಡ ಹಾನಿ ಮಾಡಿರುವ ಘಟನೆಯು ಕೂಡ ನಡೆದಿದೆ. ಇದರಿಂದ ರೈತರಿಗೆ ನಷ್ಟವಾಗುತ್ತಿದ್ದು ಇದರ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೆ ಕ್ರಮ ಕೈಗೊಳ್ಳಬೇಕಾಗಿದೆ.
ರೇಡಿಯೋ ಕಾಲ್ ಅಳವಡಿಸಿರುವ ಆನೆಯ ಚಲನವಲನಗಳ ಬಗ್ಗೆ ತಿಳಿದುಕೊಂಡು ಇಲಾಖೆ ಎಲ್ಲಾ ಸಿಬ್ಬಂದಿಗಳು ಕೂಡ ಅದನ್ನು ಕಾಡಿಗಟ್ಟುವ ಪ್ರಯತ್ನ ಮಾಡುತ್ತಿದ್ದೇನೆ ಆದರೂ ಮತ್ತೆ ಮತ್ತೆ ಅದು ಜಮೀನಿನಗಳ ಮೇಲೆ ಬರುತಿದೆ.
ನೆನ್ನೆ ರಾತ್ರಿ ಈ ಆನೆಯನ್ನು ತಡರಾತ್ರಿವರೆಗೂ ಓಡಿಸಿದ್ದೆವು ಆದರೂ ಸ್ವಲ್ಪ ಸಮಯದ ನಂತರ ಮತ್ತೆ ತಂಗವೇಲು ಅವರ ತೋಟಕ್ಕೆ ನುಗ್ಗಿದೆ. ಇಂದು ಬೆಳಗ್ಗೆಯಿಂದ ಎಲ್ಲಾ ಸಿಬ್ಬಂದಿಗಳ ಜೊತೆಗೂಡಿ ನಾವು ಆನೆಯನ್ನು ಬೇರೆಡೆಗೆ ಓಡಿಸುತಿದ್ದೇವೆ ಇಂದು ಸಂಜೆ ಎಷ್ಟು ದೂರದವರೆಗೆ ಸಾಧ್ಯವಾಗುತ್ತದೆ ಅಷ್ಟು ದೂರದವರೆಗೂ ಆನೆಯನ್ನು ಅರಣ್ಯದೊಳಗೆ ಓಡಿಸುತ್ತೇವೆ ಎಂದು ಡಿ.ಆರ್.ಎಫ್.ಒ ರಮೇಶ್ ತಿಳಿಸಿದ್ದಾರೆ.