ಆನಾಹೊಸುರು, ಈಚನಾಳ, ನೀರಲಕೇರಿ ಗ್ರಾಮದಲ್ಲಿಆಧುನಿಕ ಭಾರತದ ದೃವತಾರೆಗೆ ಅದ್ದೂರಿ ಸ್ವಾಗತ

ಲಿಂಗಸೂಗೂರು.ಫೆ.೧೩- ತಾಲೂಕಿನಲ್ಲಿ ಸಂವಿಧಾನ ಜಾಗೃತಿ ಅಭಿಯಾನ ಜಾಥಾ ಭರ್ಜರಿಯಾಗಿ ಗ್ರಾಮಗಳಲ್ಲಿ ಆದುನಿಕ ಭಾರತದ ದೃವತಾರೆಗೆ ಭಾರಿ ಜನಪ್ರಿಯತೆ ಗಳಿಸಿದೆ ಪ್ರತಿ ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ ಮಹತ್ವ ತಿಳಿಯಲು ಅಂಬೇಡ್ಕರ್‌ರವರ ವಿಚಾರಗಳನ್ನು ಹಂಚಿಕೊಳ್ಳಲು ಮಕ್ಕಳು ವೃದ್ಧರು ಮಹಿಳೆಯರು ಪ್ರಗತಿಪರ ಸಂಘಟನೆಗಳು ಸಾಹಿತಿಗಳು ಕಲಾವಿದರು ಕೃಷಿ ಕೂಲಿಕಾರರು ಸಂವಿಧಾನದ ನಿರ್ಮಾತೃ ಅಂಬೇಡ್ಕರ್ ಸಂವಿಧಾನ ಅಭಿಯಾನ ಜಾಥಾ ರಥವನ್ನು ಅದ್ದೂರಿಯಾಗಿ ಸ್ವಾಗತಿಸಿ ಭೀಮ ವಂದನೆ ಸಲ್ಲಿಸಿದರು.
ಭಾರತದ ದೃವತಾರೆ ಜಾರಿಗೆ ತಂದಿರುವ ಸಂವಿಧಾನ ಆಶಯಗಳು ದೀನದಲಿತರ ಪಾಲಿನ ಆಶಾಕಿರಣ ಸರ್ವಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಬೆಳವಣಿಗೆಗೆ ಸಹಕಾಯಾದ ಸಂವಿಧಾನದ ಅಡಿಯಲ್ಲಿ ಬರುವ ಕಾನೂನು ಪ್ರಕಾರ ನಿಯಮಗಳನ್ನು ಜಾರಿಗೆ ಬರುವಂತೆ ಮಾಡಿದ ನಾಯಕ ಅಂಬೇಡ್ಕರ್ ಕೊಡುಗೆ ಈ ದೇಶದಲ್ಲಿ ಅಪಾರವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜ ಸುಧಾರಣೆಗೆ ಪ್ರತಿಯೊಬ್ಬ ಭಾರತೀಯ ಪ್ರಜೆಯ ಸಂವಿಧಾನ ವಿಧಾನ ತಿಳಿಯೋಣ ಎಂದು ದಲಿತ ಮುಖಂಡ ಗ್ಯಾನಪ್ಪ ಕಟ್ಟಿಮನಿ ಆನಾಹೊಸುರ ಹೇಳಿದರು.
