ಆನಲೈನ್ ಮೂಲಕ ಫೈನ್ :ಎಸ್ಪಿ ಆನಂದಕುಮಾರ

ವಿಜಯಪುರ,ಆ 10: ಈಗ ಬೇಸಿಗೆಯ ಬೇಗೆ ದೂರವಾಗಿದೆ, ವಾತಾವರಣ ಸಹ ತಂಪಾಗಿದೆ, ಈಗ ಹೆಲ್ಮೇಟ್ ಧರಿಸಲು ಯಾವ ತಾಪತ್ರಯವೂ ಇಲ್ಲ, ಕೂಡಲೇ ಜನತೆ ಹೆಲ್ಮೇಟ್ ಧರಿಸಿ ವಾಹನ ನಡೆಸಬೇಕು ಎಂದು ಜಿಲ್ಲಾ ಪೆÇಲೀಸ್ ಅಧೀಕ್ಷಕ ಎಚ್.ಡಿ. ಆನಂದಕುಮಾರ ತಿಳಿಸಿದರು.
ವಿಜಯಪುರದಲ್ಲಿ ಸುಗಮ ಸಂಚಾರ, ಸುರಕ್ಷತೆಗೆ ಒತ್ತು ನೀಡಲಾಗುತ್ತಿದೆ, ಈಗಾಗಲೇ 100 ಎಚ್.ಡಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ವಿಜಯಪುರದ ಗಾಂಧೀವೃತ್ತದಲ್ಲಿ ವಿಶೇಷ ಕೇಂದ್ರದಲ್ಲಿ ಅತ್ಯಾಧುನಿಕ ಕೇಂದ್ರದಲ್ಲಿ ಈ ಎಲ್ಲವೂಗಳನ್ನು ವೀಕ್ಷಣೆ ಮಾಡಲಾಗುತ್ತಿದೆ, ವಿಶೇಷ ಸಾಫ್ಟವೇರ್‍ಗಳನ್ನು ಅಳವಡಿಸುವ ನಿಟ್ಟಿನಲ್ಲಿಯೂ ಕ್ರಮ ಜರುಗಿಸಲಾಗುತ್ತಿದೆ, ಆನಲೈನ್ ಮೂಲಕ ದಂಡ ವಿಧಿಸುವ ವ್ಯವಸ್ಥೆಯನ್ನು ಶೀಘ್ರದಲ್ಲಿಯೇ ಅಳವಡಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದು ವಿವರಿಸಿದರು.ವಿನಾಕಾರಣ ಕರ್ಕಶವಾದ ಹಾರ್ನ್, ಸೈಲೆನ್ಸರ್‍ಗಳನ್ನು ಬಳಸಿ ಸಾರ್ವಜನಿಕರಿಗೆ ಕಿರಿಕಿರಿಯಾಗಿ ಶಬ್ದ ಮಾಲಿನ್ಯ ಉಂಟು ಮಾಡುವುದನ್ನು ಇಲಾಖೆ ಸಹಿಸುವುದಿಲ್ಲ, ಅಂತಹ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು, ಈ ಹಿಂದೆಯೂ ಈ ರೀತಿಯ ಅಭಿಯಾನ ನಡೆಸಿ ಆ ರೀತಿಯ ಸೆಲೈನ್ಸ್ರ್‍ಗಳನ್ನು ಪುಡಿ ಮಾಡಲಾಗಿತ್ತು ಎಂದು ವಿವರಿಸಿದರು.