ಆನೆಗೊಂದಿಯಲ್ಲಿ ಜಾಗೃತಿ ಅಭಿಯಾನ

ಗಂಗಾವತಿ ಡಿ.26: ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ ಶುಕ್ರವಾರ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಆನೆಕಾಲು ರೋಗಕ್ಕೆ ಸಂಬಂಧಿಸಿದ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮದ ನಿಮಿತ್ತ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹನುಮಂತಪ್ಪ ಹಾಗೂ ಹಿರಿಯ ಆರೋಗ್ಯ ಸಹಾಯಕರು ಮೌನೇಶ್, ಕಿರಿಯ ಆರೋಗ್ಯ ಸಹಾಯಕಿ ದೀಪಾ,ಹಾಲಮ್ಮ, ಆಶಾ ಕಾರ್ಯಕರ್ತೆ ಖಾಸಿಂಬಿ, ಜಯಾ ಕಟ್ಟಿಮನಿ, ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಪಾಲ್ಗೊಂಡಿದ್ದರು.