ಸಂವಿಧಾನಕ್ಕೆ ತಕ್ಕಂತೆ ನಾವು ನಡೆದುಕೊಂಡರೆ ದೇಶದ ಸಂವಿಧಾನಕ್ಕೆ ಗೌರವ ನೀಡಿದಂತೆ ಆಗುತ್ತದೆ .ಈ ದೇಶದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ಬೌದ್ಧ ಹಾಗೂ ಜೈನ ಪಾರಿಭಾಷಿಕ ಜನರಿಗೆ ಈ ದೇಶದ ನೆಲದ ಸಂವಿಧಾನ ಎಲ್ಲರಿಗೂ ಒಂದೇ ಇದರಲ್ಲಿ ಯಾವುದೇ ಭೇದ ಬಾವ ಇರುವುದಿಲ್ಲ ಭಾರತದ ೧೪೦ ಕೋಟಿ ಜನರಿಗೆ ಸಂವಿಧಾನವೇ ಮೂಲ ಕಾರಣ ಹಾಗೂ ಜಗತ್ತಿನಲ್ಲಿ ಭಾರತ ದೇಶ ತಂತ್ರಜ್ಞಾನ ವೈಜ್ಞಾನಿಕವಾಗಿ ತಾಂತ್ರಿಕವಾಗಿ ಮುಂದುವರಿಯುತ್ತದೆ ಇದಕ್ಕೆ ಕಾರಣ ಸಂವಿಧಾನ ಎಂದು ಗ್ರಾಮದ ಹಿರಿಯ ಮುಖಂಡ ಡಿ ಜಿ ಗುರಿಕಾರ ಮಾತನಾಡಿದರು.
ಭಾರತದ ಸಂವಿಧಾನ ಜಗತ್ತಿಗೆ ಮಾದರಿ ಸಂವಿಧಾನ ಎಂಬುದು ಎರಡು ಮಾತಿಲ್ಲ ಈ ದೇಶದ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು ಸಂವಿಧಾನದಲ್ಲಿ ಬಾಬ ಸಾಹೇಬ ಅಂಬೇಡ್ಕರ ಸಂವಿಧಾನದಲ್ಲಿ ಕಲ್ಪಿಸಿದ್ದಾರೆ ರಾಜ್ಯ ಸರ್ಕಾರ ಇಂತಹ ಮಾಡುವ ಮುಖಾಂತರ ಸಂವಿಧಾನ ಜನಜಾಗೃತಿ ಜನಾಂದೋಲನವಾಗಿ ಪರಿವರ್ತನೆ ಆಗುವ ಮೂಲಕ ಈ ಸರ್ಕಾರಕ್ಕೆ ತುಂಬು ಹೃದಯದ ಅಭಿನಂದನೆಗಳು ಗ್ರಾಮದ ಜನರು ತಿಳಿಸಿದರು.
ಈ ಸಂದರ್ಭದಲ್ಲಿ ಬಸಣ್ಣ ಮೇಟಿ ಈಚನಾಳ, ಆನಾಹೊಸುರ ಗ್ರಾಮದ ಪ್ರಮುಖರಾದ ಸೈಯದ್ ಖಾದ್ರಿ, ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸಂಗಪ್ಪ ಬಾವಿಮನಿ, ಬಸವರಾಜ ಹೊಸಮನಿ, ಸಿದ್ದಪ್ಪ, ಶಿವಪ್ಪ ದೊಡ್ಡಮನಿ, ಹುಲುಗಪ್ಪ ಬಾವಿಮನಿ ಸೇರಿದಂತೆ ತಾಲೂಕು ಆಡಳಿತ ಅಧಿಕಾರಿಗಳಾದ ಡಾ.ಅಮರೇಶ ಪಾಟೀಲ, ಮಾಕಾಪುರ ಶಿಕ್ಷಣಾಧಿಕಾರಿ ಹನುಮಂತಪ್ಪ, ಕೂಳಿಗೇರಿ ಮೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮದ ಜನರು, ವಿದ್ಯಾರ್ಥಿಗಳು ಮತ್ತು ವಸತಿ ನಿಲಯ ಪಾಲಕರಾದ ಖಾಸಿಂ ಸಾಬ್ ಕೆಂಚಪ್ಪ ಮಸ್ಕಿ, ಅಯ್ಯಪ್ಪ, ಪ್ರಕಾಶ ರಾಂಪುರ, ಶಿವಶಂಕರ್ ಹಿಮ್ಮಡಿ ಸೇರಿದಂತೆ ಇತರೆ ಅಧಿಕಾರಿಗಳು ಈ ಜಾಗೃತಿ ಅಭಿಯಾನ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.