ಆನೆಗೊಂದಿಯಲ್ಲಿ ಕಸ ಗೂಡಿಸಿ, ಶಾಲಾ ‌ಆವರಣ ಸ್ವಚ್ಛಗೊಳಿಸಿದ ತಾ.ಪಂ ಇಒ ಡಾ.ಡಿ.ಮೋಹನ್

ಗಂಗಾವತಿ ಮಾ.26: ತಾಲೂಕಿನ ಆನೆಗೊಂದಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಶುಕ್ರವಾರ ಸ್ವಚ್ಛ ಶುಕ್ರವಾರ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ತಾ.ಪಂ ಇಒ ಡಾ.ಡಿ.ಮೋಹನ್ ಅವರು ಸ್ವಂತ ಕಸ ಗೂಡಿಸಿ ಶಾಲಾ ಆವರಣ ಸ್ವಚ್ಚಗೊಳಿಸಿದರು.
ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ತಿಮ್ಮಪ್ಪ, ಪಿಡಿಒ ಕೃಷ್ಣಪ್ಪ, ಸದಸ್ಯರಾದ ಪ್ರವೀನ್ ಕುಮಾರ್,
ಮಲ್ಲಿಕಾರ್ಜುನ ಸ್ವಾಮಿ, ನರಸಿಂಹ ಗ್ರಾಮಸ್ಥರಾದ ಸಂತೋಷ, ಮೌನೇಶ್ , ಯುವರಾಜ, ಹೋನ್ನಪ್ಪ ನಾಯಕ, ಬಸವ ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿ ವರ್ಗದವರು ಮತ್ತು ಶಾಲಾ ಶಿಕ್ಷಕರು , ಅಂಗನವಾಡಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.