
ಸಿಂಧನೂರು,ಸೆ.೨-ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಅಡಿಯಲ್ಲಿ ತಾಲೂಕಿನಾದ್ಯಂತ ಆನೆಕಾಲು ನಿಯಂತ್ರಣದ ಭಾಗವಾಗಿ ಟ್ರಾಸ್ಮೀಷನ್ ಅಸೆಸ್ಮೆಂಟ್ ಸರ್ವೆ (TAS) ಕಾರ್ಯವನ್ನು ಆನೆ ಕಾಲು ರೋಗ ನಿರ್ಮೂಲನೆ ಡಬ್ಲ್ಯ ಹೆಚ್ ಓ
ಅಧಿಕಾರಿಗಳ ತಂಡ ಬೇಟಿ ನೀಡಿತು.
ತಾಲೂಕಿನ ವಿವಿಧ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಎನ್.ಎನ್.ಕ್ಯಾಂಪ, ,ಹಂಚಿನಾಳ(ಯು), ಹಂಪನಾಳ, ಉದ್ಬಾಳ (ಯು) , ,ತುರ್ವಿಹಾಳ,ಗುಂಜಳ್ಳಿ,ಗುಂಡ, ಗ್ರಾಮಗಳಲ್ಲಿ ಟಾಸ್ ಕಾರ್ಯಕ್ರಮ ನಡೆಸಲಾಯಿತು.
ತಾಲೂಕಿನಾದ್ಯಂತ ೧೬ ನೇ ಸುತ್ತು ಆನೆಕಾಲು ರೋಗ ನಿಯಂತ್ರಣಕ್ಕೆ ಈಗಾಗಲೆ ವರ್ಷಕ್ಕೊಂದು ಸಲದಂತೆ ಸಾಮೂಹಿಕ ಡಿ.ಈ.ಸಿ ಔಷದ ನುಂಗಿಸುವ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದ್ದು
ಅದರ ಸಾಧಕ ಬಾಧಕಗಳ ಯಶಸ್ಸನ್ನು ಅಳೆಯುವ ಸಾಧನವೆ ಟಾಸ್‌ಎಂದು ಡಬ್ಲೂ.ಹೆಚ್.ಓ ತಂಡದ ವಿಕ್ಷಕರಾಗಿ ಆಗಮಿಸಿದ ಡಾ.ರಾಹುಲ್ ಪತ್ರಿಕೆಗೆ ಮಾಹಿತಿಯನ್ನು ನೀಡಿದರು.
ಟಾಸ್ ಕಾರ್ಯಕ್ರಮದಲ್ಲಿ೧&೨ನೆ ತರಗತಿಯ ಮಕ್ಕಳಲ್ಲಿ ರಕ್ತಪರೀಕ್ಷೆ ನಡೆಸಿ ಈಗಿನ ಜನರೇಷನ್ ನಲ್ಲಿ ಆನೆಕಾಲು ರೋಗ ಕಂಡುಕೊಳ್ಳುವ ಮತ್ತು ಚಿಕಿತ್ಸೆ ನಡೆಸುವ ಮೂಲಕ ರೋಗದ ಹತೋಟಿಗೆ ಶ್ರಮವಹಿಸಲಾಗುವುದು ಎಂದು ತಂಡದ ಜಿಲ್ಲಾ ವೀಕ್ಷಕ ನೋಡಲ್ ಅಧಿಕಾರಿ ಅಡಿವೆಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕ ತಂಡದ ಮೇಲ್ವಿಚಾರಕ ಎಫ್.ಎ.ಹಣಗಿ ಜಿಲ್ಲಾ ಹಿ.ಆ.ನಿರೀಕ್ಷಣಾಧಿಕಾರಿಯಾದ ಮಾನಯ್ಯ ತಾಲೂಕಿನ ಹಿ.ಆ.ನಿ ಸಂಗನಗೌಡ,ಲ್ಯಾಬ್ ಟೆಕ್ನಾಲಜಿ ಗಳಾದ ಅಜೀಜ,ತಿಪ್ಪೇಸ್ವಾಮಿ, ಪಾಲಾಕ್ಷರೆಡ್ಡಿ,ಬಿಕಾಸ,ಬಾಬರ,ಶಂಭುಲಿಂಗಯ್ಯ,ಕ್ರಷ್ಣ ಮೂರ್ತಿ,ಗುರುರಾಜ, ಕಿ.ಆರೋಗ್ಯ ನಿರೀಕ್ಷಕರಾದ ನಗರ.ಆ.ಕೇಂದ್ರದ ಹನುಮಂತಪ್ಪ, ಜವಳಗೇರಾ-ಮಲ್ಲಿಕಾರ್ಜುನ,ಉದಯಕುಮಾರ,ಮಹೇಶ ,ಬಾದರ್ಲಿ, ಅಮಲಯ್ಯ,ರವಿರಾಜ.ಎಂಕೆ,ಸಾಲಗುಂದ ಸೈಫ್ ಅಹ್ಮದ ಖಾನ,ಧಡೇಸಗೂರ ಮಲ್ಲಿಕಾರ್ಜುನ,ಶ್ರೀಕಾಂತ್ ಹಾರಾಪೂರ ಮಂಜುನಾಥ ಹಾಗೂ ಸ್ಥಳಿಯ ಸಿಬ್ಬಂದಿಗಳು & ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.