ಆನಂದ ಬುದ್ದ ವಿಹಾರದಲ್ಲಿ ಗುರು ಪೂರ್ಣಿಮೆ ಆಚರಣೆ

ಕೆಂಭಾವಿ:ಜು.5:ವಿಶ್ವದ ಶ್ರೇಷ್ಠ ದಾರ್ಶನಿಕ
ಗೌತಮ ಬುದ್ಧರು ಸಾರನಾಥದಲ್ಲಿ ಪ್ರಪ್ರಥಮವಾಗಿ ಧರ್ಮೋಪದೇಶ ಮಾಡಿದ ದಿನವೇ ಬೌದ್ಧ ಪೂರ್ಣಿಮೆಯೆಂದು ಕರೆಯುತ್ತಾರೆ ಎಂದು ಮಲ್ಲಿಕಾರ್ಜುನ ಕಟ್ಟಿಮನಿ ಹೇಳಿದರು.
ಪಟ್ಟಣದ ಆನಂದ ಬುದ್ಧ ವಿಹಾರದಲ್ಲಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಹುಣ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತ್ರಿ ಸರಣ ಪಂಚ ಶೀಲ ತತ್ವ ಭೋದಿಸಿದರು.

ಟ್ರಸ್ಟ್ ನ ಅಧ್ಯಕ್ಷ ಲಾಲಪ್ಪ ಹೊಸ್ಮನಿ ಮಾತನಾಡಿ ಹಿಂದು ಧರ್ಮದ ಎಲ್ಲಾ ಆಧ್ಯಾತ್ಮಿಕ ಪರಂಪರೆಯಲ್ಲಿ ಈ ದಿನ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತಾ ಗುರು ಪೂರ್ಣಿಮೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ ಎಂದರು.

ಶಿವಶಿರಣಪ್ಪ ವಾಡಿ, ದರ್ಮಣ ಬಡಿಗೇರ, ಬಸವಣ್ಣೆಪ್ಪ ಆರ್ ಮಾಳಳ್ಳಿಕರ್, ಸಂಗಣ್ಣ ಚೀಚೊಳಿ ,ರಾಯಪ್ಪ ಕರಡ್ಕಲ, ಪರಶುರಾಮ ಮಾಳಳ್ಳಿಕರ್, ಖಂಡಪ್ಪ ಯಾಳಗಿ, ಬಸವರಾಜ ಯಡಿಯಾಪೂರ, ಗೋಪಾಲ ವಂದಗನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.