ಆನೆಗೊಂದಿ ಶ್ರೀ ರಂಗನಾಥಸ್ವಾಮಿಯ ಮಹಾರಥೋತ್ಸವ.


ಸಂಜೆವಾಣಿ ವಾರ್ತೆ
ಗಂಗಾವತಿ:ಏ,13- ತಾಲೂಕಿನ ಆನೆಗುಂದಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ರಂಗನಾಥ ಸ್ವಾಮಿ ಜಾತ್ರೆಯ ಮಹಾರಥೋತ್ಸವ ಬುಧವಾರ ಸಂಜೆ ಭಕ್ತಿ,ಶ್ರದ್ಧೆಯಿಂದ ಸುತ್ತಲಿನ ಗ್ರಾಮಗಳ ಜನಸ್ತೋಮದ ಮಧ್ಯೆ ಅದ್ದೂರಿಯಿಂದ ಜರುಗಿತು.
ಮಹಾರಥೋತ್ಸವದ ನಿಮಿತ್ಯ ಬೆಳಿಗ್ಗೆ ಶ್ರೀ ರಂಗನಾಥ ಸ್ವಾಮಿಯ ಜಲಾಭಿಷೇಕ ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಹಲವು ಧಾರ್ಮಿಕ ಕಾರ್ಯಕ್ರಮಗಳು ಅನ್ನ ಸಂತರ್ಪಣೆ ಜರುಗಿತು. ಸಂಪ್ರದಾಯದಂತೆ ಜಾತ್ರೆಯ ಮಹಾರಥೋತ್ಸವಕ್ಕೆ ಆನೆಗೊಂದಿ ರಾಜವಂಶಸ್ಥರನ್ನು ಡೊಳ್ಳು ಹಾಗೂ ಜನಪದ ಕಲಾ ತಂಡಗಳ ಮೂಲಕ ಕರೆ ತರಲಾಯಿತು.
ಈ ಸಂದರ್ಭದಲ್ಲಿ ರಾಜವಂಶದ
ಶ್ರೀಕೃಷ್ಣದೇವರಾಯಲು, ವೀರರಾಘವರಾಜು, ಹರಿಹರದೇವರಾಯಲು, ಪದ್ಮನಾಭರಾಜು,ಕುಪ್ಪರಾಜು, ಸುದರ್ಶನವರ್ಮಾ,ಸತ್ಯರಾಜು ಹಾಗೂ ಗ್ರಾ.ಪಂ.ಅಧ್ಯಕ್ಷ ಬಾಳೆಕಾಯಿ ತಿಮ್ಮಪ್ಪ, ಗ್ರಾಮಸ್ಥರಾದ ಪ್ರದೀಪ್,ಶ್ರೀ ನಿವಾಸ ನಾಯ್ಡು, ಸುಬೇದಾರ್ ನಿಂಗಜ್ಜ, ನಂದ್ಯಾಲ ಅನೀಲಕುಮಾರ ಸೇರಿ ಅನೇಕರಿದ್ದರು.