ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.16 : “ಲೋಕೋದ್ಧಾರ ಮತ್ತು ಆತ್ಮೋದ್ದಾರದ ಸೌಹಾರ್ದಯುತ ಬದುಕಿಗೆ ಪ್ರೇರಕ ಶಕ್ತಿ ‘ಆಧ್ಯಾತ್ಮಿಕ”ಯಾಗಿದೆ ಎಂದು ಹಿಮಾಲಯದ ಶಿವಧ್ಯಾನ ಯೋಗಿ ನಿರಂಜನ ಸ್ವಾಮಿ ಹೇಳಿದರು.
ನಗರದ ಶ್ರೀನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಬಸವ ಬಳಗ ಟ್ರಸ್ಟ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ “ವಿಶ್ವಗುರು ಬಸವೇಶ್ವರ” ಜಯಂತಿ ಹಾಗೂ “ಸಾಮೂಹಿಕ ಭಜನೆ ಹಾಗೂ ಆಧ್ಯಾತ್ಮಿಕ ಪ್ರವಚನ”ದಲ್ಲಿ ಮಾತನಾಡಿದರು.
ದೇವಸ್ಥಾನದ ಸಭಾಂಗಣದಲ್ಲಿ ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ಉಸಿರಾಟದ ಜೋಡುಗಳು ಮತ್ತು ಗ್ರಂಥಿಗಳ ವಿವಿಧ ಆಸನಗಳು, ಧ್ಯಾನದವಿಧಿಗಳು ಕುರಿತು ಪ್ರತ್ಯಾಕ್ಷಿಕೆ ಹೇಳಿಕೊಟ್ಟರು. ಡಾ.ಎಚ್.ಎಂ.ಶಿವಕುಮಾರ ಅವರ ನಿವಾಸದಲ್ಲಿ ಸಾಮೂಹಿಕ ಇಷ್ಟ ಲಿಂಗ ಪೂಜೆ ನೆರವೆರಿಸಿದರು. ಬಸವ ಮತ್ತು ಅಕ್ಕನ ಬಳದ ಸದಸ್ಯರು ಇದ್ದರು.