ಆನೆಕಾಲು ರೋಗ: ಪ್ರತಿಯೊಬ್ಬರೂ ತಪ್ಪದೇ ಮಾತ್ರೆ ಸೇವಿಸಿ

ಕರಜಗಿ:ಜ.10:ರೋಗ ಬಂದು ಹಲವು ವರ್ಷ ನರಳುವ ಬದಲು ಮುನ್ನೆಚ್ಚರಿಕೆ ಕ್ರಮವಾಗಿ ಆನೆಕಾಲು ರೋಗ ನಿರೋಧಕ ಮಾತ್ರೆಗಳನ್ನು ಸೇವಿಸಬೇಕು. ರೋಗವನ್ನು ಬೇರು ಸಮೇತ ಕಿತ್ತು ಹಾಕಲು ಪ್ರತಿಯೊಬ್ಬ ನಾಗರಿಕರೂ ನೆರವಾಗಬೇಕು ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಂತೋಷ ಮುಳಜೆ ಹೇಳಿದರು .
ಅವರು ತಾಲೂಕಿನ ಮಣ್ಣೂರ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಆನೆಕಾಲು ರೋಗ ನಿರ್ಮೂಲನೆ ಸಾಮೂಹಿಕ ಮಾತ್ರೆ ಸೇವನೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಆರೋಗ್ಯ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲೇ ಅರ್ಹರಿಗೆ ಆನೆ ಕಾಲು ರೋಗದ ಮಾತ್ರೆ ನುಂಗಿಸಲಾಗುವುದು .ಆರೋಗ್ಯ ಇಲಾಖೆ ಸಿಬ್ಬಂದಿ ಎಲ್ಲ ಗ್ರಾಮಗಳಿಗೂ ತೆರಳಿ ಮಾತ್ರೆಗಳನ್ನು ಕೊಡಲಿದ್ದಾರೆ. ಸಾರ್ವಜನಿಕರು ಇದರ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು
ಆರೋಗ್ಯ ನಿರೀಕ್ಷಣಾಧಿಕಾರಿ ವಿಠ್ಠಲ ಬಡಿಗೇರ ಮಾತನಾಡಿ ಊಟದ ನಂತರ ಮಾತ್ರೆಗಳ ಸೇವನೆಯಿಂದ ಸಾಧಾರಣವಾಗಿ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಆದರೆ ರೋಗ ಹರಡುವ ರೋಗವಾಹಕ ಹೊಂದಿದ ಕೆಲವರಲ್ಲಿ ಮಾತ್ರ ಸೌಮ್ಯ ಜ್ವರ, ತಲೆನೋವು, ವಾಕರಿಕೆ ಮುಂತಾದ ಲಕ್ಷಣಗಳು ಕಂಡು ಬರಬಹುದು. ಇವು ಒಳ್ಳೆಯ ಲಕ್ಷಣ ಎಂದು ಭಾವಿಸಬೇಕು.ಜ್ವರದಂತಹ ಲಕ್ಷಣಗಳು ಕಂಡು ಬಂದಲ್ಲಿ ಶೀಘ್ರ ಪ್ರತಿಕ್ರಿಯಾ ತಂಡಗಳಿಂದ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಆರೋಗ್ಯ ಸೇವೆ ಕೊಡಲು ಇಲಾಖೆ ಸನ್ನದ್ಧವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ ವಿಜಯಶ್ರೀ ದೈತನ ಗ್ರಾ ಪಂ ಅಧ್ಯಕ್ಷೆ ಆರತಿ ಜನ್ನಾ ಉಪಾಧ್ಯಕ್ಷ ಬಿ ರಾಜು ಬೆನಕನಹಳ್ಳಿ ಕಾರ್ಯದರ್ಶಿ ನಾರಾಯಣ ಚವ್ಹಾಣ ಸದಸ್ಯರಾದ ಬಸವರಾಜ ವಾಯಿ ಹಣಮಂತ ನಾವಾಡಿ ಲಾಡ್ಲೇಮಶಾಕ ಗೌರ ಶ್ರೀಶೈಲ ಚಾಂಬರ ಮುಖಂಡರಾದ ಬಸವರಾಜ ಜನ್ನಾ ಚಂದ್ರಕಾಂತ ದೈತನ ಶೇಖರ ಶೆಟ್ಟಿ ಆರೋಗ್ಯ ಇಲಾಖೆಯ ಸರಿತಾ ರಾಠೋಡ ಸುಕನ್ಯಾ ಕರಜಗಿ ಪ್ರಕಾಶ ಬಿರಾದಾರ ಲಲಿತಾ ದೈತನ ಆಶಾ ಕಾರ್ಯಕರ್ತೆಯರಾದ ಭೌರಮ್ಮ ಲೋಹಾರ ಕವಿತಾ ಹಡಪದ ಗೌರಾಬಾಯಿ ಮೋಸಲಗಿ ಸೇರಿದಂತೆ ಗ್ರಾ.ಪಂ ಸಿಬ್ಬಂದಿಗಳಿದ್ದರು.